ಜಾನಪದ ಕಲೆ ಉಳಿಸಿ-ಬೆಳೆಸಿ
Team Udayavani, Apr 7, 2018, 1:16 PM IST
ನಿಡಗುಂದಿ: ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಗ್ರಾಮೀಣ ಭಾಗದ ಜಾನಪದ ಕಲೆ ಅಳಿವಿನಂಚಿಗೆ ತಲುಪಿದ್ದು ಗ್ರಾಮೀಣ ಸೊಗಡು ಜಾನಪದ ಕಲೆಗಳು ಕಣ್ಮರೆಯಾಗುತ್ತಿವೆ ಎಂದು ನಿವೃತ್ತ ಪ್ರಾಚಾರ್ಯ ಶ್ರೀಶೈಲಪ್ಪ ರೇವಡಿ ಹೇಳಿದರು. ಪಟ್ಟಣದ ರುದ್ರೇಶ್ವರ ಸಂಸ್ಥಾನ ಮಠದಲ್ಲಿ ಜಾತ್ರೆ ಅಂಗವಾಗಿ ನಡೆದ ಜಾನಪದ ಕಲಾಸೌರಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಗೆ ಹೊಂದಿಕೊಳ್ಳುತ್ತಿರುವ ಪರಿಣಾಮ ನಮ್ಮ ಗ್ರಾಮೀಣ ಜಾನಪದ ಕಲೆಗಳು ವಿನಾಶದತ್ತ ಹೆಜ್ಜೆಹಾಕುತ್ತಿವೆ. ಜಾನಪದ ಕಲೆ ಕೇವಲ ಮನರಂಜನೆ ನೀಡುವಂತದ್ದಲ್ಲ ಅದರಲ್ಲಿ ಸಾಕಷ್ಟು ವಿಚಾರಧಾರೆಗಳು ಬದುಕುವ ದಾರಿಯನ್ನು
ತೋರಿಸುವ ಮಾರ್ಗಗಳು ಅಡಿಗಿದ್ದು ಅವುಗಳ ಬೆಳವಣಿಗೆಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಎಸ್.ಡಿ. ಕೃಷ್ಣಮೂರ್ತಿ ಮಾತನಾಡಿ, ಜಾನಪದ ಕೇವಲ ಒಬ್ಬರಿಂದ ಕೂಡಿದ್ದಲ್ಲ. ಅದು ಒಬ್ಬರಿಂದ ಒಬ್ಬರಿಗೆ ರಚಿತವಾದ ಕಲೆ, ಕಲೆಗಳು ಸಾರದಲ್ಲಿ ಬದುಕಿನ ಉತ್ತಮ ಸಂಸ್ಕಾರ, ಸಂಸ್ಕೃತಿ ಅಡಗಿದೆ. ಜಾನಪದ ಕಲೆಗಳನ್ನು ಕಲಿತವರು ಆರೋಗ್ಯ ಮತ್ತು ಸುಂದರ ಜೀವನ ನಡೆಸುತ್ತಿದ್ದಾರೆ. ಕಲಾ ಪ್ರದರ್ಶನಗಳು ನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ
ಸಕ್ರೀಯವಾಗಿವೆ. ಅದನ್ನು ಎಲ್ಲರೂ ಕೂಡಿಕೊಂಡು ಉಳಿಸಿ ಬೆಳೆಸುವ ಅವಶ್ಯಕತೆಯಿದೆ ಎಂದರು.
ನಿಡಗುಂದಿ ಕಜಾಪ ಅಧ್ಯಕ್ಷ ವೈ.ಎಸ್. ಗಂಗಶೆಟ್ಟಿ ಮಾತನಾಡಿ, ಯುವಕರು, ಚಿಣ್ಣರ ಕೈಯಲ್ಲಿ ಮೊಬೈಲ್‌ಗಳನ್ನು ನೀಡಿ ಸಮಾಧಾನ ಮಾಡಲು ಮುಂದಾಗುತ್ತಿದ್ದೇವೆ. ಆದರೆ ಆಗಿನ ಸಮಯದ ತಂತ್ರಜ್ಞಾನದಲ್ಲಿ ಹೊರಡುವ ಅನೇಕ ವಿಷಯಗಳು ಪೂರಕಕ್ಕಿಂತ ಮಗುವಿನ ಮನಸ್ಸಿನ ಮೇಲೆ ಮಾರಕದ ಪರಿಣಾಮಗಳು ಹೆಚ್ಚಾಗಿತ್ತವೆ. ಆದರೆ, ನಾವೆಲ್ಲ ಅವುಗಳನ್ನು ಗಮನಿಸದ ಪರಿಣಾಮ ಮಕ್ಕಳಲ್ಲಿ ಸಂಸ್ಕಾರದ ಅರಿವು ಕಡಿಮೆಯಾಗುತ್ತಿವೆ ಎಂದರು.
ರುದ್ರೇಶ್ವರ ಮಠದ ರುದ್ರಮುನಿ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶಿವಾನಂದ ಅವಟಿ, ರಾಜಶೇಖರ ಹೆಂಡಿ, ಈರಣ್ಣ ಪಟ್ಟಣಶೆಟ್ಟಿ, ಈಶಪ್ಪ ಹೆಗ್ಗೊಂಡ, ಮುರುಗೆಪ್ಪ ಸಜ್ಜನ, ಬಸವರಾಜ ಸಜ್ಜನ, ಬಸವರಾಜ ಹೆಂಡಿ, ಶಿವಲಿಂಗಪ್ಪ ಪಟ್ಟಣಶೆಟ್ಟಿ, ಶಂಕರ ರೇವಡಿ, ಸುಭಾಷ ಅವಟಿ, ಕಮಲಾ ಗುಡದಿನ್ನಿ ಸೇರಿದಂತೆ ಮುಂತಾದವರಿದ್ದರು. ಎಸ್.ಎಸ್. ಹುಬ್ಬಳ್ಳಿ ಸ್ವಾಗತಿಸಿದರು. ಎಸ್.
ಎಚ್. ದಡೇದ ನಿರೂಪಿಸಿದರು. ಆರ್.ಎಸ್. ಕಮತ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.