ನೀರಿನ ಸಮಸ್ಯೆ ಪರಿಹರಿಸಿ
Team Udayavani, Dec 15, 2021, 6:01 PM IST
ಇಂಡಿ: ಇಂಡಿ ತಾಲೂಕಿನ ಸಮಗ್ರ ನೀರಾವರಿ ಯೋಜನೆಗಳ ಕುರಿತು ಶಾಸಕ ಯಶವಂತರಾಯಗೌಡ ಪಾಟೀಲ ಬೆಳಗಾವಿಯ ಛಳಿಗಾಲ ಅಧಿವೇಶನಲ್ಲಿ ಧ್ವನಿ ಎತ್ತಿದರು.
ನಮ್ಮ ತಾಲೂಕಿನ ಜನ ಕುಡಿಯುವ ನೀರಿಗೆ ಪರಿತಪಿಸವಂತಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದು ನಮ್ಮ ಪಾಲಿನ ನೀರು ಹಂಚಿಕೆ ಮಾಡಬೇಕು. ನೀರಾವರಿ ಯೋಜನೆ ಕುರಿತು ಕಳೆದ ಎರಡು ವರ್ಷದಿಂದ ಪ್ರಶ್ನೆ ಕೇಳುತ್ತ ಬಂದಿದ್ದೇನೆ. ಕುಡಿಯುವ ನೀರಿನ ತೊಂದರೆ ಅನುಭವಿಸುವಂತ ಪ್ರದೇಶ ನಮ್ಮದಾಗಿದ್ದು, ಅಂತಹ ಪ್ರದೇಶಕ್ಕೆ ನೀರು ಬಂದರೆ ಸಮಸ್ಯೆ ಪರಿಹಾರವಾಗಿ ಅನುಕೂಲವಾಗುತ್ತದೆ. ಈ ಕುರಿತು ಸದನದಲ್ಲಿ ಅರ್ಧ ಘಂಟೆವರೆಗೆ ಚರ್ಚೆ ಕೂಡಾ ನಡೆದಿದ್ದು ಮಾಸ್ಟರ್ ಪ್ಲ್ಯಾನ್ ಕಮಿಟಿಯಲ್ಲಿ ನಿಗದಿ ಪ್ರಕಾರ ನಮಗೆ ನೀರು ಹಂಚಿಕೆ ಮಾಡಿ ಎಂದು ಸಭಾ ಅಧ್ಯಕ್ಷರಿಗೆ ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ನೀರಾವರಿ ಸಚಿವ ಸಚಿವ ಗೋವಿಂದ ಕಾರಜೋಳ, ಇಂಡಿ ಭಾಗದ ನೀರಾವರಿ ಯೋಜನೆಗೆ 3000ಕ್ಕೂ ಅಧಿಕ ಕೊಟಿ ಹಣ ವ್ಯಯವಾಗಲಿದ್ದು ನೀರಾವರಿ ಯೊಜನೆಗಳಿಗೆ ಹಂತ ಹಂತವಾಗಿ ಅನುದಾನ ನೀಡಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.