ಪುರಸಭೆ ಉಪಾಧ್ಯಕ್ಷರಾಗಿ ಶ್ರೀದೇವಿ ಲಮಾಣಿ ಆಯ್ಕೆ
Team Udayavani, Mar 3, 2018, 2:42 PM IST
ಬಸವನಬಾಗೇವಾಡಿ: ಪುರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶ್ರೀದೇವಿ ಲಮಾಣಿ 13 ಮತ ಪಡೆದು ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. 23 ಸದಸ್ಯ ಬಲ ಹೊಂದಿದ ಪುರಸಭೆಯಲ್ಲಿ 10 ಕಾಂಗ್ರೆಸ್, 9 ಬಿಜೆಪಿ, 4 ಪಕ್ಷೇತರ ಸದಸ್ಯರು ಇದ್ದಾರೆ. ಶುಕ್ರವಾರ ಜರುಗಿದ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಕಾಂಗ್ರೆಸ್ ನಿಂದ ಶ್ರೀದೇವಿ ಲಮಾಣಿ, ಸಂಜೀವ ಕಲ್ಯಾಣಿ ಹಾಗೂ ಬಿಜೆಪಿ ಯಿಂದ ಶ್ರೀಕಾಂತ ನಾಯಕ ನಾಮಪತ್ರ ಸಲ್ಲಿಸಿದ್ದರು. ಕೊನೆ ಗಳಿಗೆಯಲ್ಲಿ ಸಂಜೀವ ಕಲ್ಯಾಣಿ ನಾಮಪತ್ರ ಹಿಂಪಡೆದರು.
ನಂತರ ಜರುಗಿದ ಚುನಾವಣೆಯಲ್ಲಿ ಶ್ರೀದೇವಿ ಲಮಾಣಿ ಪರವಾಗಿ ಶಾಸಕ ಶಿವಾನಂದ ಪಾಟೀಲ, ಬಿಜೆಪಿಯ ಬಾಗವ್ವ ಹಂಜಗಿ, ಮುರುಗೇಶ ನಾಯ್ಕೋಡಿ, ಮುತ್ತಪ್ಪ ಉಕ್ಕಲಿ, ಗುರಲಿಂಗಪ್ಪ ಬಸರಕೋಡ, ನಜೀರಮ್ಮದ ಗಣಿ, ಗೌರಮ್ಮ ಪೂಜಾರಿ, ಸಂಜೀವ ಕಲ್ಯಾಣಿ, ಬಸಪ್ಪ ತುಂಬಗಿ, ಶ್ರೀದೇವಿ ಲಮಾಣಿ, ಪಕ್ಷೇತರರಾದ ಸಂಗನಬಸಪ್ಪ ಪೂಜಾರಿ, ಪರಜಾನ್ ಚೌಧರಿ, ರೇಣುಕಾ ಮೇಲ್ದಾಪುರ, ಸೇರಿದಂತೆ 13 ಸದಸ್ಯರು ಕೈ ಎತ್ತಿದರು.
ಶ್ರೀಕಾಂತ ನಾಯಕ ಪರವಾಗಿ ಕಾಂಗ್ರೆಸ್‌ನ ಕಮಲಾಸಾಬ ಕೊರಬು, ಬೋರಮ್ಮ ಜೀರ, ಪರಸಪ್ಪ ಅಡಗಿಮನಿ, ಸಿದ್ರಾಮಪ್ಪ ಕಿಣಗಿ, ಸತ್ಯವ್ವ ಕೋಳುರ, ನೀಲಪ್ಪ ನಾಯಕ, ಚಂದ್ರಶೇಖರ ಅಂಬಳನೂರ, ಕಮಲಾಬಾಯಿ ಗಾಯಕವಾಡ, ಶ್ರೀಕಾಂತ ನಾಯಕ, ಜ್ಯೋತಿ ನಾಯಕ, ಪಕ್ಷೇತರ ಪ್ರವೀಣ ಪವಾರ ಸೇರಿದಂತೆ 11 ಸದಸ್ಯರು ಕೈ ಎತ್ತಿದರು ಎಂದು ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್ ಎಂ.ಎನ್. ಚೋರಗಸ್ತಿ ತಿಳಿಸಿದರು.
ತೀವ್ರ ಕೂತುಹಲ: ಇದುವರೆಗೂ ಉಪಾಧ್ಯಕ್ಷರಾಗಿದ್ದ ಕಾಂಗ್ರೆಸ್‌ನ ಸಂಜೀವ ಕಲ್ಯಾಣಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ತೆರವುಗೊಂಡ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಇಬ್ಬರು ಬಿಜೆಪಿಯಿಂದ ಒಬ್ಬರು ನಾಮಪತ್ರ ಸಲ್ಲಿಸಿದ್ದರು. ಕೊನೆಯಲ್ಲಿ ಸಂಜೀವ ಕಲ್ಯಾಣಿ ನಾಮಪತ್ರ ಹಿಂಪಡೆದಿದ್ದರಿಂದ ಕಣದಲ್ಲಿ ಕಾಂಗ್ರೆಸ್‌ನ ಶ್ರೀದೇವಿ ಲಮಾಣಿ, ಬಿಜೆಪಿಯಿಂದ ಶ್ರೀಕಾಂತ ನಾಯಕ ಉಳಿದರು. ನಂತರ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ ಕೆಲ ಸದಸ್ಯರು ಬಿಜೆಪಿ ಅಭ್ಯರ್ಥಿ ಪರ ಕೈ ಎತ್ತಿದರೆ, ಕೆಲ ಬಿಜೆಪಿ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿ ಪರ ಕೈ ಎತ್ತುವ ಮೂಲಕ ಅಚ್ಚರಿ ಮೂಡಿಸಿದರು. ಕೊನೆಯಲ್ಲಿ ಕಾಂಗ್ರೆಸ್
ಅಭ್ಯರ್ಥಿ ಉಪಾಧ್ಯಕ್ಷರಾಗಿ ಆಯ್ಕೆಯಾದರು,
ವಿಜಯೋತ್ಸವ: ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯರ್ತರು ಶಾಸಕ ಶಿವಾನಂದ ಪಾಟೀಲ ಪರ ಘೋಷಣೆ ಕೂಗಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ನಂತರ ಜರುಗಿದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಆಯ್ಕೆಯಾದ ಶ್ರೀದೇವಿ ಲಮಾಣಿ ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹಾಗೂ ಕಾರ್ಯಕರ್ತರು ಸನ್ಮಾನಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಪುರಸಭೆ ಒಟ್ಟು 23 ಸದಸ್ಯರಲ್ಲಿ 13 ಸದಸ್ಯರು ಕಾಂಗ್ರೆಸ್ ಪರವಾಗಿದ್ದರು. ಬಿಜೆಪಿ ಕುತಂತ್ರದಿಂದ ಕೆಲ ಸದಸ್ಯರು ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸದರು ಕೂಡ ಕೆಲ ಬಿಜೆಪಿ ಸದಸ್ಯರು ಕಾಂಗ್ರೆಸ್‌ಗೆ ಬೆಂಬಲಿಸುವುದರ ಮೂಲಕ ಬಿಜೆಪಿ ಉಪಾಧ್ಯಕ್ಷ ಸ್ಥಾನ ಪಡೆಯವಲ್ಲಿ ವಿಫಲಾಗಿದೆ ಎಂದರು.
ಶಾಸಕ ಶಿವಾನಂದ ಪಾಟೀಲ ಅವರ ಮಾರ್ಗದರ್ಶನ ಜೊತೆಗೆ ಪುರಸಭೆ ಸದಸ್ಯರ ಬೆಂಬಲದಿಂದ ಮತ್ತೆ ಪುರಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮುಂದೆ ಎಲ್ಲ ಸದಸ್ಯರು ಪಕ್ಷಾತೀತವಾಗಿ ಪಟ್ಟಣದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹರೀಶ ಅಗರವಾಲ, ಬಸವರಾಜ ಕೋಟಿ, ನಿಸಾರ ಚೌಧರಿ, ಶಂಕರಗೌಡ ಬಿರಾದಾರ, ಭರತ ಅಗರವಾಲ, ಸಂಗಮೇಶ ಒಲೇಕಾರ, ಮಹಾಂತೇಶ ಹಂಜಗಿ, ರವಿ ರಾಠೊಡ, ದಯಾನಂದ ಜಾಲಗೇರಿ, ವಿಶ್ವನಾಥ ನಿಡಗುಂದಿ, ಅಜೀಜ್ ಭಾಗವಾನ, ಮುತ್ತು ಉಕ್ಕಲಿ, ಕಾಶೀನಾಥ ರಾಠೊಡ, ಸಂಜೀವ ಕಲ್ಯಾಣಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.