ನಕ್ಸಲ್‌ರನ್ನು ಗುಂಡಿಟ್ಟು ಕೊಲ್ಲುವ ಕಾನೂನು ತನ್ನಿ
ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ದೇಶಪ್ರೇಮಿಗಳಿಂದ ಭಾವಪೂರ್ಣ ಶ್ರದ್ಧಾಂಜಲಿ
Team Udayavani, Apr 7, 2021, 8:46 PM IST
ಮುದ್ದೇಬಿಹಾಳ: ನಕ್ಸಲರನ್ನು ಒಂದೇ ಬಾರಿ ಸಾಮೂಹಿಕವಾಗಿ ಗುಂಡಿಟ್ಟು ಕೊಲ್ಲಬೇಕು. ಮುಂದೆ ಇನ್ನೊಬ್ಬರು ನಕ್ಸಲರಾಗಲು ಭಯಪಡುವಂಥ ಕಾನೂನನ್ನು ದೇಶದಲ್ಲಿ ಜಾರಿಗೊಳಿಸಬೇಕು ಎಂದು ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಸರಸ್ವತಿ ಪೀರಾಪುರ ಆಕ್ರೋಶ ಹೊರ ಹಾಕಿದರು.
ಪಟ್ಟಣದ ಹಳೆ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಸೈನಿಕ ಮೈದಾನದಲ್ಲಿನ ಹುತಾತ್ಮ ಯೋಧರ ಸ್ಮಾರಕದಲ್ಲಿ ಬಿಜೆಪಿ ಯುವ ಮೋರ್ಚಾ ಸೇರಿದಂತೆ ದೇಶಭಕ್ತ ಸಂಘಟನೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರ ದಾಳಿಗೆ ಬಲಿಯಾದ ಭಾರತೀಯ ಯೋಧರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೊನ್ನೆ ತಾನೇ ಸೇವಾ ನಿವೃತ್ತಿ ಹೊಂದಿದ ಸೈನಿಕರನ್ನು ಹೃತೂ³ರ್ವಕವಾಗಿ ಸ್ವಾಗತಿಸಿಕೊಂಡು ಸಂಭ್ರಮಿಸಿದ್ದ ನಮಗೆ ಈ ಘಟನೆ ಬರಸಿಡಿಲು ಬಡಿದಂತಾಗಿದೆ. ಶ್ರದ್ಧಾಂಜಲಿ ಕಾರ್ಯಕ್ರಮ ಒಂದೇ ದಿನಕ್ಕೆ ಸೀಮಿತವಾಗಬಾರದು. ನಾವು ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮರೆತುಬಿಡಬಾರದು. ಹುತಾತ್ಮರ ಕುಟುಂಬದ ದುಃಖದಲ್ಲಿ ನಾವೆಲ್ಲ ಭಾಗಿಯಾಗಬೇಕು. ಅಂಥ ಕುಟುಂಬಗಳಿಗೆ ಎಲ್ಲ ರೀತಿಯ ನೆರವು ನೀಡಲು ಸಿದ್ಧರಾಗಬೇಕು. ಅವರ ಕುಟುಂಬದ ನೆರವಿಗೆ ನಿಲ್ಲಬೇಕು ಎಂದರು.
ಎಬಿವಿಪಿ ಹಿರಿಯ ಧುರೀಣ ಸಂಜು ಬಾಗೇವಾಡಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ದೇಶ ಸುಭದ್ರವಾಗಿದೆ ಎಂದು ನಾವೆಲ್ಲ ನಂಬಿದ್ದೇವೆ. ಶತ್ರುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಕೊಳ್ಳುತ್ತದೆ ಎಂದು ನಾವೆಲ್ಲ ದೇಶವಾಸಿಗಳು ನೆಮ್ಮದಿಯಿಂದ ಇದ್ದೇವೆ. ಹೀಗಿರುವಾಗ ಸೈನಿಕರ ಮೇಲೆ ದೇಶದ್ರೋಹಿಗಳು, ಭಯೋತ್ಪಾದಕರು ಪದೇ ಪದೇ ದಾಳಿ ನಡೆಸುತ್ತಿರುವುದು ನಾಗರಿಕರಿಗೆ ನೋವುಂಟು ಮಾಡಿದೆ. ಇಂಥ ಕೃತ್ಯ ಶಾಶ್ವತವಾಗಿ ತಡೆಗಟ್ಟಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಂಥ ಘಟನೆಗಳು ಸೈನಿಕರ ಕುಟುಂಬಗಳನ್ನು ಆತಂಕಕ್ಕೆ ದೂಡುತ್ತವೆ. ಪದೇ ಪದೇ ನಮ್ಮ ಸೈನಿಕರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಿವೆ. ಇಂಥ ಭಯೋತ್ಪಾದಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಎಂದು ಅಮಿತ್ ಶಾ ಹೇಳುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಸೈನಿಕನ್ನು ಕೆಟ್ಟ ದೃಷ್ಟಿಯಿಂದ ನೋಡಿದರೂ ಅವರನ್ನು ಕೊಲ್ಲುವ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಎಬಿವಿಪಿ ಹಿರಿಯ ಧುರೀಣ ರವೀಂದ್ರ ಬಿರಾದಾರ ಮಾತನಾಡಿ, ನಿನ್ನೆ ಮೊನ್ನೆ ಕರ್ತವ್ಯಕ್ಕೆ ಸೇರಿದವರು ಹುತಾತ್ಮರಾಗಿದ್ದಾರೆ. ದೇಶಕ್ಕಾಗಿ ಬಲಿಯಾಗುವುದು ಹೆಮ್ಮೆ ಅನ್ನೋದು ನಮ್ಮ ಭಾವನೆ ನಮ್ಮಲ್ಲಿದೆಯಾದರೂ ಇಂಥ ಘಟನೆ ಪುನರಾವರ್ತನೆ ಸರಿಯಲ್ಲ. ಕೆಲ ಬುದ್ಧಿಗೇಡಿಗಳು ಇಂಥವುಗಳನ್ನೂ ಸಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಾರೆ. ನಾಗರಿಕರು ದೇಶದೊಳಗೆ ನೆಮ್ಮದಿಯಿಂದ ಇದ್ದೇವೆ ಎಂದರೆ ಅದಕ್ಕೆ ಸೈನಿಕರು ಕಾರಣ ಎನ್ನುವುದನ್ನು ಅರಿತುಕೊಳ್ಳಬೇಕು. ನಾವೆಲ್ಲರೂ ಸೈನಿಕರಿಗೆ ಗೌರವ ಕೊಡಬೇಕು. ನಕ್ಸಲರ ದಾಳಿ ಹೇಯ ಕೃತ್ಯ. ಹೊರಗಿನ ಭಯೋತ್ಪಾದರ ಜೊತೆಗೆ ನಮ್ಮೊಳಗೇ ಇರುವ ಭಯೋತ್ಪಾದಕರನ್ನೂ ಹತ್ತಿಕ್ಕಬೇಕು. ನಮ್ಮಲ್ಲಿರುವ ಇಂಥ ಕ್ರಿಮಿಗಳನ್ನು ಹೊಸಕಿ ಹಾಕಬೇಕು. ಕೇಂದ್ರ ಸರ್ಕಾರ ಒಂದೇ ಬಾರಿ ಇಂಥ ಕ್ರಿಮಿಗಳನ್ನು ಸ್ವತ್ಛಗೊಳಿಸುವ ಕಠಿಣ ಕಾನೂನು ಕ್ರಮ ಜಾರಿಗೊಳಿಸಬೇಕು. ನಕ್ಸಲರ ಹುಟ್ಟಡಗಿಸಬೇಕು. ಕೆಂಪು ಉಗ್ರರನ್ನು ಅಟ್ಟಾಡಿಸಿ ಹೊಡೆದುರುಳಿಸಬೇಕು. ಶಾಂತಿ ಕದಡುವವರು ವಿದೇಶದಿಂದ ಹಣ ಪಡೆಯುತ್ತಿದ್ದು ಇದನ್ನು ಮೊದಲು ನಿಲ್ಲಿಸಬೇಕು ಎಂದರು.
ಯುವ ಮೋರ್ಚಾ ಅಧ್ಯಕ್ಷ ಪುನೀತ್ ಹಿಪ್ಪರಗಿ, ಸಂತೋಷ ಬಾದರಬಂಡಿ, ಹನುಮಂತ ಕಲ್ಯಾಣಿ, ಮಣಿಕಂಟ ಅಮರೊದಗಿ, ಬಸವರಾಜ ವಾಲೀಕಾರ, ರಾಜಶೇಖರ ಮ್ಯಾಗೇರಿ, ಹನುಮಂತ ನಲವಡೆ, ಬಸಯ್ಯ ನಂದಿಕೇಶ್ವರಮಠ, ಗೌರಮ್ಮ ಹುನಗುಂದ ಬಲದಿನ್ನಿ, ನರಸಮ್ಮ ಗುಬಚಿ, ಪರಶುರಾಮ ಬಿಜಾಪುರ, ಶ್ರೀಶೈಲ ದೊಡಮನಿ ರೂಢಗಿ, ಮಹಾಂತಗೌಡ ಕಾಶಿನಕುಂಟಿ, ರಾಜು ಬಳ್ಳೊಳ್ಳಿ, ಬೇಬಿ ಆಲಗೊಂಡ, ಮಾಲಾ ಪಾಟೀಲ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಹುತಾತ್ಮ ಸ್ಮಾರಕದ ಎದುರು ಎಲ್ಲರೂ ಮೋಂಬತ್ತಿ ಹಚ್ಚಿ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.