ಕಬ್ಬಿಗೆ ಬೆಂಕಿ: ಅಪಾರ ಹಾನಿ
Team Udayavani, Jan 21, 2022, 5:38 PM IST
ಆಲಮಟ್ಟಿ: ಅರಳದಿನ್ನಿಯಲ್ಲಿ ಆಕಸ್ಮಿಕ ಬೆಂಕಿಯಿಂದ ಸುಮಾರು 50 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಸುಟ್ಟು ಅಪಾರ ಹಾನಿಯಾಗಿದೆ.
ಗುರುವಾರ ಮಧ್ಯಾಹ್ನ ಕಬ್ಬು ಬೆಳೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಗ್ರಾಮದ ರೈತರು ಹಾಗೂ ಬಸವನ ಬಾಗೇವಾಡಿಯಿಂದ ಆಗಮಿಸಿದ್ದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರೂ ಪೂರ್ಣ ಪ್ರಮಾಣದಲ್ಲಿ ನಂದಿಸಲು ಸಾಧ್ಯವಾಗಲಿಲ್ಲ. ನಂತರ ಗ್ರಾಮಸ್ಥರ ಸಹಕಾರದಿಂದ ಬೆಂಕಿ ನಂದಿಸಿದರು.
ಬೆಂಕಿಯ ಕೆನ್ನಾಲಿಗೆಯಿಂದ ಕಟಾವಿಗೆ ಬಂದಿದ್ದ ಕಬ್ಬು ಕಣ್ಣ ಮುಂದೆಯೇ ಸುಟ್ಟು ಹೋಗುತ್ತಿರುವುದರಿಂದ ರೈತರ ಆಕ್ರಂದನ ಮುಗಿಲು ಮುಟ್ಟಿತ್ತು. ಕಬ್ಬು ಬೆಳೆಯ ಬದಿಯಲ್ಲಿರುವ ಒಡ್ಡುಗಳಿಗೆ ಹೊಂದಿಕೊಂಡಂತೆ ತೆಂಗು, ಮಾವು, ಚಿಕ್ಕು, ಸಾಗವಾನಿ, ಬೇವಿನಮರಗಳು ಸುಟ್ಟು ಕರಕಲಾಗಿವೆ. ಕಬ್ಬಿಗೆ ನೀರುಣಿಸಲು ಹಾಕಲಾಗಿದ್ದ ಪೈಪ್‌ಗ್ಳು, ನೀರೆತ್ತುವ ಪಂಪ್‌ಸೆಟ್‌ಗಳು, ವಿದ್ಯುತ್ ಪರಿವರ್ತಕಗಳು ಸುಟ್ಟಿವೆ. ಇದರಿಂದ ರೈತರಿಗೆ ಅಪಾರ ಹಾನಿಯಾಗಿದೆ.
ಸುಟ್ಟಿರುವ ಕಬ್ಬು ಹನಮಗೌಡ ಪಾಟೀಲ, ದೇವಕ್ಕೆವ್ವ ಮಲ್ಲನಗೌಡ ಪಾಟೀಲ, ಬಾಪುಗೌಡ ಪಾಟೀಲ, ಮಾಧುರಾಯಗೌಡ ಪಾಟೀಲ, ರಾಯನಗೌಡ ಪಾಟೀಲ, ಕರಿಯಪ್ಪ ಬಾವಿಕಟ್ಟಿ, ಯಲಗೂರದಪ್ಪ ಕೊಳ್ಳಾರ, ಮುತ್ತಪ್ಪ ಕೊಳ್ಳಾರ ಎನ್ನುವ ರೈತರಿಗೆ ಸೇರಿರುವುದು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal: ಅರೆನಗ್ನಾವಸ್ಥೆಯಲ್ಲಿ ಅನಾಮಧೇಯ ಮಹಿಳೆಯ ಶವ ಪತ್ತೆ
Vijayapura: ವಕ್ಫ್ ಬೋರ್ಡ್ ವಿರುದ್ಧ ಪ್ರಧಾನಿಗೆ ಶಾಸಕ ಯತ್ನಾಳ್ ಪತ್ರ
CHANAKYA CAREER ACADEMY: ಚಾಣಕ್ಯ ಯುವ ಭವಿಷ್ಯಕ್ಕೆ ಭದ್ರ ಬುನಾದಿ
Waqf issue: ಎಲ್ಲ ಪಹಣಿಯಲ್ಲೂ ವಕ್ಫ್ ಹೆಸರು ತೆಗೆಯಿರಿ: ಮುಲ್ಲಾ ಅಸೋಸಿಯೇಷನ್ ಆಗ್ರಹ
Tragedy: ಕೂಲಿ ಆಸೆಗೆ ತೆಂಗಿನ ಮರ ಏರಿದ್ದ ಅವಿವಾಹಿತ ಯುವಕ ಆಯತಪ್ಪಿ ಬಿದ್ದು ಮೃತ್ಯು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.