ದೇಶಿ ಗೋವು ಉಳಿಸಿ: ಗೋಯೆಂಕಾ
Team Udayavani, Aug 5, 2018, 5:57 PM IST
ಆಲಮಟ್ಟಿ: ಸುಕ್ಷೇತ್ರ ಯಲಗೂರ ಗ್ರಾಮದಲ್ಲಿರುವ ಉತ್ತರಾದಿ ಮಠದ ಪ್ರಮೋದಾತ್ಮ ಗೋ ಸಂರಕ್ಷಣಾ ಕೇಂದ್ರದಲ್ಲಿ ಬಿಜೆಪಿಯ ರಾಜ್ಯ ಗೋ ಪ್ರಕೋಷ್ಠದ ಸಂಚಾಲಕ ಸಿದ್ದಾರ್ಥ ಗೋಯೆಂಕಾ ಅವರ ನೇತೃತ್ವದಲ್ಲಿ ಸ್ವತ್ಛತಾ ಅಭಿಯಾನ
ನಡೆಯಿತು.
ಶನಿವಾರ ಬೆಳಗ್ಗೆ ಯಲಗೂರದಲ್ಲಿರುವ ಗೋ ಸಂರಕ್ಷಣಾ ಕೇಂದ್ರಕ್ಕೆ ವಿಜಯಪುರ ಜಿಲ್ಲಾ ಘಟಕ, ಬಸವನಬಾಗೇವಾಡಿ ಹಾಗೂ ಮುದ್ದೇಬಿಹಾಳ ತಾಲೂಕಿನ ವಿವಿಧ ಮಂಡಲಗಳ ಕಾರ್ಯಕರ್ತರು ಮತ್ತು ಮುಖಂಡರು ಭಾಗವಹಿಸಿ ಸ್ವತ್ಛತಾ ಕಾರ್ಯ ನಡೆಸಿ ಸರ್ಕಾರದ ವಿಶೇಷ ಯೋಜನೆಯಾದ ಪಶು ಆರೋಗ್ಯ ಚೀಟಿ-ನಕುಲ ಸ್ವಾಸ್ಥÂ ಪತ್ರವನ್ನು ಗೋ
ಸಂರಕ್ಷಣಾ ಕೇಂದ್ರದ ಮುಖ್ಯಸ್ಥರಿಗೆ ನೀಡುವುದರ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದ ಗೋಯೆಂಕಾ, ಅಪರೂಪದ ದೇಶಿ ಗೋ ಸಂತತಿ ಅಳಿವನಂಚಿನಲ್ಲಿದೆ. ಇದರಿಂದ ರೈತ ವರ್ಗಕ್ಕೆ ಹಲವಾರು ತೊಂದರೆಗಳಾಗುತ್ತಿದ್ದು ಅದರ ಬಗ್ಗೆ ಜನಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ದೇಶಿ ಹಸುಗಳ ಹಾಲಿನಲ್ಲಿ ಡಯಾಬಿಟಿಸ್ ಸೇರಿದಂತೆ ಹಲವಾರು ರೋಗಗಳ ನಿಯಂತ್ರಣ ಹಾಗೂ ತೊಲಗಿಸುವ ಶಕ್ತಿಯಿದೆ. ಅಲ್ಲದೇ ಹಸುವಿನ ಹಾಲಿನಲ್ಲಿ ವಿಶೇಷ ಗುಣಗಳಿರುವುದರಿಂದ ಹಿಂದಿನಿಂದಲೂ ನಮ್ಮ ಪೂರ್ವಜರು ಗೋ ಸಾಕಣೆ ಮಾಡಿಕೊಂಡು ಅದರ ಹಾಲು, ಮೂತ್ರ, ಸೆಗಣಿ ಎಲ್ಲವುಗಳನ್ನು ವಿವಿಧ ರೀತಿಯಲ್ಲಿ ಬಳಸಿಕೊಂಡು ಬಂದಿದ್ದರಿಂದ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿತ್ತು ಎಂದರು.
ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ಮುದ್ದೇಬಿಹಾಳ ಕ್ಷೇತ್ರ ನದಿ ತೀರ ಹಾಗೂ ವಿವಿಧ ಮೂಲಗಳಿಂದ ಬಹುತೇಕ ನೀರಾವರಿಗೊಳಪಟ್ಟದ್ದು ಗೋ ಸಾಕಣೆಯನ್ನು ಈ ಭಾಗದಲ್ಲಿ ರೈತರು ಮಾಡುತ್ತಿದ್ದಾರೆ. ಇನ್ನಷ್ಟು ಅವರಿಗೆ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮ ಹಾಕಿಕೊಂಡು ಒಂದು ವರ್ಷಕ್ಕೆ ಒಂದು ಸಾವಿರದಂತೆ ಐದು ವರ್ಷದಲ್ಲಿ ಐದು ಸಾವಿರ ಗೋ ಸಾಕಣೆಗೆ ವಿಶೇಷ ಆದ್ಯತೆ ನೀಡಲಾಗುವುದು. ಹಿಂದಿನಿಂದಲೂ ನಮ್ಮ ಜನ
ಪ್ರಯೋಜನ ಪಡೆಯುತ್ತಿದ್ದು ಇನ್ನೂ ಅದರ ಬಗ್ಗೆ ಹೆಚ್ಚು ಅಧ್ಯಯನವನ್ನು ಇತ್ತೀಚೆಗೆ ಕೆಲವರು ನಡೆಸಿದ್ದಾರೆ. ಆ ಕುರಿತೂ ಕೂಡ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದರು.
ಈಗಾಗಲೇ ನಮ್ಮ ಜಮೀನಿನಲ್ಲಿ 180 ಹಸು ಸಾಕಣೆ ಮಾಡಲಾಗಿದೆ. ಈ ಭಾಗದಲ್ಲಿ ಕೆಲವರು ದೇಶಿ ಹಸುಗಳನ್ನು ಸಾಕಣೆ ಮಾಡಿದ್ದಾರೆ. ಅವುಗಳ ಆರೋಗ್ಯ ರಕ್ಷಣೆಗಾಗಿ ನಕುಲ ಸ್ವಾಸ್ಥ ಪತ್ರ ನೀಡುವುದರಿಂದ ಹಸುಗಳ ಆರೋಗ್ಯದ ಬಗ್ಗೆ ಪಶು ಇಲಾಖೆ ವೈದ್ಯರು ಕಾಲ ಕಾಲಕ್ಕೆ ತಪಾಸಣೆ ನಡೆಸುತ್ತಾರೆ. ಈ ಕುರಿತು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಆದ್ದರಿಂದ ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ಈ ವೇಳೆ ಸಿದ್ದಾರ್ಥ ಗೋಯೆಂಕಾ ಅವರನ್ನು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಸನ್ಮಾನಿಸಿದರು. ಪ್ರಮೋದಾತ್ಮ ಗೋ ಸಂರಕ್ಷಣಾ ಕೇಂದ್ರದ ವತಿಯಿಂದ ಗೋ ಪ್ರಕೋಷ್ಠದ ಪದಾಧಿಕಾರಿಗಳನ್ನು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ, ವಿನಯ ಶೆಟ್ಟಿ, ಸಾಬು ಮಾಶ್ಯಾಳ, ವಿನಾಯಕ ಗವಳಿ, ರವಿಕಾಂತ ಬಗಲಿ, ಸಂಗರಾಜ ದೇಸಾಯಿ, ವಿವೇಕಾನಂದ ಡಬ್ಬಿ, ಅಜಿತ ಕುಲಕರ್ಣಿ, ಡಾ| ಅರವಿಂದ ಡಾಣಕಶಿರೂರ, ಗದ್ದೆಪ್ಪ ಮಾದರ, ಬಸವರಾಜ ಕುಂಬಾರ, ಎಸ್. ಎಸ್. ಅರಮನಿ, ವಿಜಯ ಜೋಶಿ, ಎನ್.ಎ. ಪಾಟೀಲ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.