ಪುರಸಭೆಯಿಂದ 25.90 ಲಕ್ಷ ರೂ. ಉಳಿತಾಯ ಬಜೆಟ್
Team Udayavani, Mar 3, 2019, 9:57 AM IST
ಬಸವನಬಾಗೇವಾಡಿ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶನಿವಾರ ಜರುಗಿದ 2019-20ನೇ ಸಾಲಿನ ಬಜೆಟ್ ಮಂಡನಾ ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಪರಜಾನ್ ಚೌಧರಿ 25.90 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು. ವಿವಿಧ ಮೂಲಗಳಿಂದ 19.13 ಕೋಟಿ ರೂ.ಬರಲಿದೆ. ಅದರಲ್ಲಿ ಒಟ್ಟು 18.87 ಕೋಟಿ ರೂ. ಖರ್ಚು ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜನದಟ್ಟಣೆ ಕಡಿಮೆ ಮಾಡುವುದಕ್ಕಾಗಿ ಪ್ಲೈಓವರ್ ನಿರ್ಮಾಣಕ್ಕಾಗಿ 50 ಲಕ್ಷ ರೂ., ಉದ್ಯಾನಗಳ ಅಭಿವೃದ್ಧಿಗಾಗಿ 1 ಕೋಟಿ ರೂ., ವಿಧೆಡೆ ಮೂತ್ರಾಲಯ ನಿರ್ಮಾಣಕ್ಕಾಗಿ 50 ಲಕ್ಷ, ಡಾಪಟುಗಳಿಗಾಗಿ ಸ್ವಿಮಿಂಗ್ ಫೂಲ್, ಒಳ ಕ್ರೀಡಾಂಗಣ ನಿರ್ಮಾಣ ಸೇರಿದಂತೆ
ಕ್ರೀಡಾ ಕಾರ್ಯಕ್ರಮಗಳಿಗಾಗಿ 1 ಕೋಟಿ, ಮೆಗಾ ಮಾರುಕಟ್ಟೆಗೆ 5 ಕೋಟಿ, ಇಂಗಳೇಶ್ವರ, ಆಲಮಟ್ಟಿ ರಸ್ತೆಯ ದ್ವಿಪಥ ರಸ್ತೆಗೆ ವಿದ್ಯುದ್ದೀಕರಣಕ್ಕಾಗಿ 30 ಲಕ್ಷ, ಎಲೆಕ್ಟ್ರಾನಿಕ್ ಜಾಹೀರಾತು ಫಲಕಗಳಿಗಾಗಿ 25 ಲಕ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಶಿಷ್ಯ ವೇತನಕ್ಕಾಗಿ 5 ಲಕ್ಷ, ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳುವವರಿಗೆ ಸಹಾಯ ಧನಕ್ಕಾಗಿ 5 ಲಕ್ಷ ರೂ. ಹಾಗೂ ಸಿಸಿ ರಸ್ತೆ, ಹೈಮಾಸ್ಕ್ವಿ ದ್ಯುತ್ ಕಂಬಗಳ ಅಳವಡಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಹಣ ಕಾಯ್ದಿರಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷರು ತಿಳಿಸಿದರು.
ಪಟ್ಟಣದ ಅಂಬಾಭವಾನಿ ದೇವಸ್ಥಾನ ಸೇರಿದಂತೆ ವಿವಿಧ ಬಡವಾಣೆಗಳಲ್ಲಿ ಹೈಮಾಸ್ಕ್ ವಿದ್ಯುತ್ ಕಂಬ ಅಳವಡಿಸಬೇಕು. ಅಲ್ಲದೇ ಹೊಸ ಕೊಳವೆ ಬಾವಿ ಹಾಕಿಸಬೇಕು ಎಂದು ಪುರಸಭೆ ಸದಸ್ಯರಾದ ಪರಶುರಾಮ ಅಡಗಿಮನಿ, ಮುದುಕು ಬಸರಕೋಡ ಆಗ್ರಹಿಸಿದರು.
ಸಭೆಯಲ್ಲಿ ಇಂಗಳೇಶ್ವರ ರಸ್ತೆಯಲ್ಲಿನ ಯಳಮೇಲಿ ಅವರ ಹೊಸ ಬಡಾವಣೆಗೆ ಅನುಮೋದನೆ ನೀಡುವುದಕ್ಕಾಗಿ ಠರಾವು ಪಾಸ್ ಮಾಡಲಾಯಿತು. ಮಾಜಿ ಸೈನಿಕರ ಸಮುದಾಯ ಭವನ ಹಾಗೂ ಪತ್ರಿಕಾ ಭವನ ನಿಮಾಣಕ್ಕಾಗಿ ನಿವೇಶನ ನೀಡುವ ಕುರಿತು ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ಶ್ರೀದೇವಿ ಲಮಾಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತು ಉಕ್ಕಲಿ, ಸದಸ್ಯರಾದ ನಜೀರ್ ಗಣಿ, ಸಂಜೀವ್ ಕಲ್ಯಾಣಿ, ನೀಲಪ್ಪ ನಾಯಕ, ಪ್ರವೀಣ ಪವಾರ, ಸಂಗನಬಸು ಪೂಜಾರಿ, ಮುತ್ತು ಕಿಣಗಿ, ಕಮಲಸಾಬ್ ಕೊರಬು, ಮುರುಗೇಶ ನಾಯ್ಕೋಡಿ,
ಬಸವರಾಜ ತುಂಬಗಿ, ಸತ್ಯವ್ವ ಕೋಳೂರ, ಬೋರಮ್ಮ ಜೀರ್, ಪುರಸಭೆ ಮುಖ್ಯಾಧಿಕಾರಿ ಬಿ.ಎ. ಸೌದಾಗರ, ಸಿದ್ದಾರ್ಥ ಕಳ್ಳಿಮನಿ, ಗುರುರಾಜ ಮಾಗಾವಿ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
MUST WATCH
ಹೊಸ ಸೇರ್ಪಡೆ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.