ಶಾಸ್ತ್ರೀ ನಗರ ಮುಖ್ಯರಸ್ತೆಗೆ ಶಂ.ಗು. ಬಿರಾದಾರ ಹೆಸರು ನಾಮಕರಣ
Team Udayavani, Oct 22, 2018, 12:34 PM IST
ವಿಜಯಪುರ: ಶಾಸ್ತ್ರೀ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಖ್ಯಾತಕವಿ ದಿ| ಶಂ.ಗು. ಬಿರಾದಾರ ಅವರ ಹೆಸರು ನಾಮಕರಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದರು.
ನಗರದ ಶಾಸ್ತ್ರೀ ನಗರ ಬಡಾವಣೆಯಲ್ಲಿ ಜನಸ್ಪಂದನ ಸಭೆ ನಡೆಸಿ ಹಾಗೂ ಬಡಾವಣೆ ನಿವಾಸಿಗಳಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನಾಡಿನ ಸಾರಸ್ವತ ಲೋಕಕ್ಕೆ ಅದರಲ್ಲೂ ಮಕ್ಕಳ ಸಾರಸ್ವತ ಲೋಕಕ್ಕೆ ದಿ| ಶಂ.ಗು. ಬಿರಾದಾರ ಅವರ ಕೊಡುಗೆ ಅನನ್ಯ. ಅವರು ರಚಿಸಿದ ನಾವು ಎಳೆಯರು, ನಾವು ಗೆಳೆಯರು ಎಂಬ ಕವನ ಅತ್ಯಂತ ಪ್ರಖ್ಯಾತಿ ಪಡೆದಿದೆ. ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ದಿ| ಶಂ.ಗು. ಬಿರಾದಾರ ಅವರ ಹೆಸರನ್ನು ಶಾಸ್ತ್ರೀ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗೆ ಅವರ ಹೆಸರನ್ನು ಇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಯತ್ನಾಳ ಭರವಸೆ ನೀಡಿದರು. ವಿಜಯಪುರ ನಗರವನ್ನು ಪ್ರಗತಿ ಹೊಂದಿದ ನಗರವನ್ನಾಗಿ ರೂಪಿಸಿ, ವಿಜಯಪುರ ನಗರ ವಿಧಾನಸಭಾ ಕ್ಷೇತ್ರವನ್ನು ಮಾದರಿ ಮತಕ್ಷೇತ್ರವನ್ನಾಗಿ ರೂಪಿಸುವ ಹೊಣೆಗಾರಿಕೆ ಹಾಗೂ ಬದ್ಧತೆಯೊಂದಿಗೆ ಕೆಲಸ ಮಾಡಡುತ್ತಿದ್ದೇನೆ. ನನ್ನ ಮತಕ್ಷೇತ್ರದ ವಸತಿ ರಹಿತ ಪ್ರತಿಯೊಬ್ಬರಿಗೂ ಮನೆ ನಿರ್ಮಿಸಿಕೊಡುವುದ ನನ್ನ ದೃಢ ಸಂಕಲ್ಪ. ಐತಿಹಾಸಿಕ ವಿಜಯಪುರ ನಗರವನ್ನು ಸ್ಲಂ ಮುಕ್ತ ನಗರ ನಿರ್ಮಿಸಿ ಪ್ರತಿಯೊಬ್ಬರಿಗೂ ಗುಣಮಟ್ಟದಿಂದ ಕೂಡಿದ ವಸತಿ ಸೌಲಭ್ಯ ಕಲ್ಪಿಸಲು 2 ಸಾವಿರ ಮನೆ ನಿರ್ಮಿಸುವ ಗುರಿ ಇದೆ. ಕೇಂದ್ರ-ರಾಜ್ಯ ಸರಕಾರಗಳು ನಗರದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತದೆ. ಜನಸಾಮಾನ್ಯರು ಅದರ ಸದುಪಯೋಗ ಮಾಡಿಕೊಳ್ಳಬೇಕು. ವಸತಿ ರಹಿತರು ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಕೋರಿದರು.
ಶಾಸ್ತ್ರೀ ನಗರದಲ್ಲಿರುವ ಪ್ರಸಿದ್ಧ ದೇವಾಲಯ ವೀರಾಂಜನೆಯ ದೇವಸ್ಥಾನಕ್ಕೆ 5 ಲಕ್ಷ ರೂ. ಅನುದಾನವನ್ನು ಶಾಸಕರ ಅಭಿವೃದ್ಧಿ ನಿಧಿಯಲ್ಲಿ ಬಿಡುಗಡೆ ಮಾಡುವುದು, ಭಗತ್‌ಸಿಂಗ್ ಮಕ್ಕಳ ಉದ್ಯಾನವನದಲ್ಲಿ ಮಕ್ಕಳ ಆಟಿಕೆ ವಸ್ತುಗಳನ್ನು ಅಳವಡಿಸುವುದು ಹಾಗೂ ಬಡಾವಣೆಯಲ್ಲಿ ಹಿರಿಯ ನಾಗರಿಕರಿಗೆ ವಾಯು ವಿಹಾರಕ್ಕಾಗಿ ವಾಕಿಂಗ್ ಟ್ರಾಫಿಕ್ ನಿರ್ಮಾಣ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಎಂ.ಕೆ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಎಸ್. ಎಸ್. ಶಿರಡೋಣ, ಡಾ| ಅರವಿಂದ ಡಾಣಕಶಿರೂರ, ಬಸಯ್ಯ ಹಿರೇಮಠ, ರಾಘವೇಂದ್ರ ಕಟ್ಟಿ, ನಂದಬಸಪ್ಪ ನುಚ್ಚಿ, ಎಸ್.ಆರ್. ಪಾಟೀಲ, ಡಾ| ಆನಂದ ಕುಲಕರ್ಣಿ, ಕಲ್ಯಾಣರಾವ್ ಹನುಮಸಾಗರ, ಮಲ್ಲಿಕಾರ್ಜುನ ಮುಪ್ಪಯ್ಯನಮಠ, ಶಂಕರ ಹೂಗಾರ, ಈರಣ್ಣಗೌಡ ಪಾಟೀಲ, ಮಹೇಶ ಗೌಡರ, ಮೋಹನ ಕುಲಕರ್ಣಿ, ಅರುಣ ಅಂಗಡಿ, ಮುತ್ತುರಾಜ ಜಂಪಾ, ದತ್ತಾ ಕುಲಕರ್ಣಿ, ನಾಗರಾಜ ಪತ್ತಾರ, ಗುರುರಾಜ ಮಹಾಜನ, ರುದ್ರಮುನಿ ಶಾಬಾದಿ, ದೇವೂರ, ಬಸವರಾಜ ಸೊನ್ನದ, ಬಾಬುರಾವ್ ಮಹಾಜನ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.