ಪಾಪು ಧೀಮಂತ ಹೋರಾಟಗಾರ
ಅಕ್ಕಲಕೋಟದಲ್ಲಿ ಕನ್ನಡ ಭವನ ನಿರ್ಮಾಣದ ಪಾಪು ಕನಸು ನನಸು ಮಾಡಿ
Team Udayavani, Mar 19, 2020, 6:21 PM IST
ಸೊಲ್ಲಾಪುರ: ಹೊರನಾಡು ಕನ್ನಡಿಗರಿಗೆ ಸಮಸ್ಯೆಗಳು ಬಂದಾಗ, ಪಾಪು ಅವರು ತಮ್ಮ ಹೋರಾಟದ ಮೂಲಕ ಮತ್ತು ನೇರ ದಿಟ್ಟ ಬರವಣಿಗೆ ಮೂಲಕ ಸರಕಾರಕ್ಕೆ ವಿಷಯ ತಲುಪಿಸಿ ಸಮಸ್ಯೆಗಳು ಬಗೆ ಹರಿಯುವಂತೆ ಮಾಡುತ್ತಿದ್ದರು. ಇಂತಹ ಧೀಮಂತ ಕನ್ನಡಪರ ಹೋರಾಟಗಾರನನ್ನು ನಾವೆಲ್ಲರೂ ಕಳೆದುಕೊಂಡಿದ್ದೇವೆ. ಅವರ ಅಗಲಿಕೆಯಿಂದ ಕನ್ನಡಿಗರ ಮನ-ಮಂದಿರದಲ್ಲಿರುವ ದೇವರು ಎದ್ದು ಹೊದಂತಾಗಿದೆ ಎಂದು ಯುವ ಸಾಹಿತಿ ಗಿರೀಶ ಜಕಾಪುರೆ ಹೇಳಿದರು.
ಅಕ್ಕಲಕೋಟ ಪಟ್ಟಣದ ಗೆಸ್ಟ್ ಹೌಸ್‌ನಲ್ಲಿ ಆದರ್ಶ ಕನ್ನಡ ಬಳಗ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಹಿರಿಯ ಪತ್ರಕರ್ತ, ಸಾಹಿತಿ, ಹೋರಾಟಗಾರ ನಾಡೋಜ ಡಾ| ಪಾಟೀಲ ಪುಟ್ಟಪ್ಪ ಇನ್ನು ನಮಗೆ ನೆನಪು ಮಾತ್ರ. ಅವರ ಅಗಲಿಕೆಯಿಂದ ಹೊರನಾಡು ಕನ್ನಡಿಗರಿಗೆ ತುಂಬಲಾರದ ನಷ್ಟವಾಗಿದೆ ಎಂದರು.
ರಾಷ್ಟ್ರಮಟ್ಟದಲ್ಲಿ ಹೊರನಾಡು ಕನ್ನಡಿಗರನ್ನು ಒಂದು ವೇದಿಕೆಯಡಿ ತರಲು ಶ್ರಮಿಸಿದ ಅವರ ಕಾರ್ಯ ಮರೆಯುವಂತಿಲ್ಲ. ಅವರು ಬಿತ್ತಿ ಹೊದ ಹೋರಾಟದ ಬೀಜಗಳು ವೃಕ್ಷವಾಗಿ ಬೆಳೆದು ನಾಡು, ನುಡಿಯನ್ನು ಪೋಷಿಸಬೇಕು ಎಂದರು.
ನಾಡಿನ ಒಳಗೂ-ಹೊರಗೂ ಕನ್ನಡ ಗಟ್ಟಿಯಾಗಿ ನಿಲ್ಲಬೇಕಾದರೇ ಪಾಪುವಿನಂತಹ ಇನ್ನೊಬ್ಬ ಹೋರಾಟಗಾರ ಹುಟ್ಟಬೇಕು. ಅಲ್ಲದೆ ಅಕ್ಕಲಕೋಟದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕೆಂಬುದು ಪಾಪು ಅವರ ಕೊನೆ ಆಸೆಯಾಗಿತ್ತು. ಸರಕಾರ ಈ ಬಗ್ಗೆ ಬೇಗ ನಿರ್ಣಯ ಕೈಗೊಂಡು ಅವರ ಅಂತಿಮ ಆಸೆ ಪೂರೈಸಿ ಅವರ ಆತ್ಮಕ್ಕೆ ಶಾಂತಿ ಲಭಿಸುವಂತೆ ಮಾಡಬೇಕು ಎಂದು ಹೇಳಿದರು.
ಆದರ್ಶ ಕನ್ನಡ ಬಳಗ ಅಧ್ಯಕ್ಷ ಮಲಿಕಜಾನ್ ಶೇಖ್ ಮಾತನಾಡಿ, ಕನ್ನಡ ಮಾತನಾಡಬೇಕಾದರೆ ಅಕ್ಕಲಕೋಟಗೆ ಬರಬೇಕು, ಬಂದವರು ಯಾರು ಹಾಗೆ ಹೋಗುವುದಿಲ್ಲ. ಕನ್ನಡದೊಂದಿಗೆ ಕನ್ನಡಿಗರಾಗಿ ಹೋಗುತ್ತಾರೆ. ಇಂತಹ ಅಕ್ಕಲಕೋಟೆಯಲ್ಲಿ ಮಹಾಮೇಳ ನಡೆಯುತ್ತಿರುವುದು ತುಂಬಾ ಸಂತೋಷ ಎಂದು ಪಾಪು ಹೇಳಿದ್ದರೆಂದು ಸ್ಮರಿಸಿದರು.
ಹಿರಿಯ ಸಾಹಿತಿ ಅ.ಬಾ. ಚಿಕ್ಕಮಣೂರ, ಶಿಕ್ಷಕರಾದ ವಿದ್ಯಾಧರ ಗುರವ, ಸಿದ್ರಾಮಯ್ಯ ಸ್ವಾಮಿ ಸಂತಾಪ ವ್ಯಕ್ತಪಡಿಸಿದರು. ನಾಡೋಜ ದಿವಂಗತ ಡಾ| ಪಾಟೀಲ ಪುಟ್ಟಪ್ಪನವರ ಪ್ರತಿಮೆಗೆ ಪೂಜೆ ಸಲ್ಲಿಸಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಮೌನಾಚಾರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆದರ್ಶ ಕನ್ನಡ ಬಳಗದ ರಾಜಶೇಖರ ಉಮರಾಣಿಕರ, ಮಹೇಶ ಮೇತ್ರಿ, ದಿನೇಶ ಥಂಬದ, ದಿನೇಶ ಚವ್ಹಾಣ, ಶರಣು ಕೋಳಿ, ಕಲ್ಲಪ್ಪ ಕುಟನೂರ, ಸಂಗಣ್ಣ ಫತಾಟೆ, ವಾಸುದೇವ ದೇಸಾಯಿ, ಶರದಚಂದ್ರ ಗಂಗೊಂಡಾ, ಗೌರಿಶಂಕರ ಕೊನಾಪುರೆ ಇದ್ದರು. ಶರಣಪ್ಪ ಫುಲಾರಿ ನಿರೂಪಿಸಿದರು. ಸಂತೋಷ ಪರಿಟ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.