ಮೋರಟಗಿ ಪೊಲೀಸ್ ಠಾಣೆಗೆ ಸಿಬ್ಬಂದಿ ಕೊರತೆ
Team Udayavani, Jan 17, 2022, 6:04 PM IST
ಮೋರಟಗಿ: ಗ್ರಾಮದ ಹೊರ ವಲಯದಲ್ಲಿರುವ ಹೊರ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆಯಿಂದ ಪೊಲೀಸರು ಪರದಾಡುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿ 218 ಅಪಘಾತ ವಲಯವಾಗಿದ್ದು ದಿನ ನಿತ್ಯ ಒಂದಿಲ್ಲ ಒಂದು ದುರಂತಗಳು ನಡೆಯುತ್ತಿವೆ. ಇದನ್ನು ನಿಭಾಯಿಸುವಲ್ಲಿ ಇಲ್ಲಿರುವ ಮೂವರು ಪೊಲೀಸರು ಕಷ್ಟಪಡುತ್ತಿದ್ದಾರೆ. ಹೀಗಾಗಿ ಈ ಠಾಣೆಗೆ ಇನ್ನೂ ಎರಡು ಸಿಬ್ಬಂದಿ ನಿಯೋಜನೆ ಮಾಡಬೇಕು ಎಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.
ಮೋರಟಗಿ ಹೊರ ಪೊಲೀಸ್ ಠಾಣೆಯು ನಗಾವಿ (ಬಿಕೆ ), ಭಂಟನೂರ, ಗುತ್ತರಗಿ, ಗೊರವಗುಂಡಗಿ, ನಗಾವಿ (ಕೆಡಿ ), ಕೆರೂರ, ಗಾಬಸಾವಳಗಿ, ಹಂಚಿನಾಳ, ಜಾಟ್ನಾಳ, ಕಕ್ಕಳಮೆಲಿ, ಬಗಲೂರ್, ಶಿರಸಗಿ, ಕುಳೇಕುಮಟಗಿ, ಮೋರಟಗಿ ಸೇರಿದಂತೆ ಸುಮಾರು 15 ಹಳ್ಳಿಗಳಿಗೆ ಕೇಂದ್ರ ಬಿಂದುವಾಗಿದೆ. ಪ್ರತಿ ಮಂಗಳವಾರ ಇಲ್ಲಿ ಸಂತೆ ನಡೆಯುತ್ತದೆ. ಸಂತೆಯಲ್ಲಿ ಸುಮಾರು ಸಾವಿರಕ್ಕಿಂತ ಅಧಿಕ ಜನರು ವ್ಯಾಪಾರಕ್ಕೆ ಬರುತ್ತಾರೆ. ಸಂತೆಯಲ್ಲಿ ಮೊಬೈಲ್, ಕಿಸೆಗಳ್ಳತನ ಹೆಚ್ಚಾಗಿದೆ ಮತ್ತು ಸಂತೆಯ ದಿನದಂದು ರಾಷ್ಟ್ರೀಯ ಹೆದ್ದಾರಿಯಲ್ಲೇ ಆಟೋ ರಿಕ್ಷಾ, ಜಿಪ್, ದ್ವಿಚಕ್ರ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲಿಸುತ್ತಿರುವುದರಿಂದ ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿದೆ.
ದಿನ ಬೆಳಗಾದರೆ ಸಾರ್ವಜನಿಕರು ನೂರಾರು ಸಮಸ್ಯೆ ಹೊತ್ತು ಪೊಲೀಸ್ ಠಾಣೆಗೆ ಬರುತ್ತಾರೆ. ಕೆಲವೊಮ್ಮೆ ಅಹವಾಲು ಸ್ವೀಕರಿಸಲು ಠಾಣೆಯಲ್ಲಿ ಸಿಬ್ಬಂದಿಗಳು ಕೂಡಾ ಇರುವುದಿಲ್ಲ. ಇರುವ ಮೂವರು ಸಿಬ್ಬಂದಿ ಕೆಲಸದ ನಿಮಿತ್ತ ಪಕ್ಕದ ಹಳ್ಳಿಗೆ ಬಂದಿದ್ದೇವೆ ಎಂದು ಹೇಳುವುದು ಸಾಮಾನ್ಯವಾಗಿದೆ.
ಅಕ್ರಮ ದಂಧೆಗಳಿಗಿಲ್ಲ ಬ್ರೇಕ್
ಅಕ್ರಮ ಮರಳು ಸಾಗಾಣಿಕೆಗೆ ಹೆಸರಾದ ಘತ್ತರಗಿ ಗ್ರಾಮ ಇಲ್ಲಿಂದ ಕೇವಲ 8 ಕಿ.ಮೀ ಮಾತ್ರ ದೂರವಿದೆ. ಮಧ್ಯರಾತ್ರಿ ಅಡ್ಡ ರಸ್ತೆಯಿಂದ ಮರಳು ಸಾಗಿಸುತ್ತಾರೆ. ಇದನ್ನು ತಡೆಗಟ್ಟಲು ಪೊಲೀಸರು ಹರಸಾಹಸ ಪಟ್ಟರು ವಾಹನಗಳು ಸಿಗುತ್ತಿಲ್ಲ. ಸಿಬ್ಬಂದಿ ಕೊರತೆಯಿಂದ ಅಕ್ರಮಕೋರರು ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ರಮ ಮರಳು ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮಟಕಾ, ಇಸ್ಪೀಟ್, ಜೂಜಾಟ ದಿನೇ ದಿನೇ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟುವಲ್ಲಿ ಪೊಲೀಸ್ ಸಿಬ್ಬಂದಿಗಳು ಸಂಪೂರ್ಣ ವಿಫಲವಾಗುತ್ತಿದ್ದಾರೆ ಎಂದು ಜನ ಆರೋಪಿಸಿದ್ದಾರೆ. ಕೂಡಲೇ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೇಲಧಿಕಾರಿಗಳು ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ರಾತ್ರಿ ಪೊಲೀಸರು ಹಳ್ಳಿಗಳಲ್ಲಿ ಏನ್ ಬರತಾರೆ ಬಿಡಿ ಎಂದು ಹಳ್ಳಿ ಜನ ಕಡೆಗಣಿಸುವುದು ಸರ್ವೇ ಸಾಮಾನ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲೇ ಇಸ್ಪೀಟ್, ಮಟಕಾ, ಸಾರಾಯಿ ಅಕ್ರಮ ದಂಧೇಗಳು ನಡೆಯುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿವೆ. ಇದನ್ನು ತಡೆಗಟ್ಟಲು ಮೋರಟಗಿ ಠಾಣೆಗೆ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಲೇಬೇಕು. -ಪ್ರಧಾನಿ ಮೂಲಿಮನಿ, ಭಂಟನೂರ ಗ್ರಾಮಸ್ಥ
ಈಗಾಗಲೇ ಮೋರಟಗಿ ಹೊರ ಠಾಣೆಗೆ ಸಿಬ್ಬಂದಿ ಕೊರತೆ ಇರುವುದು ಗಮನಕ್ಕೆ ಬಂದಿದೆ. ಇಷ್ಟು ದಿನ ಸಿಂದಗಿ ತಾಲೂಕಿನಲ್ಲಿ ಸಿಬ್ಬಂದಿನಗಳು ಕಡಿಮೆ ಇರುವುದರಿಂದ ಮೋರಟಗಿ ಠಾಣೆಗೆ ಸಾಕಷ್ಟು ಸಿಬ್ಬಂದಿ ನಿಯೋಜನೆ ಮಾಡಲು ಆಗಿಲ್ಲ. ಸದ್ಯಕ್ಕೆ ಒಬ್ಬ ಎಎಸೈ, ಇಬ್ಬರು ಪಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೂಡಲೇ ಎರಡು ದಿನಗಳಲ್ಲಿ ಇನ್ನೊರ್ವ ಸಿಬ್ಬಂದಿಗೆ ನಿಯೋಜನೆ ಮಾಡುತ್ತೇನೆ. -ಶ್ರೀಧರ ದಡ್ಡಿ ,ಡಿವೈಎಸ್‌ಪಿ, ಇಂಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್, 38 ಪ್ರಶ್ನೆ!
Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್
Fraud: ಡಿಕೆಸು ಹೆಸರಲ್ಲಿ 8 ಕೋಟಿ ಸಾಲ ಪಡೆದು ವಂಚನೆ
Bengaluru: ಸಾಲ ವಾಪಸ್ ಕೇಳಿದ್ದಕ್ಕೆ ಮಾಂಸ ಅಂಗಡಿಯಲ್ಲಿ ಭೀಕರ ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.