ಸಿದ್ಧಾಂತವಿಲ್ಲದ ಸಮಾಜ ನಿರ್ಮಾಣ ಮಾರಕ
Team Udayavani, Sep 30, 2018, 3:08 PM IST
ವಿಜಯಪುರ: ಪ್ರಸಕ್ತ ಸಂದರ್ಭದಲ್ಲಿ ಸಿದ್ಧಾಂತ, ಮೌಲ್ಯಗಳು ಒಂದು ರೀತಿ ಗಾಳಿಯಲ್ಲಿ ತೂರಿದ ಅವ್ಯವಸ್ಥೆಯ ಸಾಮಾಜಿಕ ಜೀವನ ಸೃಷ್ಟಿಯಾಗಿದೆ ಎಂದು ಬಿ.ಎಸ್. ಸೊಪ್ಪಿನ ವಿಷಾದಿಸಿದರು.
ನಗರದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರಿಗೆ ಏರ್ಪಡಿಸಿದ್ದ ಜಿಲ್ಲಾಮಟ್ಟದ ತರಬೇತಿ ಶಿಬಿರದಲ್ಲಿ ಮಾರ್ಗದರ್ಶನ ನೀಡಿದಅವರು, ಇಂದಿನ ದಿನಗಳಲ್ಲಿ ಸಿದ್ಧಾಂತ, ಮೌಲ್ಯಗಳು ಗಾಳಿಗೆ ತೂರಿದ್ದಾರೆ. ಈ ಹಿನ್ನೆಲೆಯಲ್ಲಿ ಮೌಲ್ಯ ಸಿದ್ಧಾಂತ ಅಳವಡಿಸಿ ಕೊಂಡು ಸಂಘಟಿತರಾಗಬೇಕು. ಬಂಡವಾಳ ಹಾಗೂ ಕಾರ್ಪೋರೇಟ್ ಕಂಪನಿಗಳ ಕೈಯಲ್ಲಿಯೇ ಪ್ರಭುತ್ವ ಕೇಂದ್ರಿಕೃತವಾಗಿದೆ.
ಈ ಎಲ್ಲ ಕಾರಣದಿಂದಾಗಿ ರೈತ ಕಾರ್ಮಿಕರು ಸೌಲಭ್ಯ ವಂಚಿತರಾಗುತ್ತಿದ್ದಾರೆ ಎಂದು ಕಿಡಿ ಕಾರಿದರು. ಕೇರಳ, ಬಂಗಾಳ, ತ್ರಿಪುರದಲ್ಲಿ ಎಡ ಪಕ್ಷಗಳ ಸರ್ಕಾರವಿದ್ದಾಗ ದುಡಿಯುವ ರೈತ-ಕಾರ್ಮಿಕರು ಎಂಎಲ್‌ಎ ಆಗಿರುತ್ತಾರೆ.
ಸದ್ಯ ಸರ್ಕಾರದಲ್ಲಿದ್ದ ಬಂಡವಾಳ ಶಾಹಿ, ಜಮೀನಾರರು ಆಡಳಿತವನ್ನು ನಿಯಂತ್ರಿಸಿ ನಿರ್ವಹಿಸುತ್ತಿದ್ದಾರೆ. ಬಡವರು,
ರೈತರ, ಕಾರ್ಮಿಕರ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ದೂರಿದರು. ಕನಿಷ್ಠ ಸೂಚ್ಯಂಕ ಬೆಲೆ ಏರಿಕೆ ಮಾಸಿಕ 18 ಸಾವಿರ ರೂ. ಕೊಡಬೇಕು. ಆದರೆ ಯಾವ ಸರ್ಕಾರಗಳೂ ಈವರೆಗೆ ಈ ಸೌಲಭ್ಯ ನೀಡಿಲ್ಲ. ಹೀಗಾಗಿ ಹಮ್ಮಿಕೊಂಡಿದ್ದ ಪಾರ್ಲಿಮೆಂಟ್ ಚಲೋ ಚಳವಳಿ ನಡೆಸಲಾಯಿತು. ಆಗ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರ ಅಂಗನವಾಡಿ ಕಾರ್ಯಕರ್ತರಿಗೆ 1500 ರೂ. ಹಾಗೂ ಸಹಾಯಕಿಯರಿಗೆ 1 ಸಾವಿರ ರೂ. ಏರಿಕೆ ಮಾಡಿದೆ ಎಂದರು.
ರೈತ-ಕಾರ್ಮಿಕ ಸಂಘಟನೆ ಪ್ರಮುಖರಾದ ಭೀಮಶಿ ಕಲಾದಗಿ, ಅಣ್ಣಾರಾಯ ಈಳಗೇರ, ಎಲ್.ವೈ. ಹಂದ್ರಾಳ, ಸುರೇಖಾ ರಜಪೂತ ಮಾತನಾಡಿದರು. ಭಾರತಿ ವಾಲಿ ಅಧ್ಯಕ್ಷತೆ ವಹಿಸಿದ್ದರು. ಸುನಂದಾ ನಾಯಕ, ಅಶ್ವಿನಿ
ತಳವಾರ, ಎಲ್.ವೈ. ನದಾಫ್, ಡಿ.ಬಿ. ಗುಗ್ಗರೆ, ಶಿವಮ್ಮ ಎಳಮೇಲಿ, ಶೈಲಾ ಕಟ್ಟಿ, ದ್ರಾಕ್ಷಾಯಣಿ ಅವಟಿ, ಎಸ್.ಆರ್. ಜೋಶಿ, ಸುಜಾತ, ರಾಜೇಶ್ವರಿ ಪೂಜಾರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.