ಮತ್ತೇ ಶಿವಾನಂದ ಪಾಟೀಲ ಆಯ್ಕೆ
Team Udayavani, Nov 10, 2018, 12:01 PM IST
ವಿಜಯಪುರ: ಆರೋಗ್ಯ ಸಚಿವ ಶಿವಾನಂದ ಪಾಟೀಲ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗೆ 9ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವುದರ ಮೂಲಕ ಸಹಕಾರಿ ರಂಗದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ರಾಜಶೇಖರ ಗುಡದಿನ್ನಿ ಕೂಡ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ಶುಕ್ರವಾರ ನಡೆದ ನಿರ್ದೇಶಕ ಮಂಡಳಿ ಸಭೆಯಲ್ಲಿ ಪಾಟೀಲ ಅಧ್ಯಕ್ಷರಾಗಿ ಸರ್ವಾನುಮತದಿಂದ ಅವಿರೋಧವಾಗಿ ಪುನರಾಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದಾರೆ. ಡಿಸಿಸಿ ಬ್ಯಾಂಕ್ 100 ವರ್ಷಗಳ ಇತಿಹಾಸದಲ್ಲಿ 13ನೇ ಅಧ್ಯಕ್ಷರಾಗಿರುವ ಪಾಟೀಲ ಕಳೆದ 21 ವರ್ಷಗಳ ಕಾಲ
ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದಾರೆ. ಇದಲ್ಲದೇ 11 ನಿರ್ದೇಶಕ ಸ್ಥಾನಗಳಲ್ಲಿ 10 ಜನರು ಅವಿರೋಧ ಆಯ್ಕೆಗೊಂಡಿದ್ದು, ಇದು ಕೂಡ ಜಿಲ್ಲೆಯ ಸಹಕಾರಿ ರಂಗ ಅದರಲ್ಲೂ ಡಿಸಿಸಿ ಬ್ಯಾಂಕ್‌ನ ನೂರು ವರ್ಷಗಳ ಇತಿಹಾಸದಲ್ಲೇ ದಾಖಲೆ ಎನಿಸಿದೆ. ಚುನಾವಣೆ ನಡೆದಿದ್ದ ಬಸವನಬಾಗೇವಾಡಿ ಕ್ಷೇತ್ರದಲ್ಲಿ 50 ಮತದಾರರಲ್ಲಿ 47 ಮತಗಳನ್ನು ಪಡೆದು ಶಿವಾನಂದ ಪಾಟೀಲ ಬೆಂಬಲಿತ ಶೇಖರ ದಳವಾಯಿ ವಿಜಯ ಸಾಧಿಸಿದ್ದರು
ನಿರ್ದೇಶಕರ ಒತ್ತಡದಿಂದ ಮತ್ತೆ ಅಧ್ಯಕ್ಷ: ಪಾಟೀಲ
ಈ ಬಾರಿ ನಾನು ಅಧ್ಯಕ್ಷನಾಗುವ ಆಕಾಂಕ್ಷೆ ಹೊಂದಿರಲಿಲ್ಲ. ಬದಲಾಗಿ ಮಾಜಿ ಸಂಸದ ಬಿ.ಕೆ. ಗುಡದಿನ್ನಿ ಅವರ ಪುತ್ರ ರಾಜಶೇಖರ ಗುಡದಿನ್ನಿ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಇರಾದೆ ಹೊಂದಿದ್ದೆ. ಆದರೆ ನಮ್ಮ ಬ್ಯಾಂಕ್ ಪ್ರಸಕ್ತ ವರ್ಷ ಶತಮಾನೋತ್ಸವ ಸಂಭ್ರಮಲ್ಲಿರುವ ಈ ಸಂದರ್ಭದಲ್ಲಿ ನೀವೇ ಅಧ್ಯಕ್ಷರಾಗಿ ಇರಬೇಕು ಎಂದು ನಿರ್ದೇಶಕರು ಒಕ್ಕೊರಲ ಒತ್ತಡ ಹೇರಿದ್ದರಿಂದ ನಾನೇ ಅಧ್ಯಕ್ಷನಾಗಿ ಆಯ್ಕೆ ಆಗಿದ್ದೇನೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಅಧ್ಯಕ್ಷರಾಗಿ ಪುನರಾಯ್ಕೆಯಾದ ಬಳಿಕ ಮಾತನಾಡಿದ ಅವರು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆರ್ಥಿಕ ವ್ಯವಹಾರ 3452 ಕೋಟಿ ರೂ. ಇದ್ದು ಪ್ರಸಕ್ತ ವರ್ಷ 4 ಸಾವಿರ ಕೋಟಿ ರೂ.ಗೆ ತಲುಪುವ ಗುರಿ ಹಾಕಿಕೊಂಡಿದ್ದೇವೆ. ನಮ್ಮ ಬ್ಯಾಂಕ್ 35 ಶಾಖೆ ಹೊಂದಿದ್ದು, ಶತಮಾನೋತ್ಸವ ವೇಳೆಗೆ ಅರ್ಧ ಶತಕ ಶಾಖೆ ಹೊಂದುವ ಗುರಿ ಹಾಕಿಕೊಂಡಿದ್ದೇವೆ. ಇದಲ್ಲದೇ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಹಲವು ಜನಪರ ಕಾರ್ಯಕ್ರಮ ಹಾಕಿಕೊಳ್ಳುತ್ತಿದ್ದೇವೆ ಎಂದರು. ಬ್ಯಾಂಕ್ ನೂತನ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ನಿರ್ದೇಶಕರಾದ ಗುರುಶಾಂತ ನಿಡೋಣಿ, ಸಂಯುಕ್ತಾ ಪಾಟೀಲ, ಶೇಖರ ದಳವಾಯಿ, ಸೋಮನಗೌಡ ಎನ್. ಬಿರಾದಾರ, ಕಲ್ಲನಗೌಡ ಬಿರಾದಾರ, ಹನುಮಂತಗೌಡ ಬಿರಾದಾರ ಪಾಟೀಲ, ಜಿ.ಬಿ. ನಿಡೋಣಿ, ಮುರುಗೇಶ ಹೆಬ್ಟಾಳ, ಸುರೇಶ ಬಿರಾದಾರ, ಅಣ್ಣಪ್ಪ ಪೂಜಾರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.