ಸಿದ್ಧರಾಮಯ್ಯ ಅಥವಾ ನನ್ನ ಕುಟುಂಬದಲ್ಲಿ ಯಾರೂ ಹುತಾತ್ಮರಾಗಿಲ್ಲ: ವಿಶ್ವನಾಥ್
Team Udayavani, Oct 21, 2019, 4:11 PM IST
ವಿಜಯಪುರ : ಸ್ವಾತಂತ್ರ್ಯ ವೀರ ಸಾವರ್ಕರ್ ದೇಶಪ್ರೇಮ, ತ್ಯಾಗ, ಬಲಿದಾನಗಳ ಕುರಿತು ಮಾಜಿ ಸಿ.ಎಂ. ಸಿದ್ಧರಾಮಯ್ಯ ಟೀಕೆ ಮಾಡುವುದು ಸರಿಯಲ್ಲ. ವೀರ ಸಾವರ್ಕರ್ ಅವರಿಗೆ ಭಾರತರತ್ನ ನೀಡಿಕೆ ವಿಚಾರ ವಿವಾದ ಆಗಿರುವುದೇ ಬೇಸರದ ಸಂಗತಿ.
ಸಿದ್ಧರಾಮಯ್ಯ ಅಥವಾ ನನ್ನ ಕುಟುಂಬದಲ್ಲಿ ಯಾರೂ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾಗಿಲ್ಲ, ಆಸ್ತಿಯನ್ನೂ ಕಳೆದುಕೊಂಡಿಲ್ಲ, ಅವರು ಗಳಿಸಿಟ್ಟ ಸ್ವಾತಂತ್ರ್ಯದ ಆಸ್ತಿಯನ್ನು ನಾವು ಅನುಭವಿಸುತ್ತಿದ್ದೇವೆ ಎಂದು ಅನರ್ಹ ಶಾಸಕ ಎಚ್. ವಿಶ್ವನಾಥ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾತನಾಡಿದ ಜೆಡಿಎಸ್ ಅನರ್ಹ ಶಾಸಕ ಎಚ್ .ವಿಶ್ವನಾಥ.
ವೀರ ಸಾವರ್ಕರಗೆ ಭಾರತ ರತ್ನ ನೀಡುವ ಬಗ್ಗೆ ವಿವಾದ ಎದ್ದಿರುವುದು ವಿಷಾದಕರ ಸಂಗತಿ. ಸಾವರ್ಕರ್ ಮತ್ತು ಅವರ ಕುಟುಂಬದವರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನ ಮಾಡಿದವರ ಪಟ್ಟಿಯಲ್ಲಿದ್ದಾರೆ. ಇದನ್ನು ಅರಿಯದೇ ಯಾರೂ ಅಸಂಬದ್ಧವಾಗಿ ಮಾತನಾಡುವುದು ಸರಿಯಾದ ಕ್ರಮವಲ್ಲ ಎಂದರು.
ಸುಪ್ರೀಂ ಕೋರ್ಟಿನಲ್ಲಿರುವ ಅನರ್ಹ ಶಾಸಕರ ಪ್ರಕರಣ ತೀರ್ಪು ಹೊರಬೀಳುವ ಸಾಧ್ಯತೆ ಇದೆ ನಮ್ಮ ಪರ ತೀರ್ಪು ಬರುವ ವಿಶ್ವಾಸವಿದೆ. ಅಂದಿನ ಸ್ಪೀಕರ್ ರಮೇಶ ಕುಮಾರ್ ಕಾನೂನು ಬಾಹಿರ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿಗೆ ಹೋಗಿದ್ದೇವೆ. ಸುಪ್ರೀಂ ಕೋರ್ಟ್ ನಮ್ಮ ವಾದವನ್ನು ಎತ್ತಿ ಹಿಡಿಯುವ ವಿಶ್ವಾಸವಿದೆ ಎಂದರು.
ಮಾಜಿ ಸಿ.ಎಂ. ಸಿದ್ಧರಾಮಯ್ಯ ತಮ್ಮ ಕುರಿತು ಆಡಿರುವ ಮಾತಿಗೆ ಎಚ್ ವಿಶ್ವನಾಥ ಪ್ರತಿಕ್ರಿಯಿಸುತ್ತಾ ಸಿದ್ಧರಾಮಯ್ಯ ಮಾಜಿ ಮುಖ್ಯಮಂತ್ರಿಗಳು, ದೊಡ್ಡವರು, ಸತ್ಯವಂತರು, ರಾಷ್ಟ್ರ ನಾಯಕರು, ಸ್ವಾತಂತ್ರ್ಯ ಪ್ರೇಮಿಗಳು ಅವರ ಬಗ್ಗೆ ಮೈಸೂರಿನಲ್ಲಿ ಉತ್ತರ ಕೊಡುತ್ತೇನೆ ಎಂದು ತಿರುಗೇಟು ನೀಡಿದರು.
ಜಿಲ್ಲೆಯ ಸೋಮದೇವರ ಹಟ್ಟಿಯಲ್ಲಿ ದೇವಿಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ್ದರಲ್ಲಿ ತಪ್ಪೇನಿದೆ. ಪ್ರಗತಿಪರರು ಎಂದ ಮಾತ್ರಕ್ಕೆ ದೇವರಿಗೆ ಕೈ ಮುಗಿಯಬಾರದು ಎಂದು ನಿಯಮವಿದೆಯೇ? ದೇವರಿಗೆ ಕೈ ಮುಗಿಯುವುದು, ಹೋಮ ಹವನ ಮಾಡುವುದು, ದೇವರಿಗೆ ನಮಿಸುವುದು, ಶ್ರದ್ಧಾ ಭಕ್ತಿಯಿಂದ ನಡೆದುಕೊಳ್ಳುವು ನಮ್ಮಲ್ಲಿ ಪರಂಪರಾಗತವಾಗಿ ಬಂದಿರುವ ಪದ್ಧತಿ ಎಂದರು.
ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದಲ್ಲಿ ಸ್ನೇಹಿತರೊಬ್ಬರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆ. ತಿಕೋಟಾದಿಂದ ಬೆಳಗಾವಿ ಮೂಲಕ ದೆಹಲಿಗೆ ತೆರಳುತ್ತೇನೆ ಎಂದು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸಿದ್ದರಾಮಯ್ಯ ಮಾಸ್ ಲೀಡರ್, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.