ಸೈನಿಕರ ತ್ಯಾಗ ಬಲಿದಾನದಿಂದ ದೇಶದಲ್ಲಿ ನೆಮ್ಮದಿ: ಹಂಚಲಿ


Team Udayavani, Mar 5, 2018, 2:42 PM IST

vij-5.jpg

ನಿಡಗುಂದಿ: ದೇಶದಲ್ಲಿ ಜನರ ನೆಮ್ಮದಿ ಜೀವನಕ್ಕೆ ಸೈನಿಕರ ತ್ಯಾಗ ಬಲಿದಾನವೇ ಕಾರಣ. ವೈಯಕ್ತಿಕ ಜೀವನ ಬದಿಗೊತ್ತಿ ದೇಶ ರಕ್ಷಣೆ ಧ್ಯೇಯವಾಗಿಸಿಕೊಂಡಿರುವ ಅವರ ಕಾರ್ಯ ಎಲ್ಲರಿಗೂ ಮಾದರಿ ಎಂದು ಉಪನ್ಯಾಸಕ ಬಸವರಾಜ ಹಂಚಲಿ ಹೇಳಿದರು.

ರವಿವಾರ ಪಟ್ಟಣದ ರುದ್ರೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ನಡೆದ ನೂತನ ನಿಡಗುಂದಿ ತಾಲೂಕು ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ಸುಭ್ರದತೆಗಾಗಿ ಗಡಿ ಭಾಗದಲ್ಲಿ ದೇಶದ್ರೋಹಿಗಳ ವಿರುದ್ಧ ಸೈನಿಕರು ನಿತ್ಯ ರಣಕಹಳೆ ಮೊಳಗಿಸಿ ಹೋರಾಟ ನಡೆಸುತ್ತಾರೆ. ಅವರ ದೇಶ ರಕ್ಷಣೆ ಕಾರ್ಯದಿಂದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟು ಸುಂದರ ಬದುಕು ನಡೆಸಲು ಕಾರಣವಾಗಿದೆ. ಕಳೆದ ಹಲವಾರು ವರ್ಷಗಳಿಂದ ದೇಶಕ್ಕಾಗಿ ದುಡಿದು ನಿವೃತ್ತಿ ಪಡೆದರೂ ತಮ್ಮ ಸೇವೆ ಮುಂದುವರಿಸುವ ನಿಟ್ಟಿನಲ್ಲಿ ಸದ್ಯ ನಿಡಗುಂದಿ ಪಟ್ಟಣದಲ್ಲಿ ನಿವೃತ್ತ ಸೈನಿಕರು ಸಂಘ ನಿರ್ಮಿಸಿ ಸಮಾಜ ರಕ್ಷಣೆಯ ಪಣ ತೊಡುತ್ತಿರುವ ಕಾರ್ಯ ಅನನ್ಯವಾಗಿದೆ ಎಂದರು.

ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಂಗಮೇಶ ಕೆಂಭಾವಿ ಮಾತನಾಡಿ, ಹಲವಾರು ವರ್ಷಗಳಿಂದ ದೇಶದ ಗಡಿಯಲ್ಲಿ ಹಗಲು, ರಾತ್ರಿ ಮಳೆ, ಚಳಿ, ಬಿಸಿಲು ಎನ್ನದೇ ದೇಶವೇ ನನ್ನ ಉಸಿರು ಎಂದು ಕೆಚ್ಚದೆಯಿಂದ ದೇಶದ್ರೋಹಿಗಳನ್ನು ಸದೆಬಡಿದು ನಮ್ಮ ದೇಶದ ಶಕ್ತಿ ಹೆಚ್ಚಿಸುತ್ತಿರುವ ಸೈನಿಕರ ಕೆಲಸವನ್ನು ಪ್ರತಿಯೊಬ್ಬರು ಗೌರವದಿಂದ ಕಾಣಬೇಕು. ಜಾತಿ, ಭೇದ ಲೆಕ್ಕಿಸದೆ ತಮ್ಮ ಜೀವನವನ್ನು ತಾಯಿ ನಾಡಿಗೆ ಅರ್ಪಿಸುವ ಅವರು ದೇಶದ ರಿಯಲ್‌ ಹೀರೋಗಳು ಎಂದರು.

ನಿಡಗುಂದಿ ತಾಲೂಕು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಜಿ.ಎಲ್‌. ಮನಹಳ್ಳಿ ಮಾತನಾಡಿ, ದೇಶ ಮೊದಲು, ದೇಶದ ಜನರ ನೆಮ್ಮದಿ ನಮಗೆ ಅತ್ಯವಶ್ಯ. ಅವರ ರಕ್ಷಣೆಗೆ ಸೈನಿಕರು ಸದಾ ಸಿದ್ಧರಾಗಿರುತ್ತಾರೆ. ಹಲವಾರು ವರ್ಷಗಳ ಕಾಲ ದೇಶಸೇವೆ ಮಾಡಿದ ನಾವೆಲ್ಲ ಈಗ ನಾಡ ಸೇವೆಗೆ ಸಿದ್ಧರಾಗಿದ್ದೇವೆ. ನಮ್ಮ ಕಷ್ಟ ನಷ್ಟಗಳ ಮಧ್ಯ ನಿಮ್ಮ ರಕ್ಷಣೆಗೆ ನಾವುಗಳು ದಿನಪೂರ್ತಿ ಕಾಯಕ ಮಾಡಲು ಸಿದ್ಧರಾಗಿದ್ದೇವೆ ಎನ್ನುವ ಸಂಕಲ್ಪದೊಂದಿಗೆ ಸಂಘಟನೆಗೆ ಚಾಲನೆ ನೀಡಲಾಗಿದೆ ಎಂದರು.

ರುದ್ರೇಶ್ವರ ಸಂಸ್ಥಾನ ಮಠದ ರುದ್ರಮುನಿ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶಿಕ್ಷಣ ಪ್ರೇಮಿ ಸಿದ್ದಣ್ಣ ನಾಗಠಾಣ, ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ, ಜಿ.ಬಿ. ಬಿರಾದಾರ, ಪ್ರಭಾರಿ ಮುಖ್ಯಾಧಿಕಾರಿ ಡಿ.ಎನ್‌. ತಹಶೀಲ್ದಾರ್‌ ಮಾತನಾಡಿದರು.

ರಾಮನಗೌಡ ಬಿರಾದಾರ, ಶಿವಾನಂದ ರೂಢಗಿ, ವೈ.ಎಸ್‌. ಗಂಗಶೆಟ್ಟಿ, ಎಸ್‌.ಆರ್‌. ವಿಭೂತಿ, ಬಸವರಾಜ ಗಣಿ, ಭೀಮಣ್ಣ ವಿಭೂತಿ, ಹೊಳಿಬಸಪ್ಪ ಮನಹಳ್ಳಿ, ಗೂಳಪ್ಪ ಅಂಗಡಿ, ಜಟ್ಟೆಪ್ಪ ಯಲಗೂರ, ಸಂಗಪ್ಪ ಕೂಡಗಿ, ಬಸವರಾಜ ಬಿರಾದಾರ, ಮಲ್ಲಪ್ಪ ಗುಂಡಿನಮನಿ, ಶ್ರೀಶೈಲ ದೊಡಮನಿ, ಆನಂದ ಕಮತಗಿ, ಬಿ.ಐ. ಯಡ್ರಾಮಿ ಮುಂತಾದವರಿದ್ದರು. ಯಾಸಿನ್‌ ಮುಲ್ಲಾ ನಿರೂಪಿಸಿದರು. ಎಸ್‌.ಎಸ್‌. ಹುಬ್ಬಳ್ಳಿ ವಂದಿಸಿದರು.

ಟಾಪ್ ನ್ಯೂಸ್

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ

India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ

BPL-CARD

Food Department Operation: ಬಿಪಿಎಲ್‌ ಚೀಟಿದಾರರಿಗೆ ಎಪಿಎಲ್‌ ಕಾವು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

6-muddebihala

Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

MB-Patil-Minister

Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.