ನಿರ್ಜೀವ ಸಕ್ಕರೆ ಕಾರ್ಖಾನೆಗೆ ಮರುಜೀವ
Team Udayavani, Oct 17, 2017, 1:09 PM IST
ವಿಜಯಪುರ: ನಾಲ್ಕೈದು ದಶಕಗಳ ಹಿಂದೆ ವಿಜಯಪುರ ಜಿಲ್ಲೆಯಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಕನಸಿನೊಂದಿಗೆ ರೈತರ ಷೇರು ಸಂಗ್ರಹ, ಲೈಸೆನ್ಸ್ ಸಹಿತ ಜನ್ಮತಳೆದಿದ್ದ ಭೀಮಾ ಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಹಲವು ಕಾರಣಗಳಿಂದ ಸಂಪೂರ್ಣ ರದ್ದಾಗಿತ್ತು. ಇದೀಗ ರಾಜಕೀಯ ಇಚ್ಛಾಶಕ್ತಿ ಹಾಗೂ ರೈತರ ಸಹಕಾರ, ಸರ್ಕಾರದ ನೆರವಿನ ಫಲವಾಗಿ ಮುಚ್ಚಿಹೋಗಿದ್ದ ಈ ಸಹಕಾರಿ ಸಕ್ಕರೆ ಕಾರ್ಖಾನೆ ಮರುಜೀವ ಪಡೆದಿದೆ.
ಕುಡಿಯುವ ನೀರಿಗೂ ತತ್ವಾರ ಎದುರಿಸುವ ಮೂಲಕ ಭೀಕರ ಬರಕ್ಕೆ ಹೆಸರಾಗಿರುವ ವಿಜಯಪುರ ಜಿಲ್ಲೆಯ ರೈತರು ಕಠಿಣ ಪರಿಶ್ರಮದ ಫಲವಾಗಿ ಕಬ್ಬು ಬೆಳೆಯುತ್ತಿದ್ದಾರೆ. ಪರಿಣಾಮ ಇಂಡಿ, ಸಿಂದಗಿ ಭಾಗದಲ್ಲಿ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರದ ರಾಜಕೀಯ ನಾಯಕರ ಮಾಲೀಕತ್ವದ ನಾಲ್ಕೆಂದು ಖಾಸಗಿ ಸಕ್ಕರೆ ಕಾರ್ಖಾನೆಗಳು ಎರಡು ದಶಕಗಳಿಂದ ಇಲ್ಲಿ ಸಕ್ಕರೆ ಉತ್ಪಾದಿಸುತ್ತಿವೆ. ಜಿಲ್ಲೆಯಲ್ಲಿ ಸಹಕಾರಿ ಕ್ರಾಂತಿಯ ಫಲವಾಗಿ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಿಸುವ ಚಿಂತನೆ ಆರಂಭಗೊಂಡಾಗ ನಂದಿ ಹಾಗೂ ಭೀಮಾಶಂಕರ ಕಾರ್ಖಾನೆಗಳನ್ನು ಆರಂಭಕ್ಕೆ ನಿರ್ಧರಿಸಲಾಯಿತು. 1959ರಲ್ಲಿ ವಿಜಯಪುರ ತಾಲೂಕು ಕೃಷ್ಣಾನಗರ ಎಂಬಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಗೊಂಡು, ಈಗ ದೇಶದಲ್ಲೇ ಅತ್ಯುತ್ತಮ ಸಹಕಾರಿ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆ ಹೊಂದಿದೆ.
ಆದರೆ ಇದೇ ಅವ ಧಿಯಲ್ಲಿ ಎಸ್.ಆರ್.ನಾಖರೆ ಎಂಬುವರ ಪರಿಶ್ರಮದ ಫಲವಾಗಿ ಲೈಸೆನ್ಸ್ ಪಡೆದರೂ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಗೊಳ್ಳಲೇ ಇಲ್ಲ. ಇಂಡಿ ಹಾಗೂ ಸಿಂದಗಿ ಭಾಗದ ರೈತರು ಭೀಕರ ಬರದಲ್ಲೂ ತಲಾ ಒಂದು ಸಾವಿರ ರೂ. ಷೇರು ಹಣ ಸಂಗ್ರಹಿಸಿ, ನಂತರ ಷೇರು ಮೊತ್ತವನ್ನು ಎರಡು ಸಾವಿರ ರೂ. ಏರಿಸಿದರು. ಪರಿಣಾಮ 16,395 ಸದಸ್ಯರಿಂದ 4.61 ಕೋಟಿ ರೂ. ಷೇರು ಸಂಗ್ರಹಿಸಿ, ಇಂಡಿ ತಾಲೂಕ ಮರಗೂರು ಗ್ರಾಮದ ಬಳಿ 181 ಎಕರೆ ಪ್ರದೇಶದಲ್ಲಿ ಭೀಮಾಶಂಕರ ಕಾರ್ಖಾನೆ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಯಿತು. ಆದರೆ ಕಾರಣಾಂತರಗಳಿಂದ ಕಾರ್ಖಾನೆ ಆರಂಭಗೊಳ್ಳಲೇ ಇಲ್ಲ.
1997 ಹಾಗೂ 2001ರಲ್ಲಿ ಸರ್ಕಾರ 8.20 ಕೋಟಿ ರೂ. ಷೇರು ಬಂಡವಾಳ ನೀಡಿದರೂ ಕಾರ್ಖಾನೆ ಆರಂಭಗೊಳ್ಳಲಿಲ್ಲ. ಅಂತಿಮವಾಗಿ ಇಲ್ಲಿನ ದುಸ್ಥಿತಿ ಗಮನಿಸಿದ ಸಹಕಾರಿ ಇಲಾಖೆಯ ಬೆಳಗಾವಿ ಜಂಟಿ ಉಪ ನಿಬಂಧಕರು ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಿಸುವುದು ಅಸಾಧ್ಯ ಎಂಬ ಷರಾ ಹಾಕಿದ ಕಾರಣ ಕಾರ್ಖಾನೆ ಲೈಸೆನ್ಸ್ ರದ್ದಾಗಿ, ಲಿಕ್ವಿಡೇಶನ್ ಆಗಿತ್ತು. ಮತ್ತೂಂದೆಡೆ ಈ ಕಾರ್ಖಾನೆ ಆರಂಭದ ಕನಸು ಕಂಡಿದ್ದ ಷೇರುದಾರರು ಒಬ್ಬೊಬ್ಬರಾಗಿ ತಾವು ಕಂಡ ಕನಸು ಕೈಗೂಡದ ಕೊರಗಿನಲ್ಲೇ ಕೊನೆಯುಸಿರೆಳೆದರು. ಒಂದು ಹಂತದಲ್ಲಿ ಈ ಕಾರ್ಖಾನೆ ಖಾಸಗಿ ಕೈವಶ ಆಗುವ ಹಂತಕ್ಕೆ ಹೋದರೂ ರೈತರು ಮಾತ್ರ ಜಗ್ಗಲಿಲ್ಲ. ರೈತರೆಲ್ಲ ಒಗ್ಗೂಡಿ ಹೈಕೋರ್ಟ್, ಸುಪ್ರೀಂಕೋಟ್ ವರೆಗೆ ಹೋರಾಡಿ ಕಾರ್ಖಾನೆ ಆರಂಭಿಸುವ ತಮ್ಮ ಕನಸು ಜೀವಂತ ಇರಿಸಿಕೊಂಡಿದ್ದರು.
2013ರಲ್ಲಿ ಇಂಡಿ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ಅಭ್ಯರ್ಥಿ ಯಶವಂತರಾಯಗೌಡ ಈ ಕುರಿತು ಚುನಾವಣೆ ಭರವಸೆ ನೀಡಿದ್ದರು. ಹೀಗಾಗಿ ಕಾಂಗ್ರೆಸ್ ಸರ್ಕಾರ 2013, ನ.13ರಂದು ಲಿಕ್ವಿಡೇಶನ್ ರದ್ದು ಮಾಡಿದ್ದಲ್ಲದೆ, ನೆರವಿಗಾಗಿ ಕೇವಲ 37 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದರೂ 39 ಕೋಟಿ ರೂ. ಕೊಟ್ಟು, ಆಡಳಿತಾಧಿ ಕಾರಿಯನ್ನೂ ನೇಮಿಸಿತು. ಅಪೆಕ್ಸ್ ಬ್ಯಾಂಕ್, ವಿಜಯಪುರ, ಬಾಗಲಕೋಟೆ, ಶಿರಸಿ ಡಿಸಿಸಿ ಬ್ಯಾಂಕ್‌ಗಳಿಂದ ಸಾಲ ತಂದು ಸುಮಾರು 156 ಕೋಟಿ ರೂ. ಮೊತ್ತ ಖರ್ಚು ಮಾಡಲಾಗಿದೆ.
ಜಪಾನ್ ದೇಶದ ಆಧುನಿಕ ತಂತ್ರಜ್ಞಾನದ ಯತ್ರೋಪಕರಣಗಳ ಬಳಕೆಯೊಂದಿಗೆ ಇದೀಗ ಬಾಯ್ಲರ್, ಟಬೆ„ìನ್ ಸೇರಿದಂತೆ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡಿದೆ. ಅ.24ರಂದು ಸಿಎಂ ಸಿದ್ದರಾಮಯ್ಯ ಅವರಿಂದಲೇ ಕಾರ್ಖಾನೆಯ ಕಬ್ಬು ಅರೆಯುವ ಮೊದಲ ಕಾರ್ಯಕ್ಕೆ ಚಾಲನೆ ದೊರೆಯಲಿದೆ.
ಜಿ.ಎಸ್. ಕಮತ
ಚುನಾವಣೆಯಲ್ಲಿ ಜನತೆಗೆ ಕೊಟ್ಟ ಮಾತನ್ನು ನಾನು ಉಳಿಸಿಕೊಂಡಿದ್ದು, ಈ ಭಾಗದ ರೈತರ ಪರಿಶ್ರಮದ ಫಲವಾಗಿ ಹಿರಿಯರು ಕಂಡ ಕನಸು ನನಸಾಗುತ್ತಿದೆ. ಇದರ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರದ ಒತ್ತಾಸೆ, ರೈತರ ಸಾಂಘಿಕ ಪ್ರಯತ್ನ, ಅವಳಿ ಜಿಲ್ಲೆಗಳ ರಾಜಕೀಯ ನಾಯಕರ ಸಹಕಾರ ಹೀಗೆ ಸಾಮಾನ್ಯರಿಂದ ದೊಡ್ಡವರವರೆಗೆ ಎಲ್ಲ ಹಂತದವರು ಕೊಡುಗೆಯೂ ಸ್ಮರಣಾರ್ಹ.
ಯಶವಂತರಾಯಗೌಡ ಪಾಟೀಲ, ಶಾಸಕ, ಇಂಡಿ ಕ್ಷೇತ್ರ
ಕೆವಿಕೆ ಆರಂಭದಲ್ಲಿ ರಾಜ್ಯ ಸರ್ಕಾರ ಪಾತ್ರವೂ ಇದೆ
ವಿಜಯಪುರ: ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಆರಂಭಗೊಂಡಿರುವ ಕೃಷಿ ವಿಜ್ಞಾನ ಕೇಂದ್ರಕ್ಕೆ ರಾಜ್ಯ ಸರ್ಕಾರದ ಪಾತ್ರ ಏನೂ ಇಲ್ಲ ಎಂದಿರುವ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರ ಹೇಳಿಕೆ ಅವಾಸ್ತವ. ಕೇಂದ್ರ ಆರಂಭಕ್ಕೆ ರಾಜ್ಯ ಸರ್ಕಾರ ಪ್ರಸಕ್ತ ಸಂದರ್ಭದಲ್ಲಿ ದುಬಾರಿ ಬೆಲೆಯ 53 ಎಕರೆ ಜಮೀನು ನೀಡಿದೆ ಎಂಬುವುದನ್ನು ಮರೆತಿದ್ದಾರೆ ಎಂದು ಇಂಡಿ ಶಾಸಕ ಯಶವಂತರಾಯಗೌಡ
ಪಾಟೀಲ ತಿರುಗೇಟು ನೀಡಿದ್ದಾರೆ. ಸೋಮವಾರ ಮರಗೂರು ಗ್ರಾಮದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೃಷಿ ವಿಜ್ಞಾನ ಕೇಂದ್ರ ಆರಂಭಕ್ಕೆ ಅನುಮತಿ ನೀಡಿದ್ದರೂ ಅದಕ್ಕೆ ಸ್ಥಳ ನೀಡಿದ್ದು ರಾಜ್ಯ ಸರ್ಕಾರ.
ಪ್ರಸಕ್ತ ಸಂದರ್ಭದಲ್ಲಿ ಎಕರೆಗೆ 1 ಕೋಟಿ ರೂ. ಅಧಿಕ ಬೆಲೆ ಬಾಳುವ ಕೃಷಿ ಫಾರ್ಮನ ಭೂಮಿಯನ್ನು ನೀಡಿದ್ದೆ ರಾಜ್ಯ ಸರ್ಕಾರ. ಒಂದೊಮ್ಮೆ ಕೇಂದ್ರ ಸಚಿವರಿಗೆ ನಿಜಕ್ಕೂ ಸಾಮರ್ಥ್ಯ ಇದ್ದಲ್ಲಿ, ರಾಜ್ಯ ಸರ್ಕಾರ ನೀಡಿರುವ ಈ ಭೂಮಿಯನ್ನು ರಳಿ ಕೊಟ್ಟು, ಕೇಂದ್ರದ ಅನುದಾನದಲ್ಲೇ ಭೂಮಿಕೊಡು ಕೃಷಿ ವಿಜ್ಞಾನ ಸ್ಥಾಪಿಸಲಿ ಎಂದು ಸವಾಲು ಹಾಕಿದರು.
ಕೃಷಿ ವಿಜ್ಞಾನ ಕೇಂದ್ರಕ್ಕೆ ಸದರಿ ಜಮೀನು ನೀಡಿರುವ ಕಾರಣ ರಾಜ್ಯದ ಲಿಂಬೆ ಅಭಿವೃದ್ಧಿ ಮಂಡಳಿ ಇಂಡಿ ಪಟ್ಟಣದಲ್ಲೇ ಆರಂಭಗೊಳ್ಳುತ್ತಿರುವ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಈ ಮಂಡಳಿ ಸ್ಥಾಪನೆಗೆ ಸ್ಥಳ ಇಲ್ಲದಂತಾಗಿದೆ. ರಾಜ್ಯ
ಸರ್ಕಾರ ಮಂಡಳಿ ಸ್ಥಾಪನೆಗೆ 1 ಕೋಟಿ ರೂ. ಅನುದಾನನ್ನೂ ನೀಡಿದೆ. ಹೀಗಾಗಿ ತಾತ್ಕಾಲಿಕವಾಗಿ ನೂತನವಾಗಿ ಉದ್ಘಾಟನೆಗೊಳ್ಳಲಿರುವ ಮಿನಿ ವಿಧಾನಸೌಧದಲ್ಲಿ ಮಂಡಳಿ ಕಚೇರಿ ತೆರೆಯುತ್ತಿದ್ದೇವೆ. ಒಂದೊಮ್ಮೆ ಕೇಂದ್ರ ಸರ್ಕಾರದಲ್ಲಿ ಪ್ರಭಾವಿಗಳಾಗಿರುವ ಸಚಿವ ರಮೇಶ ಜಿಗಜಿಣಗಿ ಅವರು ಕೇಂದ್ರ ಸರ್ಕಾರದ ಕೃಷಿ ವಿಜ್ಞಾನ ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ಪಡೆದಿರುವ 53 ಎಕರೆ ಜಮೀನನ್ನು ಮರಳಿಸಿದಲ್ಲಿ, ಅಲ್ಲಿಯೇ ಲಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿಸಲು ನೆರವಾಗುತ್ತದೆ ಎಂದು ಯಶವಂತರಾಯಗೌಡ ಕುಟುಕಿದ್ದಾರೆ.
ಇದಲ್ಲದೇ ಇಂಡಿ ತಾಲೂಕಿನ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗೆ ಕೇಂದ್ರ-ರಾಜ್ಯ ಸರ್ಕಾರದ ಪಾಲು ತಲಾ ಶೇ. 50ರಷ್ಟು ಅನುದಾನ ಇದ್ದು, ಯೋಜನೆ ರೂಪಿಸುವ, ಕ್ರಿಯಾಯೋಜನೆ ತಯಾರಿಸುವ, ಅನುಷ್ಠಾನದ ಅಧಿಕಾರ ಹೊಂದಿರುವುದು ರಾಜ್ಯ ಸರ್ಕಾರ. ಹೀಗಿದ್ದರೂ ಕೇಂದ್ರ ಸಚಿವ ಜಿಗಜಿಣಗಿ ಅವರು ಕೇಂದ್ರದ ಪಾಲು ಶೇ. 60, ರಾಜ್ಯದ ಪಾಲು ಶೇ. 40ರಷ್ಟು ಎಂದು ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಕೇಂದ್ರ ಸಚಿವರಿಗೆ ನಿಜಕ್ಕೂ ಈ ವಿಷಯದಲ್ಲಿ ಅವರಿಗೆ ಸೂಕ್ತ ಮಾಹಿತಿ ಇಲ್ಲವೋ ಅಥವಾ ಉದ್ದೇಶಪೂರ್ವಕವಾಗಿ ಸುಳ್ಳು ಹೇಳುತ್ತಿದ್ದಾರೋ ತಿಳಿಯದಾಗಿದೆ ಎಂದೂ ವ್ಯಂಗ್ಯವಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.