ಕಂದಾಯ ಇಲಾಖೆ ಪಾತ್ರ ಅನನ್ಯ: ರಾಹುಲ್ ಶಿಂಧೆ
Team Udayavani, Jul 2, 2021, 6:47 PM IST
ಇಂಡಿ: ಸರಕಾರದ ಯೋಜನೆಗಳು ಅನುಷ್ಠಾನಗೊಳಿ ಸುವಲ್ಲಿ ಕಂದಾಯ ಇಲಾಖೆ ಪ್ರಮುಖ ಪಾತ್ರ ವಹಿಸು ತ್ತದೆ. ಕೋವಿಡ್, ನೆರೆ ಹಾವಳಿಯಂತಹ ಅನೇಕ ಕಾರ್ಯಗಳಲ್ಲಿ ಕಂದಾಯ ಇಲಾಖೆಯ ಪಾತ್ರ ಮಹತ್ವದ್ದು, ಈ ಇಲಾಖೆ ಬ್ರಿಟಿಷರ ಕಾಲದಲ್ಲಿಯೂ ಇತ್ತು ಎಂದು ಉಪವಿಭಾಗಾಧಿ ಕಾರಿ ರಾಹುಲ್ ಶಿಂಧೆ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಕಂದಾಯ ಇಲಾಖೆಯ ದಿನಾಚರಣೆ ಮತ್ತು ಹಸಿರೋತ್ಸವ ಕಾರ್ಯಕ್ರಮದಲ್ಲಿ ಮಿನಿ ವಿಧಾನ ಸೌಧ ಆವರಣದಲ್ಲಿ 25 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂಡಿ ನಗರವನ್ನು ಹಸರೀಕರಣ ಮಾಡುವ ಉದ್ದೇಶದಿಂದ ದೀರ್ಘಕಾಲ ಉಳಿಯುವ, ವಾತಾವರಣಕ್ಕೆ ಹೆಚ್ಚು ಆಮ್ಲಜನಕ ನೀಡುವ ಸಸಿ ನೆಟ್ಟು ಪೋಷಿಸುವ ಕಾರ್ಯಕ್ಕೆ ಇಲಾಖೆ ಮುಂದಾಗಿದೆ ಎಂದರು.
ತಹಶೀಲ್ದಾರ್ ಚಿದಂಬರ್ ಕುಲಕರ್ಣಿ, ರಮೇಶ ರೇವಡಿಗಾರ, ವಿ.ಎಚ್. ಬಣಕಾರ, ಬಸವರಾಜ ರಾವೂರ, ಎಸ್.ಎಸ್. ಪೂಜಾರಿ, ಎಚ್.ಎಚ್. ಗುನ್ನಾಪುರ, ಸಂಕೇತ ಪಾಟೀಲ, ಸಂತೋಷ ಹೊಟಕರ, ಎ.ಎಸ್.ಗೊಟ್ಯಾಳ, ಗ್ರಾಮಲೆಕ್ಕಾ ಧಿಕಾರಿಗಳು ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.