Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Team Udayavani, Sep 7, 2024, 8:30 PM IST

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

ವಿಜಯಪುರ: “ಸೈಕ್ಲಿಸ್ಟ್‌ಗಳ ತವರು’ ಎಂದೇ ಖ್ಯಾತಿ ಪಡೆದ ವಿಜಯಪುರದಲ್ಲಿ “ಸೈಕ್ಲಿಂಗ್‌ ವೆಲೋ ಡ್ರೋಮ್‌’ ನನಸಾಗುವ ಕಾಲ ಸನ್ನಿ ಹಿತ ವಾಗಿದೆ. 9 ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು, “ಸೈಕ್ಲಿಂಗ್‌ ವೆಲೋಡ್ರೋಮ್‌’ ಹೊಂದಿದ ರಾಜ್ಯದ ಮೊದಲ ಜಿಲ್ಲೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ.

ಸೈಕ್ಲಿಸ್ಟ್‌ಗಳ ದಶಕಗಳ ಕನಸಾಗಿದ್ದ ಈ ವೆಲೋಡ್ರೋಮ್‌ನ ಕಾಮಗಾರಿ ತಾಂತ್ರಿಕ ಕಾರಣಗಳಿಂದ ನನೆಗುದಿಗೆ ಬಿದ್ದಿತ್ತು. ಈಗ ಅಡೆತಡೆಗಳು ನಿವಾರಣೆಯಾಗಿ ಕಾಮಗಾರಿ ಚುರುಕು ಪಡೆದಿದ್ದು, ಸುಣ್ಣ- ಬಣ್ಣದ ಕಾರ್ಯ ನಡೆಯುತ್ತಿದೆ. ಶೀಘ್ರ ದಲ್ಲೇ ಬಳಕೆಗೆ ಸಿದ್ಧವಾಗಲಿದೆ. ವಿಜಯಪುರ ಸೈಕ್ಲಿಸ್ಟ್‌ಗಳ ತವರು. ಅನೇಕ ಪ್ರತಿಭಾನ್ವಿತ ಸೈಕ್ಲಿಸ್ಟ್‌ ಗಳು ಇಲ್ಲಿದ್ದಾರೆ. ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ಸದ್ಯ ಅಂದಾಜು 500 ಮಂದಿ ಸೈಕ್ಲಿಸ್ಟ್‌ಗಳಿದ್ದು, ಕ್ರೀಡಾ ಇಲಾಖೆಯ ಹಾಸ್ಟೆಲ್‌ನಲ್ಲೇ 60 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಹೀಗಾಗಿಯೇ ಸುಸಜ್ಜಿತವಾದ ವೆಲೋ ಡ್ರೋಮ್‌ಗಾಗಿ ಸೈಕ್ಲಿಸ್ಟ್‌ ಗಳು ಬೇಡಿಕೆ ಮಂಡಿಸಿದ್ದರು. ಅಂತೆಯೇ, 2015ರ ಜೂನ್‌ನಲ್ಲಿ ನಗರದ ಹೊರವಲಯದ ಭೂತನಾಳ ಗ್ರಾಮದ ಸಮೀಪ ವೆಲೋ ಡ್ರೋಮ್‌ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಟೆಂಡರ್‌ ಪ್ರಕ್ರಿಯೆ ಎಲ್ಲವೂ ಮುಗಿದು, 2016 ರಿಂದ 18ರವರೆಗೆ ಕಾಮಗಾರಿಯೂ ಜರುಗಿತ್ತು. ಎಲ್ಲವೂ ಸುಗಮವಾಗಿದ್ದರೆ, 8 ಎಕರೆ ವಿಶಾಲವಾದ ಪ್ರದೇಶದ ಪೈಕಿ 4 ಎಕರೆಯಷ್ಟು ಜಾಗದಲ್ಲಿ ವೆಲೋಡ್ರೋಮ್‌ 5-6 ವರ್ಷಗಳ ಹಿಂದೆಯೇ ತಲೆ ಎತ್ತಬೇಕಿತ್ತು. ಆದರೆ, ಪರಿಣತರು ಇರದ ಕಾರಣಕ್ಕೆ ತಾಂತ್ರಿಕ ತೊಡುಕುಗಳು ಉದ್ಭವಿಸಿ ದ್ದವು. ಹೀಗಾಗಿಯೇ 2018ರ ನಂತರ 4 ವರ್ಷ ಪ್ರಗತಿ ಕಾಣದೆ, ಕಾಮಗಾರಿ ನಿಂತಿತ್ತು. 2022ರಲ್ಲಿ ಆಗಿನ ಡೀಸಿ ಸುನೀಲ್‌ ಕುಮಾರ್‌ ಮುತುವರ್ಜಿಯಿಂದಾಗಿ ವೆಲೋ ಡ್ರೋಮ್‌ ಮರುಜೀವ ಪಡೆದಿತ್ತು.

ಕೊಲ್ಕತ್ತಾ ಮೂಲ ದ ಕನ್ಸಲ್ಟೆಂಟ್‌ ಪಿನಾಯಕ್‌ ಬೈಸಕ್‌ ಎಂಬು ವರನ್ನು ಕರೆಸಿ, ಕಾಮಗಾರಿಯನ್ನು ತೋರಿಸ ಲಾಗಿತ್ತು. ಅವರು ಕಾಮಗಾರಿಯ ನ್ಯೂನತೆಗಳನ್ನು ಪಟ್ಟಿ ಮಾಡಿದ್ದರು. ಬಳಿಕ ಸೈಕ್ಲಿಂಗ್‌ ಫೆಡರೇಷನ್‌ ಆಫ್‌ ಇಂಡಿಯಾ (ಸಿಎಫ್‌ಐ)ದ ಅನುಮತಿ ಪಡೆದು ಕಾಮಗಾರಿ ಮರು ಆರಂಭಿಸಲಾಗಿತ್ತು.

3 ಸುತ್ತಾದರೆ 1 ಕಿ.ಮೀ.

ಸೈಕ್ಲಿಸ್ಟ್‌ಗಳ ಅಭ್ಯಾಸ, ನೈಪುಣ್ಯತೆ ಹೆಚ್ಚಿಸಲು ಈ ವೆಲೋಡ್ರೋಮ್‌ ಸಹಕಾರಿಯಾಗುವ ನಿಟ್ಟಿನಲ್ಲಿ ನಿರ್ಮಿಸಲಾಗಿದೆ. ಇದರ ಸುತ್ತಳತೆಯು 333.3 ಮೀಟರ್‌ ಇದೆ. ಇದನ್ನು 3 ಸುತ್ತು ಹಾಕಿದರೆ, 1 ಕಿ.ಮೀ. ಆಗಲಿದೆ. ಈಗಾಗಲೇ ಸಂಪೂರ್ಣವಾಗಿ ಸಿವಿಲ್‌ ಕಾಮಗಾರಿ ಮುಗಿದಿದೆ. ಅಪೆಕ್ಸ್‌ ಪೈಂಟ್‌ ಕಾರ್ಯ ಮಾಡಲಾಗುತ್ತಿದೆ ಎನ್ನುತ್ತಾರೆ ಸೈಟ್‌ ಇಂಜಿನಿಯರ್‌ ಮಹೇಶ್‌.

10 ಕೋಟಿ ರೂ. ವೆಚ್ಚ :

ಸೈಕ್ಲಿಂಗ್‌ ವೆಲೋಡ್ರೋಮ್‌ ನಿರ್ಮಾಣ ವೆಚ್ಚ 7.34 ಕೋಟಿ ರೂ.ಎಂದು ಅಂದಾಜಿಸಲಾಗಿತ್ತು. ಈಗ ಒಟ್ಟಾರೆ ವೆಚ್ಚ 10 ಕೋಟಿ ರೂ.ವರೆಗೂ ತಲುಪಿದೆ. ಹೆಚ್ಚುವರಿ ಹಣವನ್ನು ಗ್ಯಾಲರಿ, ಕಾಂಪೌಂಡ್‌, ಸಿಸಿ ರಸ್ತೆ ನಿರ್ಮಾಣ ಹಾಗೂ ಇತರ ಕಾಮಗಾರಿಗಳಿಗೆ ವ್ಯಯಿಸಲಾಗಿದೆ ಎಂದು ಕ್ರೀಡಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ಸೈಕ್ಲಿಂಗ್‌ ವೆಲೋಡ್ರೋಮ್‌’ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ತಿಂಗಳಲ್ಲಿ ಪೈಟಿಂಗ್‌ ಸೇರಿ ಉಳಿದೆಲ್ಲ ಕಾಮಗಾರಿಗಳು ಪೂರ್ಣಗೊಂಡು ಬಳಕೆಗೆ ಸಜ್ಜಾಗಲಿದೆ. 15 ದಿನದಲ್ಲಿ ಸೈಕ್ಲಿಂಗ್‌ ಫೆಡರೇಷನ್‌ ಆಫ್‌ ಇಂಡಿಯಾ (ಸಿಎಫ್‌ಐ) ತಂಡವು ಭೇಟಿ ನೀಡುವ ನಿರೀಕ್ಷೆ ಇದೆ. ಒಟ್ಟು ಕಾಮಗಾರಿ ವೆಚ್ಚವು 10 ಕೋಟಿ ರೂ. ಆಗಿದೆ.ಎಸ್‌.ಜಿ.ಲೋಣಿ, ಸಹಾಯಕ ನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ರಂಗಪ್ಪ ಗಧಾರ

ಟಾಪ್ ನ್ಯೂಸ್

Yelandur ಆಟೋಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರಿಗೆ ತೀವ್ರ ಗಾಯ

Yelandur ಆಟೋಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರಿಗೆ ತೀವ್ರ ಗಾಯ

Chmber-Meeting

Film Industry: ಕನ್ನಡ ಚಿತ್ರರಂಗದ ನಟಿಯರ ರಕ್ಷಣೆಗೆ ಪಾಶ್‌ ಸಮಿತಿ: ನಾಗಲಕ್ಷ್ಮಿ ಚೌಧರಿ

ಬಿಜೆಪಿಯದ್ದು ಜಗಳ ಹಚ್ಚುವ ಪಾಲಿಟಿಕ್ಸ್‌: ಡಾ|ಶರಣಪ್ರಕಾಶ

ಬಿಜೆಪಿಯದ್ದು ಜಗಳ ಹಚ್ಚುವ ಪಾಲಿಟಿಕ್ಸ್‌: ಡಾ|ಶರಣಪ್ರಕಾಶ

1-wqeqwewqe

J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!

Train ಬೆಳಗಾವಿಗೆ ಶೀಘ್ರ ಮತ್ತೊಂದು ರೈಲು: ಸೋಮಣ್ಣ

Train ಬೆಳಗಾವಿಗೆ ಶೀಘ್ರ ಮತ್ತೊಂದು ರೈಲು: ಸೋಮಣ್ಣ

Nagamangala ಗಲಭೆಗೆ ಪಿಎಫ್ಐ,ಎಸ್‌ಡಿಪಿಐ ಕುಮ್ಮಕ್ಕು: ಈಶ್ವರಪ್ಪ

Nagamangala ಗಲಭೆಗೆ ಪಿಎಫ್ಐ,ಎಸ್‌ಡಿಪಿಐ ಕುಮ್ಮಕ್ಕು: ಈಶ್ವರಪ್ಪ

1-modi-BG

Modi 100 days; ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿ ಸಿದ್ಧಪಡಿಸಲಾಗುತ್ತಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chmber-Meeting

Film Industry: ಕನ್ನಡ ಚಿತ್ರರಂಗದ ನಟಿಯರ ರಕ್ಷಣೆಗೆ ಪಾಶ್‌ ಸಮಿತಿ: ನಾಗಲಕ್ಷ್ಮಿ ಚೌಧರಿ

Ram Jarakiholi

B.Y.Vijayendra ಭ್ರಷ್ಟ, ಅವನನ್ನು ನಾನೆಂದೂ ಒಪ್ಪುವುದಿಲ್ಲ!: ರಮೇಶ್ ಜಾರಕಿಹೊಳಿ ಕಿಡಿ

R.Ashok

Nagamangala Riot: ಗಲಭೆಯಲ್ಲಿ ಪಾಕ್‌ ಪರ ಘೋಷಣೆ ಕೂಗಿರುವ ಅನುಮಾನವಿದೆ: ಆರ್‌.ಅಶೋಕ್‌

HDK (3)

H D Kumaraswamy; ಮಾನವ ಸರಪಳಿಯಿಂದ ಪ್ರಜಾಪ್ರಭುತ್ವವನ್ನು ಕಾಪಾಡಬಹುದೇ?

Bharathinagar: ಕಾರು ಡಿಕ್ಕಿ ಹೊಡೆದು ಅಜ್ಜಿ, ಮೊಮ್ಮಗ ಸ್ಥಳದಲ್ಲೇ ಮೃತ್ಯು

Bharathinagar: ಕಾರು ಡಿಕ್ಕಿ ಹೊಡೆದು ಅಜ್ಜಿ, ಮೊಮ್ಮಗ ಸ್ಥಳದಲ್ಲೇ ಮೃತ್ಯು

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Yelandur ಆಟೋಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರಿಗೆ ತೀವ್ರ ಗಾಯ

Yelandur ಆಟೋಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರಿಗೆ ತೀವ್ರ ಗಾಯ

Chmber-Meeting

Film Industry: ಕನ್ನಡ ಚಿತ್ರರಂಗದ ನಟಿಯರ ರಕ್ಷಣೆಗೆ ಪಾಶ್‌ ಸಮಿತಿ: ನಾಗಲಕ್ಷ್ಮಿ ಚೌಧರಿ

Chalavadi Narayanaswamy ಡ್ರಾಮಾ ಬೇಡ: ಪ್ರಿಯಾಂಕ್‌ ಖರ್ಗೆ

Chalavadi Narayanaswamy ಡ್ರಾಮಾ ಬೇಡ: ಪ್ರಿಯಾಂಕ್‌ ಖರ್ಗೆ

Thirthahalli: ಡಿಜೆ ಶಬ್ದಕ್ಕೆ ವೃದ್ಧ ದುರ್ಮರಣ

Thirthahalli: ಡಿಜೆ ಶಬ್ದಕ್ಕೆ ವೃದ್ಧ ದುರ್ಮರಣ

Mudhol: ಆರ್‌ಎಸ್‌ಎಸ್‌ನಿಂದ ದೇಶಕ್ಕೆ ಕಂಟಕ: ಆರ್‌.ಬಿ.ತಿಮ್ಮಾಪುರ

Mudhol: ಆರ್‌ಎಸ್‌ಎಸ್‌ನಿಂದ ದೇಶಕ್ಕೆ ಕಂಟಕ: ಆರ್‌.ಬಿ.ತಿಮ್ಮಾಪುರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.