ಅಲ್ಪಾವಧಿ ಬೆಳೆಯಿಂದ ಆದಾಯ ವೃದ್ಧಿ
ಚೆಂಡು ಹೂ ಕೃಷಿಯಲ್ಲಿ ತೊಡಗಲು ರೈತರಿಗೆ ಅಲ್ಲಾಪುರ ಸಲಹೆ
Team Udayavani, Nov 2, 2020, 4:53 PM IST
ಸಿಂದಗಿ: ಚೆಂಡು ಹೂವು ಅಲ್ಪಾವಧಿ ತೋಟಗಾರಿಕೆ ಬೆಳೆಯಾಗಿದ್ದು ಉತ್ತಮ ಆದಾಯ ತರುವ ಬೆಳೆಯಾಗಿದೆ. ಆದ್ದರಿಂದ ಅಲ್ಪಾವಧಿ ಬೆಳೆಗಳ ಬಗ್ಗೆ ರೈತರು ತಿಳಿದು ಬೆಳೆಯಲು ಆಸಕ್ತಿ ಹೊಂದಬೇಕು ಎಂದು ಪುಣೆಯ ರಾಷ್ಟ್ರೀಯ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಂಶೋಧನಾ ಕೇಂದ್ರದ ನಿರ್ದೇಶಕ ಅಶೋಕ ಅಲ್ಲಾಪುರ ಹೇಳಿದರು.
ರವಿವಾರ ತಾಲೂಕಿನ ಬಂದಾಳ ವೀರೂಪಾಕ್ಷಯ್ಯ ಮಠ ಅವರ ತೋಟದಲ್ಲಿ ಕೃಷಿ ಇಲಾಖೆ ಮತ್ತು ತಾಲೂಕಿನ ಹರನಾಳ ಗ್ರಾಮದ ಪರಮಾನಂದ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡ ಚೆಂಡು ಹೂಕ್ಷೇತ್ರೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಸರಾ ಮತ್ತು ದೀಪಾವಳಿ ಹಬ್ಬಗಳಲ್ಲಿ ಚೆಂಡುಹೂವಿನ ಬೇಡಿಕೆ ಹೆಚ್ಚಿದ್ದು ಚೆಂಡು ಹೂ ಬೆಳೆದು ಉತ್ತಮ ಸಂಪಾದನೆ ಮಾಡಬಹುದು. ಚೆಂಡುಹೂವನ್ನು ವರ್ಷವಿಡಿ ಬೆಳೆಯಬಹುದಾದರೂಮೇ-ಜುಲೈ 31ರವರೆಗೆ ಬೆಳೆದ ಬೆಳೆ ಹೆಚ್ಚುಇಳುವರಿ ಕೊಡುತ್ತದೆ. ಹಬ್ಬಗಳಲ್ಲಿ ಉತ್ತಮ ದರವೂ ಸಿಗುತ್ತದೆ ಎಂದು ಹೇಳಿದರು.
ಕೆಡಿಪಿ ಸದಸ್ಯ ಶಿವಕುಮಾರ ಬಿರಾದಾರ ಮಾತನಾಡಿ, ಚೆಂಡು ಹೂ ಕೃಷಿ ಉತ್ತಮ ಆದಾಯ ತರುವ ಅಲ್ಪಾವಧಿ ಬೆಳೆಯಾಗಿದೆ. ಸಸಿ ನಾಟಿ ಮಾಡಿದ 45 ದಿನಗಳ ನಂತರ ಹೂವು ಬಿಡಲು ಪ್ರಾರಂಭವಾಗುತ್ತವೆ. ಒಳ್ಳೆಯ ಬೆಳೆ ಬಂದರೆ ಸುಮಾರು ಎರಡುವರೆ ತಿಂಗಳುಗಳವರೆಗೆ ಹೂವನ್ನು ಕಟಾವು ಮಾಡಬಹುದು. ಪ್ರತಿ ಎರಡು ಅಥವಾ ಮೂರು ದಿನಗಳಿಗೊಮ್ಮೆ ಹೂ ಕಟಾವು ಮಾಡಲಾಗುತ್ತದೆ. ಸರಾಸರಿ ಒಂದು ಗಿಡಕ್ಕೆ 2 ಕೆಜಿಯಂತೆ ಒಂದು ಎಕರೆಗೆ 8ರಿಂದ 10 ಟನ್ ಚೆಂಡು ಹೂ ಸಿಗುತ್ತದೆ. ಪ್ರತಿ ಎಕರೆಗೆ ಬೆಳೆಯುವ ಕಬ್ಬಿನ, ತೊಗರಿ ಸೇರಿದಂತೆ ಮುಂತಾದ ವಾರ್ಷಿಕ ಬೆಳೆಗಿಂತ ಚೆಂಡು ಹೂವು ಬೆಳೆ ರೈತರಿಗೆ ಉತ್ತಮ ಆದಾಯ ನೀಡುತ್ತಿದೆ ಎಂದು ಹೇಳಿದರು.
ವಿಜಯಪುರ ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಮಹಾದೇವ ಅಂಬಲಿ ಮಾತನಾಡಿ, ಸಾವಯುವ ಕೃಷಿ ಅಳವಡಿಕೆ ಮತ್ತು ದೃಢೀಕರಣ ಯೋಜನೆಯಲ್ಲಿ ಫಲಾನುಭವಿ ರೈತರಿಗೆ ಜೀವಸಾರ ಘಟಕ ಮಾಡಿಕೊಡಲಾಗುವುದು. ಸಾವಯವ ಕೃಷಿಗೆ ಅನುಕೂಲವಾಗುವ ಘಟಕದ ಸಹಾಯವನ್ನು ಇಲಾಖೆಯಿಂದ ಒದಗಿಸಿಕೊಡಲಾಗುವುದು. ನಮ್ಮ ಭಾಗದಲ್ಲಿ ಎರಡು 130 ಎಕರೆ ಪ್ರದೇಶದಲ್ಲಿಚೆಂಡು ಹೂ ಒಪ್ಪಂದ ಕೃಷಿಯಲ್ಲಿ ಬೆಳೆಯಲಾಗಿದೆ. ಇತ್ತೀಚೆಗೆ ಹವಾಮಾನ ವೈಪರಿತ್ಯದಿಂದ ಸತತ ಮಂಜಿನಿಂದ ಬೆಳೆದ ಹೂಗಳಲ್ಲಿ ಕಪ್ಪು ಬಣ್ಣ ಮೂಡಿ ಇಳುವರಿ ಕುಂಠಿತವಾಗಿದೆ. ಆದ್ದರಿಂದ ಚೆಂಡು ಹೂ ಬೆಳೆಗಾರರಿಗೆ ಸರ್ಕಾರ ಪರಿಹಾರ ನೀಡಿದಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಿದರು.
ವಿಜಯಪುರ ಆಗ್ರೋ ಫೇಡರೇಷನ್ ನಿರ್ದೇಶಕಿ ಶೈಲಜಾ ಸ್ಥಾವರಮಠ ಮಾತನಾಡಿ, ಜಮೀನಿನಲ್ಲಿ ಸಾವಯವ ಕೃಷಿ ಅಳವಡಿಕೆ ಮತ್ತು ದೃಢೀಕರಣ ಯೋಜನೆಯಲ್ಲಿ ಜೀವಸಾರ ಘಟಕ ಮಾಡಿಕೊಂಡಿದ್ದೇನೆ. ಜಮೀನಿನಲ್ಲಿ ಬಾಳೆ, ಚೆಂಡು ಬೆಳೆಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಪುಣೆಯ ರಾಷ್ಟ್ರೀಯ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಂಶೋಧನಾ ಕೇಂದ್ರದನಿರ್ದೇಶಕ ಅಶೋಕ ಅಲ್ಲಾಪುರ ಮತ್ತು ಕೆಡಿಪಿನೂತನ ಸದಸ್ಯ ಶಿವುಕುಮಾರ ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ರೈತರಾದ ಸಂಜೀವ ಮಠ, ಸಿದ್ದಲಿಂಗ ನಾಯ್ಕೋಡಿ, ವೀರೂಪಾಕ್ಷಯ್ಯ ಮಠ, ವೀರಭದ್ರಯ್ಯ ಹಿರೇಮಠ, ಗೋಲ್ಲಾಳಪ್ಪ ಮುರಗಾನೂರ, ಮಂಜುನಾಥ ಬಡಿಗೇರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.