ಕಲೆಯಲ್ಲಿ ಅಡಗಿದೆ ಸಮಾಜ ಜಾಗೃತಿಗೊಳಿಸುವ ಶಕ್ತಿ: ಆಶಾಪುರ
Team Udayavani, Nov 29, 2021, 6:07 PM IST
ವಿಜಯಪುರ: ಕಲೆಯಲ್ಲಿ ಅದ್ಭುತವಾದ ಶಕ್ತಿ ಅಡಗಿದೆ. ಕಲೆ ಜಾಗೃತಿ ಮೂಡಿಸುವ ಸಾಧನವೂ ಹೌದು. ಕಲಾವಿದ ಇಡಿ ನಾಡು ಹಾಗೂ ದೇಶವನ್ನು ಹೆಮ್ಮೆ ಪಡಿಸುವಂತಹ ಕಾರ್ಯ ಮಾಡುತ್ತಾನೆ ಎಂದು ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈರಪ್ಪ ಆಶಾಪುರ ಅಭಿಪ್ರಾಯಪಟ್ಟರು.
ನಗರದಲ್ಲಿರುವ ಪ್ರವಾಸೋದ್ಯಮ ಇಲಾಖೆ ಆರ್ಟ್ ಗ್ಯಾಲರಿಯಲ್ಲಿ ವಿವಿಧ ಕಲಾವಿದರ ವಿವಿಧ ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲಾವಿದರಿಗೆ ಸದಾ ಪ್ರೋತ್ಸಾಹ ನೀಡುವ ಕಾರ್ಯ ನಡೆಯಬೇಕು. ವಿಜಯಪುರ ಕಲಾವಿದರು ಸುಂದರ ಕಲಾಕೃತಿಗಳ ಮೂಲಕ ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿದ್ದಾರೆ ಎಂದು ಬಣ್ಣಿಸಿದರು.
ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ರಮೇಶ ಚವ್ಹಾಣ ಮಾತನಾಡಿ, ಪ್ರಸ್ತುತ ರಚನೆಯಾಗಿರುವ ಕಲಾಕೃತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಶಾಶ್ವತವಾದ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಪಿ.ಎಸ್. ಕಡೇಮನಿ, ವಿ.ವಿ. ಹಿರೇಮಠ, ಬಿ.ಎಸ್. ಪಾಟೀಲ, ಮಂಜುನಾಥ ಮಾನೆ, ಡಾ| ಶಶಿಕಲಾ ಹೂಗಾರ, ರಮೇಶ ಚವ್ಹಾಣ, ಎ.ಎಸ್. ಕಾಖಂಡಕಿ, ಶ್ರೀಕಾಂತ ರಜಪೂತ, ರುದ್ರಗೌಡ ಇಂಡಿ, ಮಹಾದೇವಿ ಕೊಪ್ಪದ, ಲಿಂಗರಾಜ ಕಾಚಾಪುರ, ಮುಸ್ತಾಕ್ ತಿಕೋಟಾ, ಕುಶ ವಾಲೀಕಾರ, ರವಿ ನಾಯಕ, ಅಯಾಜ್ ಪಟೇಲ್, ವಿಶ್ವನಾಥ ಹಂಡಿ, ಯಾಮಿನಿ ಶಹಾ, ಗಜಾನನ ಕಾಳೆ ಅವರ ಕಲಾಕೃತಿಗಳು ಪ್ರದರ್ಶನಗೊಂಡವು. ಹಿರಿಯ ಕಲಾವಿದ ವಿದ್ಯಾಧರ ಸಾಲಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಎಸ್ .ಟಿ. ಕೆಂಭಾವಿ, ಶಿಲ್ಪಕಲಾ ಅಕಾಡೆಮಿಯ ಸದಸ್ಯ ಎಂ.ಕೆ. ಪತ್ತಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
Vijayapura: ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸುವುದು ನಮ್ಮ ನಿಲುವು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.