ಸಿದ್ದರಾಮಯ್ಯ ಹೇಳಿಕೆಗೆ ಮನಗೂಳಿ ಸಂಗನಬಸವಶ್ರೀ ಕಿಡಿ; ಬಹಿಷ್ಕಾರದ ಬೆದರಿಕೆ
Team Udayavani, Mar 26, 2022, 1:16 PM IST
ವಿಜಯಪುರ: ಮುಖ್ಯಮಂತ್ರಿ ಆಗಿದ್ದಾಗ ರಾಜಕೀಯ ಕಾರಣಗಳಿಗೆ ವೀರಶೈವ-ಲಿಂಗಾಯತ ಎಂದು ಧರ್ಮ ಒಡೆಯುವ ಕೆಲಸ ಮಾಡಿದ್ದ ಸಿದ್ಧರಾಮಯ್ಯ ಅವರು, ಇದೀಗ ಓಲೈಕೆ ಮಾತಿನ ಭರದಲ್ಲಿ ಮಠಾಧೀಶರನ್ನು ಅವಮಾನಿಸುವ ಕೆಲಸ ಮಾಡಿದ್ದಾರೆ. ತಮ್ಮ ತಪ್ಪು ತಿದ್ದುಕೊಳ್ಳದಿದ್ದಲ್ಲಿ ಭವಿಷ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಸ್ವಾಮಿಗಳು ಬಹಿಷ್ಕಾರ ಹಾಕಬೇಕಾದೀತು ಎಂದು ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶ್ರೀಗಳು ಕಿಡಿಕಾರಿದ್ದಾರೆ.
ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಠಾಧೀಶರು ಮಾಡುತ್ತಿರುವ ಕೆಲಸ ನಾಡಿನ ಜನತೆಗೆ ಗೊತ್ತಿದೆ. ವೀರಶೈವ ಧರ್ಮ ಒಡೆಯುವ ಕೆಲಸಕ್ಕೆ ಕೈಹಾಕಿ ಅಧಿಕಾರ ಕಳೆದುಕೊಂಡ ಸಿದ್ಧರಾಮಯ್ಯ ಅವರು ಇದೀಗ ಮಠಾಧೀಶರ ಬಗ್ಗೆ ಮಾತನಾಡಿದ್ದು ತಪ್ತು. ಭಾರತ ಹಿಂದೂಗಳಿರುವ ದೇಶ, ಹಿಂದೂ ಧರ್ಮ, ಸ್ವಾಮಿಗಳಿಗೆ ಅಪಮಾನ ಮಾಡಿದಲ್ಲಿ ಸಹಿಸಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ:ಡಬಲ್ ಎಂಜಿನ್ ಸರ್ಕಾರದಲ್ಲಿ ಡಬಲ್ ದೋಖಾ: ಪ್ರಿಯಾಂಕ್ ಖರ್ಗೆ ಆಕ್ರೋಶ
ಸದನದಲ್ಲಿ ಹಿಜಾಬ್ ವಿಷಯ ಬಂದಾಗ ಅನಗತ್ಯವಾಗಿ ಸ್ವಾಮಿಗಳ ಅವಹೇಳನ ಮಾಡಿರುವ ಸಿದ್ಧರಾಮಯ್ಯ ಅವರಿಗೆ ಮಠಾಧೀಶರು ಮಾಡುವ ಕೆಲಸದ ಅರಿವಿಲ್ಲ. ಅವರೇನು ಹಿಂದೂ ಇದ್ದಾರೋ- ಯಾರಿದ್ದಿರೋ ಎಂಬುದು ತಿಳಿಯದಾಗಿದೆ. ನಿಮಗೆ ಬೇರೆ ಸಮಾಜ ಬೇಕಿದ್ದರೆ ಮತ ಬ್ಯಾಂಕ್ ಕಾರಣಕ್ಕೆ ಅವರನ್ನು ಬೆಂಬಲಿಸಿ. ಆದರೆ ಅದರ ರಾಜಕೀಯ ಪ್ರೇರಿತವಾಗಿ ಹಿಜಾಬ್ ನೆಪದಲ್ಲಿ ಸ್ವಾಮಿಗಳನ್ನು ಅಪಮಾನಿಸುವ ಕೆಲಸ ಮಾಡಿದಲ್ಲಿ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.