ನಿರಂತರ ಶ್ರಮದಿಂದ ಯಶಸ್ಸು
Team Udayavani, Feb 5, 2022, 5:35 PM IST
ಇಂಡಿ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬೇಕಾದರೆ ನಿತ್ಯವು ನಿರಂತರ ಶ್ರಮ, ಸತತ ಅಧ್ಯಯನ,ವಿಷಯಗಳಲ್ಲಿ ಆಯ್ಕೆ ಮಾಡಿಕೊಂಡು ಅಧ್ಯಯನ ಜೊತೆಗೆ ಶೀಘ್ರ ಬರವಣಿಗೆ ಸಹ ಬೇಕೆಂದು ಪಿಎಸೈ ಹುದ್ದೆಗೆ ಇತ್ತೀಚೆಗೆ ಆಯ್ಕೆಯಾದ ಇಂಡಿ ತಾಲೂಕಿನ ಬಬಲಾದ ಗ್ರಾಮದ ಶ್ರೀಕಾಂತ ಪೂಜಾರಿ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ಸೌಹಾರ್ದ ಸಹಕಾರಿ ಆಡಳಿತ ಮಂಡಳಿತ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಎರಡು ಬಾರಿ ಪಿಎಸೈ ಹುದ್ದೆಗೆ ಸ್ಪರ್ಧೆ ಮಾಡಿದ್ದೆ. ಆದರೆ ಕೆಲವೇ ಅಂಕಗಳು ಕಡಿಮೆಯಾಗಿ ಆಯ್ಕೆಯಾಗಲಿಲ್ಲ. ಆದರೂ ನಾನು ಧೈರ್ಯ ಬಿಡಲಿಲ್ಲ. ಪ್ರಯತ್ನಿಸೋಣ ಎಂದು ಸತತವಾಗಿ ಓದು ಹಾಗೂ ವ್ಯಾಯಾಮ ಮಾಡುವಲ್ಲಿ ನಿರತನಾದೆ. ನನ್ನ ಮನೆಯವರೆಲ್ಲ ಓದಲು ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದರು. ಹೀಗಾಗಿ ನಾನು ಸತತ ಪರಿಶ್ರಮಪಟ್ಟು ಓದಿದ ಪರಿಣಾಮವೇ ನಾನು ಪಿಎಸೈ ಆಗಲು ಕಾರಣವಾಯಿತು ಎಂದರು.
ಅಕ್ಕಮಹಾದೇವಿ ಸೌಹಾರ್ದ ಅಧ್ಯಕ್ಷ ಉಮೇಶ ಬಳಬಟ್ಟಿ, ಉಪಾಧ್ಯಕ್ಷ ಯಲಗೊಂಡ ಬೇವನೂರ, ಶಿವಾನಂದ ಚಾಳಿಕಾರ, ಯಲಗೊಂಡ ಪೂಜಾರಿ, ಚಂದ್ರಾಮ ಮೇಡೇದಾರ, ಶ್ರೀಕಾಂತ ಗಡಗಲಿ, ಸಚಿನ ಮೇಡೆದಾರ, ರೇವಣಸಿದ್ದ ಪೂಜಾರಿ, ಮಲಕಾರಿ ಪೂಜಾರಿ, ರಾಜು ನಾಯ್ಕೊಡಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.