ತುಂಬಿ ತುಳುಕುತ್ತಿದೆ ಶಾಸ್ತ್ರೀ ಜಲಾಶಯ
Team Udayavani, Sep 17, 2017, 12:52 PM IST
ಆಲಮಟ್ಟಿ: ಮಹಾರಾಷ್ಟ್ರದ ಕೃಷ್ಣೆಯ ಉಗಮಸ್ಥಾನ ಹಾಗೂ ಅಚ್ಚುಕಟ್ಟುಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಕೋಯ್ನಾ ಜಲಾಶಯ ಸೇರಿದಂತೆ ವಿವಿಧ ಬ್ಯಾರೇಜುಗಳಿಂದ ನದಿ ಪಾತ್ರಕ್ಕೆ ನೀರು ಬಿಟ್ಟ ಪರಿಣಾಮ ಆಲಮಟ್ಟಿ ಜಲಾಶಯಕ್ಕೆ
ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ.
ಶುಕ್ರವಾರದಿಂದ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯಕ್ಕೆ ಬರುತ್ತಿರುವ ನೀರಿನ ಪ್ರಮಾಣ ವ್ಯಾಪಕ ಏರಿಕೆಯಾಗಿದ್ದರಿಂದ ಕೃಷ್ಣೆಯ ಹಿನ್ನೀರು ಪ್ರದೇಶದಲ್ಲಿ ನೀರು ಸಂಗ್ರಹದಲ್ಲಿ ಏರಿಕೆಯಾಗಿ ರೈತರ ಜಮೀನಿನಲ್ಲಿ ನುಗ್ಗಿದ್ದರಿಂದ ಆತಂಕಕ್ಕೆ ಕಾರಣವಾಗಿದೆ.
ಶನಿವಾರ ಬೆಳಗ್ಗೆಯಿಂದ ಆಲಮಟ್ಟಿ ಬಲದಂಡೆಯಲ್ಲಿರುವ ಕರ್ನಾಟಕ ಜಲ ವಿದ್ಯುದ್ ಗಾರದ ಮೂಲಕ ನದಿ ಪಾತ್ರಕ್ಕೆ ಬಿಡಲಾಗುತ್ತಿದೆ
ಇದರಿಂದ ಹಿನ್ನೀರು ಪ್ರದೇಶದಲ್ಲಿ ಏರಿಕೆಯಾಗಿದ್ದ ನೀರು ಸಂಜೆ ವೇಳೆ ಇಳಿಮುಖವಾಗಿದೆ. ಇದರಿಂದ ಆತಂಕಕ್ಕೀಡಾಗಿದ್ದ ರೈತರು ನಿಟ್ಟುಸಿರು ಬಿಡುವಂತಾಯಿತು. 519.60 ಮೀ. ಗರಿಷ್ಠ ಎತ್ತರದ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯದಲ್ಲಿ ಶನಿವಾರ
ಸಾಯಂಕಾಲ 519.60 ಮೀ. ಎತ್ತರವಾಗಿ 123.081 ಟಿಎಂಸಿ ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ 123.081 ಟಿಎಂಸಿ ಅಡಿ ಸಂಗ್ರಹವಾಗಿ 45,080 ಕ್ಯೂಸೆಕ್ ಒಳಹರಿವು ನೀರನ್ನು 45 ಸಾವಿರ ಕ್ಯೂಸೆಕ್ ನೀರನ್ನು ಜಲ ವಿದ್ಯುದ್‌ಗಾರ ಮೂಲಕ
ಹರಿಬಿಡಲಾಗುತ್ತಿದೆ.
ಆಲಮಟ್ಟಿ ಜಲಾಶಯ ವ್ಯಾಪ್ತಿಯಲ್ಲಿ ಬರುವ 60 ಕ್ಯೂಸೆಕ್ ನೀರನ್ನು ವಿವಿಧ ಕೆರೆ ತುಂಬುವ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ಹಾಗೂ 20 ಕ್ಯೂಸೆಕ್ ನೀರನ್ನು ಕೂಡಗಿ ರಾಷ್ಟ್ರೀಯ ಉಷ್ಣ ವಿದ್ಯುತ್ ಸ್ಥಾವರಕ್ಕೆ ಬಿಡಲಾಗುತ್ತಿದೆಯಲ್ಲದೇ ಇನ್ನು ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಕಾಲುವೆಗಳಿಗೆ ಚಾಲು ಬಂದ್ ಪದ್ಧತಿ ಅನುಸರಿಸುವುದರಿಂದ ಈಗ ಯಾವ ಕಾಲುವೆಗಳಿಗೂ ನೀರು ಹರಿಸುತ್ತಿಲ್ಲ.
ಬೇನಾಳದ ಪ್ರಕಾಶ ಉಳ್ಳಾಗಡ್ಡಿ ಪತ್ರಿಕೆಯೊಂದಿಗೆ ಮಾತನಾಡಿ, ಕೃಷ್ಣೆಯಲ್ಲಿ ಒಳಹರಿವು ಹೆಚ್ಚಾಗಿದ್ದರಿಂದ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಏರಿಕೆಯಾಗಿ ಸರ್ಕಾರ ಭೂಸ್ವಾಧೀನ ಪಡಿಸಿಕೊಂಡಿರುವುದಕ್ಕಿಂತ ಹೆಚ್ಚು ನೀರು ನಮ್ಮ ಜಮೀನಿನಲ್ಲಿ ನುಗ್ಗುವುದರಿಂದ
ನಮಗಿರುವ ಒಟ್ಟು ಐದು ಎಕರೆ ಜಮೀನಿನಲ್ಲಿ ಎರಡೂವರೆ ಎಕರೆ ಜಮೀನನ್ನು ಸರ್ಕಾರ ಭೂಸ್ವಾಧೀನ ಮಾಡಿಕೊಂಡಿದೆ.
ಇನ್ನುಳಿದ ಎರಡೂವರೆ ಎಕರೆಯಲ್ಲಿ ಉಳ್ಳಾಗಡ್ಡಿ, ಸಜ್ಜೆ, ಟೊಮೆಟೋ, ಬದನೆಕಾಯಿ, ಸೂರ್ಯಪಾನ ಬೆಳೆ ಬೆಳೆದಿದ್ದೇವೆ. ಇದರಲ್ಲಿ ಒಂದೂವರೆ ಎಕರೆ ಜಮೀನಿನಲ್ಲಿ ಜಲಾಶಯದ ಪ್ರವಾಹದ ವೇಳೆಯಲ್ಲಿ ನೀರು ನಿಲ್ಲುತ್ತದೆ. ಇದರಿಂದ ನಮ್ಮ ಬೆಳೆಗಳು ಹಾಳಾಗುತ್ತಿವೆ.
ಸರ್ಕಾರ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಸ್ವಾಧೀನ ಮಾಡಿಕೊಂಡಿರುವ ಜಮೀನಿಗಿಂತ ಹೆಚ್ಚು ನೀರು ಬರುವ ಜಮೀನುಗಳ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಕಳೆದ ಬಾರಿ ಬೇಸಿಗೆಯಲ್ಲಿ ಜಲಾಶಯದಲ್ಲಿ ನೀರಿನ ಸಂಗ್ರಹ ವ್ಯಾಪಕವಾಗಿ ಕುಸಿದಿದ್ದರಿಂದ ವಿಜಯಪುರ ಸೇರಿದಂತೆ ಕೃಷ್ಣೆ ನೀರನ್ನು ನಂಬಿದ್ದ ಅವಳಿ ಜಿಲ್ಲೆಯ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಜನರು ನೀರಿಗಾಗಿ ಪರದಾಡುವಂತಾಗಿತ್ತು, ಕೃಷ್ಣೆಯ ಒಳಹರಿವಿನಲ್ಲಿ ಹೆಚ್ಚಾಗಿದ್ದರಿಂದ ಇಂಥ ವೇಳೆಯಲ್ಲಿಯೇ ಎಲ್ಲ ಕೆರೆ ತುಂಬುವ ಯೋಜನೆ, ಕಾಲುವೆ ವ್ಯಾಪ್ತಿಯ ಕೆರೆ, ಬಾಂದಾರಗಳು ಹಾಗೂ ವಿವಿಧ ಕಾರ್ಖಾನೆಗಳಿಗೆ ಇದೇ ಅವ ಧಿಯಲ್ಲಿ ನೀರು ಸಂಗ್ರಹಿಸಬೇಕು ಮತ್ತು ವಾರಾಬಂಧಿ ಪದ್ಧತಿ ಕೈ ಬಿಟ್ಟು ಎಲ್ಲ ರೈತರ ಹಿತ ಕಾಪಾಡಲು ಕಾಲುವೆ ಜಾಲಗಳಿಗೆ ನೀರು ಹರಿಸಬೇಕು ಎಂದು ರೈತ ಮಹಾದೇವಪ್ಪ ಪತ್ತೆಪುರ ಹಾಗೂ ಶಾಂತಪ್ಪ ಮನಗೂಳಿ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.