ಸ್ವಚ್ಛ ಭಾರತ ಅಭಿಯಾನ ವೆಬ್‌ಸೈಟ್‌ಗೆ ಚಾಲನೆ
Team Udayavani, Jul 26, 2017, 12:28 PM IST
ವಿಜಯಪುರ: ಸಮಾಜ ಸೇವೆಯಲ್ಲಿ ತೊಡಗಿದರೆ ಅದಕ್ಕಿಂದ ದೈವಿ ಕಾರ್ಯ ಮತ್ತೂಂದಿಲ್ಲ. ಅದೇ ರೀತಿ ಸಮಾಜದಲ್ಲಿ ಸ್ವಚ್ಛತೆ ಮಾಡುವುದು ಕೂಡ ದೇವರ ಕೆಲಸವೇ ಆಗಿದೆ. ಇಲ್ಲದ ದೇವರನ್ನು ಗುಡಿಯಲ್ಲಿ ಹುಡುಕದೇ ಸಮಾಜದ ಮಧ್ಯೆ ಸೇವೆಯಲ್ಲಿ ಕಾಣಬೇಕು ಎಂದು ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ಸ್ವಚ್ಛ ಭಾರತ ಅಭಿಯಾನದ ಮಾಹಿತಿಯ ಕುರಿತು ನೂತನವಾಗಿ ರಚಿಸಿರುವ ಜಾಲತಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 266 ದಿನಗಳ ಕಾಲ ನಿತ್ಯವೂ 2 ಗಂಟೆ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಶಾಲಾ ಕಾಲೇಜು, ಕಚೇರಿಗಳು, ಗಾರ್ಡನ್‌ಗಳು, ನಗರದ ಕಾಲೋನಿಗಳಲ್ಲಿ, ದೇವಾಲಯಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸುಮಾರು 88 ಸದಸ್ಯರ ಸಚ್ಛ ಭಾರತ ಕಾರ್ಯ ರೂಪಿಸಿ, ಅನುಷ್ಠಾನಕ್ಕೆ ತಂದಿದೆ. ತಮ್ಮ ಕಾರ್ಯ ಚಟಿಕೆ ಕುರಿತು ಅಂತರ್ಜಾಲದಲ್ಲಿ ಅಳವಡಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನ ರೂಪುರೇಷೆಗಳ ಮಾಹಿತಿ ನೀಡುವ ಕೆಲಸ ಮಾಡುತ್ತಿದೆ ಎಂದರು.
ಸ್ವಚ್ಛ ಭಾರತ ಅಭಿಮಾನ ತಂಡದ ಈ ಕಾರ್ಯ ಅನುಕರಣೀಯವಾಗಿದ್ದು, ಕಸದಿಂದ ರಸ ತೆಗೆಯುವ ಕೆಲಸ ಮಾಡುತ್ತಿರುವ ಅಭಿಯಾನದ ತಂಡ ನಗರ-ಹಳ್ಳಿಗಳ ಜನತೆಗೆ ಪರಿಸರ ಸ್ವಚ್ಛತೆ ಮಾಡಿ, ಜಾಗೃತಿ ಕೆಲಸ ಮಾಡುತ್ತಿದೆ. ಭವಿಷ್ಯದಲ್ಲಿ ಈ ತಂಡ ಹಾಗೂ ಅಂತರ್ಜಾಲದ ಮಾಹಿತಿ ದೇಶಕ್ಕೆ ಮಾದರಿ ಆಗಲಿ ಎಂದರು.
ಮಹಾನಗರ ಪಾಲಿಕೆ ಸದಸ್ಯರೂ ಆಗಿರುವ ಸ್ವತ್ಛ ಭಾರತ ಯೋಜನೆ ತಂಡದ ನಾಯಕ ಉಮೇಶ ವಂದಾಲ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಮೂಲೆಯಲ್ಲಿ ಕೊಳಚೆ ಸ್ಥಳ ಕಂಡುಬಂದಲ್ಲಿ ಅದರ ಕುರಿತು ನಮ್ಮ ವೆಬ್‌ಸೈಟ್‌ಗೆ ಮಾಹಿತಿ ನೀಡಿದರೆ ನಮ್ಮ ತಂಡ ತಕ್ಷಣ ಸ್ವಚ್ಛತಾ ಕಾರ್ಯಕ್ಕೆ ಕಾರ್ಯೋನ್ಮುಖವಾಗಲಿದೆ. ಜಿಲ್ಲೆಯ ಜನರು www. swachhvijayapurabhiyan.org ನಲ್ಲಿ ತಮ್ಮ ಮಾಹಿತಿ ನೀಡಿ ಹಾಗೂ ನಮ್ಮ ತಂಡದೊಂದಿಗೆ ಸೇರಿ ಸಮಾಜದಲ್ಲಿ ಶುದ್ಧ ಪರಿಸರ ನಿರ್ಮಿಸುವ ನಮ್ಮ ಯೋಜನೆ ಹಾಗೂ ಯೋಚನೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.