ಗೋಲಗುಮ್ಮಟದಿಂದ ಬಡಿಕಮಾನ್ ವರೆಗೆ ಸಂಪೂರ್ಣ ಸೀಲ್ ಡೌನ್
Team Udayavani, Apr 12, 2020, 12:05 PM IST
ವಿಜಯಪುರ: ನಗರದಲ್ಲಿ ಕೋವಿಡ್-19 ಸೋಂಕು ಶಂಕಿತರು ಕಂಡು ಬಂದಿರುವ ಹಿನ್ನೆಲೆಯಲ್ಲಿ ಬಡಿಕಮಾನ್ ದಿಂದ ಗೋಲಗುಮ್ಮಟ ದವರೆಗೆ ಇಡೀ ಪ್ರದೇಶವನ್ನು ಸೀಲ್ ಡೌನ್ ಮಾಡಿದ್ದು, ಛಪ್ಪರಬಂದ್ ಗಲ್ಲಿ ಸೇರಿ ಈ ಪ್ರದೇಶದ ಎಲ್ಲ ಗಲ್ಲಿಗಳ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಹೀಗಾಗಿ ಜನರು ಜಿಲ್ಲಾಡಳಿತದ ಜೊತೆ ಸಹಕರಿಸುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮನವಿ ಮಾಡಿದ್ದಾರೆ.
ಶನಿವಾರ ಸಂಜೆಯಿಂದ ನಗರದಲ್ಲಿ ಬೀಡುಬಿಟ್ಟಿರುವ ಅವರು, ಜಿಲ್ಲಾಡಳಿತ ಅಧಿಕಾರಿಗಳಿಂದ ಜಿಲ್ಲೆಯ ಕೋವಿಡ್-19 ಕೊರೊನಾ ರೋಗದ ಕುರಿತು ಮಾಹಿತಿ ಪಡೆದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು,
ಲಾಕ್ ಡೌನ್ ಹಾಗೂ ಸೀಲ್ ಡೌನ್ ಇರುವ ಪ್ರದೇಶದ ಜನರು ಅನಗತ್ಯವಾಗಿ ಮನೆಯಿಂದ ಹೊರಗೆ ಬರಬೇಡಿ. ಅದರಲ್ಲೂ ಸೀಲ್ ಡೌನ್ ಇರುವ ಪ್ರದೇಶಕ್ಕೆ ಹೊರಗಿನ ಯಾರಿಗೂ ಪ್ರವೇಶವಿಲ್ಲ, ಈ ಪ್ರದೇಶದ ಜನರೂ ಹೊರಗಡೆ ಕಾಣಿಸಿಕೊಳ್ಳುವಂತೆ ಇಲ್ಲ. ಜಿಲ್ಲಾಡಳಿತದ ಈ ಕಟ್ಟುನಿಟ್ಟಿನ ಸೂಚನೆಯನ್ನು ಯಾರೂ ಉಲ್ಲಂಘಿಸುವಂತಿಲ್ಲ. ನಗರದಲ್ಲಿ ಯಾರೂ ಯಾವುದೇ ಪ್ರದೇಶಕ್ಕೆ ಭೇಟಿ ನೀಡುವಂತಿಲ್ಲ ಎಂದು ಸೂಚಿಸಿದ್ದಾರೆ.
ಮನೆಯಲ್ಲಿರಿ ಸುರಕ್ಷಿತವಾಗಿರಿ. ಬದುಕಿ, ಬದುಕಲು ಬಿಡಿ, ಜೀವ ಅತ್ಯಮೂಲ್ಯವಾದದ್ದು. ಹೀಗಾಗಿ ಜಿಲ್ಲಾಡಳಿತದೊಂದಿಗೆ ಸಹಕರಿಸಿ ಎಂದು ಜಿಲ್ಲೆಯ ಜನರ ವಿನಂತಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.