ರಕ್ಷಣಾ ಪರಿಕರಗಳಿಲ್ಲದೇ ಉರಗ ರಕ್ಷಣೆ : ಬಹುತೇಕ ಉರಗ ರಕ್ಷಕರಿಗೆ ಕೂಲಿ ಕೆಲಸ
ಬಾಡಿಗೆ ಮನೆ ಬದುಕಿನ ಹಿನ್ನೆಲೆ,ಅಪಾಯ ಸಂಭವಿಸಿದರೆ ಕುಟುಂಬಕ್ಕಿಲ್ಲ ವಿಮೆ
Team Udayavani, Dec 8, 2020, 4:49 PM IST
ವಿಜಯಪುರ: ಪ್ರಸ್ತುತ ಸಂದರ್ಭದಲ್ಲಿ ಸಂಬಳ ಕೊಟ್ಟರೂ ಕನಿಷ್ಟ ಸೇವೆ ನೀಡದ ವ್ಯವಸ್ಥೆ ಎಲ್ಲೆಡೆಕಂಡು ಬರುತ್ತಿದೆ. ಬಡತನದ ಹಿನ್ನೆಲೆ ಇರುವನಾಲ್ಕಾರು ಯುವಕರ ತಂಡವೊಂದು ಹಣದ ನೆರವು ನಿರೀಕ್ಷಿಸದೇ ಜೀವದ ಹಂಗುತೊರೆದುಉರಗಗಳ ರಕ್ಷಣೆಯಲ್ಲಿ ತೊಡಗಿದೆ.
ಜತೆಗೆ ಹಾವು ಕಡಿತದ ಸಾವು ತಗ್ಗಿಸುವಲ್ಲಿ ಶ್ರಮಿಸುತ್ತಿದೆ. ಅಚ್ಚರಿಯಸಂಗತಿ ಎಂದರೆ ಇವರಿಗೆ ಸ್ಥಳೀಯ ಆಡಳಿತ ಸೇರಿಯಾರೊಬ್ಬರೂ ನೆರವಿಗೆ ಬಂದಿಲ್ಲ. ಇವರೂ ಯಾರ ಬಳಿಯೂ ನೆರವಿಗೆ ಕೈಯೊಡ್ಡಿಲ್ಲ. ವಿಜಯಪುರ ನಗರದಲ್ಲಿ ಸ್ವಯಂ ಉದ್ಯೋಗ ನಡೆಸುತ್ತಿದ್ದ ಕಾರ್ತಿಕ ಕಾಳೆ ದಶಕದ ಹಿಂದೆ ಹಾವುಗಳ ಸಂರಕ್ಷಣೆಯಲ್ಲಿ ತೊಡಗಿದ್ದರು. ಇದರಿಂದ ಸ್ಫೂ ರ್ತಿಗೊಂಡ ಕೆಲವರು ತಾವು ಕೂಡ ಹಾವುಗಳನ್ನು ಹಿಡಿದು ರಕ್ಷಿಸುವ ಉತ್ಸಾಹ ಆಸಕ್ತಿ ತೋರಿದರು.
ಪರಿಣಾಮ ಶಿವಯ್ಯ ಎಂಬ ಬಾಲಕ ಕಳೆದ ಮೂರು ವರ್ಷಗಳ ಹಿಂದೆ ಹಾವುಗಳನ್ನು ಹಿಡಿದು ಸಂರಕ್ಷಿಸುವ ಕಲೆ ಕರಗತ ಮಾಡಿಕೊಂಡು ತನ್ನ ಮತ್ತೂಬ್ಬ ಗೆಳೆಯ ವಿನುತ ಪುರಾಣಿಕಮಠ ಎಂಬುವನಿಗೆ ತರಬೇತಿ ನೀಡಿದ. ನಂತರ ಮಲ್ಲಿಕಾರ್ಜುನ ಮಂಗಾನವರ್ ಎಂಬ ಯುವಕ ಇವರ ತಂಡ ಸೇರಿಕೊಂಡ. ನಾಲ್ಕಾರು ವರ್ಷಗಳಿಂದ ಕಿರಣ ಕಾಳೆ ಸುಮಾರು 5 ಸಾವಿರ ಹಾವುಗಳನ್ನು ಸಂರಕ್ಷಿಸಿದ್ದರೆ, 3 ವರ್ಷಗಳಿಂದ ಉರಗ ರಕ್ಷಣೆಯಲ್ಲಿ ತೊಡಗಿರುವ ಶಿವಯ್ಯ ಸುಮಾರು 2500, 2 ವರ್ಷಗಳಿಂದ ಹಾವು ಹಿಡಿದುಕಾಡಿಗೆ ಬಿಡುವುದನ್ನು ಮಾಡುತ್ತಿರುವ ವಿನುತ್ ಸುಮಾರು 200 ಹಾವುಗಳನ್ನು ಸಂರಕ್ಷಿಸಿದ್ದಾರೆ. ಈ ಉರಗ ರಕ್ಷಕರ ಬಳಗಕ್ಕೆ ಸೇರಲು ಶ್ರವಣಕುಮಾರ ಕೊಪ್ಪದ, ಆದಿತ್ಯ ಕಳ್ಳಿಮನಿ, ಪುನಿತ್ ಕೊಟ್ಟಲಗಿ ಎಂಬ ಯುವಕರೂ ಸೇರಿಕೊಳ್ಳಲು ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.
ಯಾವುದೇ ಕ್ಷಣದಲ್ಲಿ ಎಲ್ಲಿಯೇ ಆಗಲಿಹಾವುಗಳಿರುವ ಕುರಿತು ಮಾಹಿತಿ ಬಂದಲ್ಲಿ ತಕ್ಷಣಬೈಕ್ ಏರಿ ಹೊರಟು ಬಿಡುತ್ತದೆ ಈ ಯುವಕರು ನಿತ್ಯವೂ ಹತ್ತಾರು ಕರೆಗಳನ್ನು ಸ್ವೀಕರಿಸಿ ಹಾವುಗಳನ್ನು ರಕ್ಷಿಸುತ್ತಾರೆ. ಕನಿಷ್ಟ ದಿನಕ್ಕೆ ಒಂದು ಹಾವನ್ನಾದರರಕ್ಷಿಸುತ್ತಾರೆ. ಅರ್ಧ ರಾತ್ರಿಯಲ್ಲಿ ಕರೆ ಬಂದರೂ ನಿದ್ದೆಗಣ್ಣಲ್ಲೂ ಮಳೆ-ಛಳಿಯನ್ನೂ ಲೆಕ್ಕಿಸದೇ ಜೀವದ ಹಂಗು ತೊರೆದು ಉರಗ ರಕ್ಷಣೆಗೆ ಮುಂದಾಗುತ್ತಾರೆ.ಹಾಗಂತ ಯಾರ ಬಳಿಯೂ ಹಣಕ್ಕೆ ಬೇಡಿಕೆ ಇಡಲ್ಲ.ಬಲವಂತದಿಂದ ಕೊಟ್ಟ ಹಣವನ್ನು ಪೆಟ್ರೋಲ್‌ಖರ್ಚಿಗೆ ಮಾತ್ರ ಬಳಸುತ್ತಾರೆ.ಎಷ್ಟೋ ಸಂದರ್ಭದಲ್ಲಿಪೊಲೀಸರಿಂದ ತಕರಾರು ಅನುಭವಿಸಿದ್ದಾರೆ. ಗಮನೀಯ ಅಂಶ ಎಂದರೆ ಇವರ ಯಾರಬಳಿಯೂ ಉರಗ ರಕ್ಷಣೆಯಲ್ಲಿ ಬಳಸುವ ಸಾಧನ-ಸಲಕರಣೆಗಳಿಲ್ಲ. ಒಂದೊಮ್ಮೆ ಅಪಾಯಸಂಭವಿಸಿದರೆ ಇವರ ಕುಟುಂಬಕ್ಕೆ ಆಸರೆಯಾಗಲು ವಿಮೆ-ಗುಂಪು ವಿಮೆಯಂಥ ಕನಿಷ್ಟ ಸೌಲಭ್ಯವೂ ಇಲ್ಲ.
ಕಾರ್ತಿಕ ಕಾಳೆ ಉರಗ ರಕ್ಷಣೆ ಜತೆಗೆ ಗಾಯಾಳು ವನ್ಯಜೀವಿಗಳನ್ನು ರಕ್ಷಿಸಿ ಆರೈಕೆ ಮಾಡಿ ಅರಣ್ಯ ಇಲಾಖೆಗೆ ವಹಿಸುವ ಕೆಲಸವನ್ನೂ ಮಾಡುತ್ತಾರೆ. ಆದರೆ ಗಾಯಾಳು ಹಾಗೂ ಸಂರಕ್ಷಿತ ವನ್ಯಜೀವಿಗಳನ್ನು ತುರ್ತು ಹಾಗೂ ತಾತ್ಕಾಲಿವಾಗಿ ಸಂರಕ್ಷಿಸಿ ಇಡಲು ಕನಿಷ್ಟ ಒಂದು ಸೆಲ್ಟರ್ ವ್ಯವಸ್ಥೆಯೂ ಇವರಲಿಲ್ಲ.ಗ್ಯಾಸ್ ಕಂಪನಿ ಏಜೆನ್ಸಿಯಲ್ಲಿ ಕೆಲಸ ಮಾಡುವಶಿವಯ್ಯಗೆ ದಿನಕ್ಕೆ 300 ರೂ. ಕೂಲಿ. ಕೂಲಿ ಕೆಲಸದ ಮಧ್ಯೆಯೂ ಉರಗ ರಕ್ಷಣೆ ಸಮಾಜ ಸೇವೆಮಾಡುವ ತನಗೆ ಹಾವುಗಳ ಇರುವ ಕುರಿತು ಕರೆ ಬಂದಾಗ ಕೆಲಸದಲ್ಲಿ ಸಡಿಲಿಕೆ ನೀಡಿರುವುದೇ ತಮಗೆಸಿಕ್ಕ ಸೌಭಾಗ್ಯ ಎಂದು ಮಾಲಿಕರನ್ನು ಸ್ಮರಿಸುತ್ತಾನೆ. ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ವೃದ್ಧ ತಂದೆ ಪಂಚಯ್ಯ, ತಾಯಿ ಶಾಂತಮ್ಮ ಇವರನ್ನು ಸಂರಕ್ಷಿಸುವ ಹೊಣೆ ಶಿವಯ್ಯನ ಮೇಲಿದೆ. ಮಗನ ಉರಗ ರಕ್ಷಣೆಗೀಳಿಗೆ ಹೆತ್ತವರು ಆರಂಭದಲ್ಲಿ ಆತಂಕಗೊಂಡರೂ ಈಚೆಗೆ ಹೆಮ್ಮೆ ವ್ಯಕ್ತಪಡುತ್ತಿದ್ದಾರೆ. ಗೃಹ ನಿರ್ಮಾಣ ಉದ್ಯಮ ಸಂಸ್ಥೆಯಲ್ಲಿ
ಕೆಲಸ ಮಾಡುವ ವಿನುತ್‌ನ ಹೆತ್ತವರಾದ ಅಂದಾನಯ್ಯ-ಗುರುದೇವಿ ಅವರು ಮಗನಸಾಮಾಜಿಕ ಕಾರ್ಯಕ್ಕೆ ಬೆನ್ನುತಟ್ಟುತ್ತಿದ್ದರೂ ಮಗನಬಗ್ಗೆ ಮರುಕ ವ್ಯಕ್ತಪಡಿಸುತ್ತಾರೆ. ಉರಗಪ್ರೇಮಿ ಮಲ್ಲಿಕಾರ್ಜುನನಿಗೆ ಎಂಬತ್ನಾಳಗ್ರಾಮದಲ್ಲಿ ಜಮೀನಿದ್ದರೂ ಮಾಸಿಕ 9 ಸಾವಿರ ರೂ.ಸಂಬಳಕ್ಕೆ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದಾರೆ. ತಾಯಿರೇಣುಕಮ್ಮ ಹಾಗೂ ತಂದೆ ಬಸಲಿಂಗಪ್ಪ ಅವರಿಗೆ ಮಗನ ಕುರಿತೇ ಚಿಂತೆ. ಸರ್ಕಾರ, ಸ್ಥಳೀಯ ಆಡಳಿತ, ಸಂಘ-ಸಂಸ್ಥೆಗಳು, ಅರಣ್ಯ ಇಲಾಖೆ, ಪೊಲೀಸ್ ಅಥವಾ ಜಿಲ್ಲಾಡಳಿತಉರಗ ರಕ್ಷಕ ಈ ಯುವಕರ ನೆರವಿಗೆ ಬರಬೇಕಿದೆ.ಕನಿಷ್ಟ ಇವರಿಗೆ ಗುರುತಿನ ಚೀಟಿ ನೀಡಿ, ಹಾವುಗಳರಕ್ಷಣಾ ಪರಿಕರ ಒದಗಿಸಿ, ಗುಂಪು ವಿಮೆ ಕಲ್ಪಿಸುವ ಕೆಲಸವನ್ನಾದರೂ ಮಾಡಬೇಕಿದೆ.
ವಿಜಯಪುರ ಹಾಗೂ ಇತರೆಡೆ ಹಾವುಗಳು ಕಂಡು ಬಂದಲ್ಲಿ ಉರಗ ರಕ್ಷಕ ಈ ತಂಡದವರಿಗೆ ಕರೆ ಮಾಡಿ. ಕಾರ್ತಿಕ ಕಾಳೆ ಮೊ.6360709093, 8880069995, ಶಿವಯ್ಯ ಮಠಪತಿ ಮೊ.7019030035, 8867676096, ವಿನುತ್ ಪುರಾಣಿಕಮಠ ಮೊ.6360855901, ಮಲ್ಲಿಕಾರ್ಜುನ ಮಂಗಾನವರ ಮೊ.7338084836.
ಹಾವು ಮಾತ್ರವಲ್ಲ ಇತರೆ ಪ್ರಾಣಿಗಳು ಅಪಾಯದ ಎನಿಮಲ್ ರೆಸ್ಕ್ಯೂ ಸೆಲ್ಟರ್‌ವ್ಯವಸ್ಥೆ ನಮ್ಮಲ್ಲಿ ಇಲ್ಲ. ಅರಣ್ಯ ಇಲಾಖೆ ಅಥವಾ ಜಿಲ್ಲಾಡಳಿತ ನಮಗೆ ಕನಿಷ್ಟ ವ್ಯವಸ್ಥೆ ಮಾಡಿಕೊಡಲಿ. ಜೀವವೈವಿಧ್ಯ ರಕ್ಷಣೆ ವಿಷಯದಲ್ಲಿ ಜಿಲ್ಲೆಯಲ್ಲಿ ಸಣ್ಣ ಪ್ರಾಣಿ ಸಂಗ್ರಹಾಲಯ ಸ್ಥಾಪನೆಗೆ ಮುಂದಾಗಲಿ. –ಕಾರ್ತಿಕ ಕಾಳೆ, ಉರಗ ರಕ್ಷಕ.
ಹಣಕ್ಕಾಗಿ ನಾವು ಕೆಲಸಮಾಡಲ್ಲ. ಯಾರಾದರೂ ದಾನಿಗಳು ಇದ್ದಲ್ಲಿನಮಗೆ ಉರಗ ರಕ್ಷಕಪರಿಕರಗಳನ್ನು ಕೊಡಿಸಿ ಸಾಕು. ಇನ್ನೂ ನಮ್ಮಮೇಲೆ ಕರುಣೆ ಇದ್ದಲ್ಲಿ ನಮ್ಮನ್ನೇ ನಂಬಿರುವಕುಟುಂಬದ ಹಿತರಕ್ಷಣೆಗೆ ವಿಮಾ ಸೌಲಭ್ಯ ಕಲ್ಪಿಸಿಕೊಟ್ಟರೆ ಸಾಕು.- ಶಿವಯ್ಯ ಮಠಪತಿ, ಉರಗ ರಕ್ಷಕ.
-ಜಿ.ಎಸ್.ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.