ಪ್ರಧಾನಿ ಮೋದಿ ಕೈ ಬಲಪಡಿಸಲು ಶಹಾಪುರ ಮನವಿ
Team Udayavani, Apr 30, 2018, 4:30 PM IST
ಕಲಕೇರಿ: ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಿಜೆಪಿಯೊಂದೇ ಪರ್ಯಾಯವಾಗಿದ್ದು, ಪ್ರತಿಯೊಬ್ಬರು ಅಭಿವೃದ್ಧಿಗಾಗಿ ಬಿಜೆಪಿ
ಬೆಂಬಲಿಸಿ ಕರ್ನಾಟಕದಲ್ಲಿ ಪಕ್ಷದ ಬಾವೂಟ ಹಾರಲು ಸಹಕರಿಸಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಆಶೀರ್ವದಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಮನವಿ ಮಾಡಿದರು.
ರವಿವಾರ ದೇವರಹಿಪ್ಪರಗಿ ಮತಕ್ಷೇತ್ರದ ಕಲಕೇರಿ ಗ್ರಾಮದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಡಿ ಜಗತ್ತೇ ಮೆಚ್ಚುವಂತ ಆಡಳಿತ ನಡೆಸುತ್ತಿರುವ ಮೋದಿ ಸರ್ಕಾರದಂತೆ ರಾಜ್ಯದಲ್ಲಿಯೂ ಯಡಿಯೂರಪ್ಪನವರ
ನೇತೃತ್ವದ ಸರ್ಕಾರ ರಚಿಸಲು ಪ್ರತಿಯೊಬ್ಬರು ಬಿಜೆಪಿಗೆ ಬೆಂಬಲಿಸಬೇಕು. ದೇವರಹಿಪ್ಪರಗಿ ಕ್ಷೇತ್ರದ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ ಅತ್ಯಂತ ಒಳ್ಳೆ ವ್ಯಕ್ತಿಗಳಾಗಿದ್ದು, ರಾಜಕೀಯ ಮನೆತನದಿಂದ ಬಂದವರಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕನಸು ಹೊತ್ತು ಚುನಾವಣೆ ಎದುರಿಸುತ್ತಿದ್ದು ಎಲ್ಲರೂ ಸಹಕಾರ ನೀಡಿ ಬಿಜೆಪಿ ಗೆಲ್ಲಿಸಬೇಕು ಎಂದರು.
ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ಸುಮಾರು ವರ್ಷಗಳಿಂದ ಕ್ಷೇತ್ರದ ನಿರಂತರ ಸಂಪರ್ಕ ಹೊಂದಿದ್ದು, ಬಿಜೆಪಿ ಅಲೆ ಜೋರಾಗಿದೆ. ಇಡೀ ಕ್ಷೇತ್ರದ ಯುವ ಜನಾಂಗವೆಲ್ಲ ಬಿಜೆಪಿ ಬೆಂಬಲಕ್ಕೆ ನಿಂತಿದ್ದು, ಮತದಾರರ ಮನವೊಲಿಸುವಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ದುರಾಡಳಿತ ದೂರ ಮಾಡಲು ಬಿಜೆಪಿಗೆ ಬೆಂಬಲಿಸಬೇಕು. ಚುನಾವಣೆಯಲ್ಲಿ ಮತ ನೀಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕಲಕೇರಿ ಸೇರಿದಂತೆ ಸುತ್ತಮುತ್ತಲಿನ ವಿವಿಧ ಪಕ್ಷಗಳ ಮುಖಂಡರು, ಯುವಕರು ಬಿಜೆಪಿ ಸೇರ್ಪಡೆಗೊಂಡರು ನಂತರ ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು.
ಸಿದ್ದು ಬುಳ್ಳಾ,ಪ್ರಭುಗೌಡ ಬಿರಾದಾರ ಅಸ್ಕಿ,ಸೋಮನಗೌಡ ಯಾಳವಾರ, ವೀರಪ್ಪ ಝಳಕಿ, ಹನುಮಂತ ಸಂದಿಮನಿ, ವಿಶ್ವನಾಥ ಸಬರದ, ಶಿವಕುಮಾರ ಮಾಡಗಿ, ಶಂಕರ ಗುಂಡಕನಾಳ, ಸೋಮನಗೌಡ ಗಬಸಾವಳಗಿ, ಸಾಹೇಬಗೌಡ ಪಾಟೀಲ, ಮುಕುಂದ ದೇಸಾಯಿ, ಷಡಕ್ಷರಿ ಚಿಕ್ಕಮಠ, ಗೋಪಾಲ ಮೋಪಗಾರ, ರಾಜು ದೇಸಾಯಿ, ಮಲಕು ವಡ್ಡರ, ಸಂಗಮೇಶ ಜಾಲಹಳ್ಳಿಮಠ, ರವಿ ಹಿರೇಮಠ, ಸಂಗಮೇಶ ಸಗರ, ಕಾಶೀನಾಥ ವಿರಕ್ತಮಠ, ಗೌಡಪ್ಪ ದೇಸಾಯಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
MUST WATCH
ಹೊಸ ಸೇರ್ಪಡೆ
Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.