ಹಸೆಮಣೆ ಏರಿ 15 ದಿನದಲ್ಲೇ ಕೋವಿಡ್ ಸೇವೆಗೆ ಹಾಜರಾದ ನರ್ಸ್
ಕುಟುಂಬಸ್ಥರ ಪ್ರೋತ್ಸಾಹದಿಂದ ಸೇವೆ
Team Udayavani, May 8, 2021, 12:56 PM IST
ಇಂಡಿ: ಹಸೆಮಣೆ ಏರಿ ಕೇವಲ 15 ದಿನಗಳಲ್ಲಿಯೇ ಮತ್ತೆ ಕೆಲಸಕ್ಕೆ ಹಾಜರಾಗುವ ಮೂಲಕ ಕೋವಿಡ್ ರೋಗಿಗಳ ಸೇವೆಯಲ್ಲಿ ದೇವರನ್ನು ಕಾಣುತ್ತಿದ್ದಾರೆ ಸ್ಟಾಫ್ ನರ್ಸ್.
ಹೌದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ (ಸ್ಟಾಫ್ ನರ್ಸ್) ಸೇವೆ ಸಲ್ಲಿಸುತ್ತಿರುವ ಭಾರತಿ ಹಿಟ್ನಳ್ಳಿ ಕೇವಲ 25 ದಿನಗಳ ಹಿಂದೆಯಷ್ಟೇ ತಾಲೂಕಿನ ಲೋಣಿ ಗ್ರಾಮದ ಜಟ್ಟಿಂಗರಾಯ ಉಟಗಿ ಎಂಬವರ ಜತೆ ಮದುವೆಯಾಗಿದ್ದರು. ಈಗ ಕಳೆದ ಹತ್ತು ದಿನಗಳಿಂದ ಮತ್ತೆ ಸೇವೆಗೆ ಹಾಜರಾಗಿ ಕೋವಿಡ್ ರೋಗಿಗಳ ಆರೈಕೆ ಮಾಡುತ್ತಿದ್ದಾರೆ.
ಭಾರತಿ ಹಿಟ್ನಳ್ಳಿ ಕಳೆದ ಆರು ತಿಂಗಳಿಂದ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ (ಗುತ್ತಿಗೆ ಆಧಾರದ ಮೇಲೆ) ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ 15 ದಿನಗಳ ಹಿಂದೆಯಷ್ಟೇ ಮದುವೆ ಕೂಡ ಆಗಿದ್ದರು. ಸೇವೆಗೆ ಹೋಗಬೇಕೆಂಬಬಯಕೆ ಇದ್ದರೂ ಪತಿ, ಅತ್ತೆ, ಮಾವ ಏನೆನ್ನುತ್ತಾರೋ?ಎನ್ನುವ ಭಯದಿಂದ ಸುಮ್ಮನಿದ್ದ ಭಾರತಿ ಕೊನೆಗೆ “ನಾನು ಸೇವೆಗೆ ಹೋಗಬೇಕೆಂದಿದ್ದೇನೆ’ ಎಂದು ಕೇಳಿ ಮನೆಯವರ ಒಪ್ಪಿಗೆ ಪಡೆದು ಸೇವೆಗೆ ಹಾಜರಾಗಿದ್ದಾರೆ.
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದು ಅಷ್ಟು ಸುಲಭವಲ್ಲ. ಆದರೂ ಈ ಸ್ಟಾಫ್ ನರ್ಸ್ ರೋಗಿಗಳಬಿ.ಪಿ, ಶುಗರ್ ಪರೀಕ್ಷೆ ಮಾಡುವುದು, ಜ್ವರ ಸೇರಿದಂತೆರೆಮ್‌ಡೆಸಿವಿಯರ್, ಸಪ್ರಾಕ್ಸಿನ್ ಸೇರಿದಂತೆ ಅವಶ್ಯಕ ಇಂಜೆಕ್ಸನ್ ನೀಡುವುದು, ಆಕ್ಸಿಜನ್ ಕೊರತೆ ಇದ್ದರೆ ಅವರಿಗೆ ಆಮ್ಲಜನಕ ಹಚ್ಚುವುದು..ಹೀಗೆ ವೈದ್ಯರ ಮಾರ್ಗದರ್ಶನದಲ್ಲಿ ಹಲವಾರು ಚಿಕಿತ್ಸೆ ನೀಡುತ್ತಿದ್ದಾರೆ.
ಆಸ್ಪತ್ರೆಯಲ್ಲಿ ರೋಗಿಗಳ ಸೇವೆ ಮಾಡುವ ಅವಕಾಶ ಎಲ್ಲರಿಗೂಸಿಗುವುದಿಲ್ಲ. ಆದರೆ ನಿನಗೆ ಆಅವಕಾಶ ಸಿಕ್ಕಿದೆ. ಹೀಗಾಗಿ ನೀನು ನಮ್ಮ ಸೇವೆಗಿಂತಲೂ ಕೋವಿಡ್ ಪೀಡಿತರಸೇವೆ ಮಾಡು, ಕಷ್ಟದಲ್ಲಿದ್ದವರ ಸೇವೆ ಮಾಡುವುದೇ ನಿಜವಾದ ಸೇವೆ ಎಂದು ಅತ್ತೆ-ಮಾವ ನನ್ನನ್ನು ಹುರಿದುಂಬಿಸಿ, ಪ್ರೋತ್ಸಾಹಿಸಿದ್ದಾರೆ. ತುಂಬಆಸಕ್ತಿಯಿಂದ ಸೇವೆ ಮಾಡುತ್ತಿದ್ದೇನೆ. ನಾನು ಮಾಡಿದ ಕೆಲಸ ನನಗೆ ತೃಪ್ತಿ ತಂದಿದೆ. –ಭಾರತಿ ಹಿಟ್ನಳ್ಳಿ, ಸ್ಟಾಫ್ ನರ್ಸ್.
ಕೋವಿಡ್ ರೋಗ ವೇಗವಾಗಿ ಹರಡುತ್ತಿದ್ದರೂ ನನ್ನ ಪತ್ನಿ ರೋಗಿಗಳ ಆರೈಕೆ ಮಾಡುತ್ತೇನೆ. ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ನಾನು ಆಸ್ಪತ್ರೆಗೆ ಹೋದರೆ ನನ್ನ ಕೈಲಾದಷ್ಟು ಜೀವ ಉಳಿಸಲು ಸಾಧ್ಯವಾಗುತ್ತದೆ. ನನಗೆ ಅವಕಾಶ ಕೊಡಿ ಎಂದು ಕೇಳಿದಾಗಮನೆಯಲ್ಲಿ ಎಲ್ಲರೂ ಅವಳ ಒಳ್ಳೆಯ ಭಾವನೆಗೆಬೆಲೆ ಕೊಟ್ಟು ಆಸ್ಪತ್ರೆಗೆ ರೋಗಿಗಳ ಸೇವೆ ಮಾಡಲು ಕಳಿಸಿದ್ದೇವೆ. –ಜಟ್ಟಿಂಗರಾಯ ಉಟಗಿ, ಸ್ಟಾಫ್ ನರ್ಸ್ ಪತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.