ಕಬ್ಬು: ಬೆಲೆ ನಿಗದಿಗೆ ರೈತರ ಒತ್ತಾಯ
Team Udayavani, Nov 4, 2017, 1:01 PM IST
ಇಂಚಗೇರಿ: ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಕಬ್ಬಿಗೆ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ಮಹಾರಾಷ್ಟ್ರದಿಂದ ಸಾಗಿಸುತ್ತಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳನ್ನು ಕರ್ನಾಟಕ ರೈತರು ಧೂಳಖೇಡ-ಟಾಕಳಿ ಸೇತುವೆ ಪಕ್ಕದ ಸರಹದ್ದಿನಲ್ಲಿನಲ್ಲಿ ತಡೆದು ಪ್ರತಿಭಟಿಸಿದರು.
ಈ ವೇಳೆ ರೈತ ಮುಖಂಡ ರಾಜಶೇಖರ ಕಲಶೆಟ್ಟಿ ಮಾತನಾಡಿ, ಈ ಭಾಗದ ಸಕ್ಕರೆ ಕಾರ್ಖಾನೆ ಆಡಳಿತ
ಮಂಡಳಿಯವರು ಇಲ್ಲಿವರೆಗೆ ಕಬ್ಬಿನ ಬೆಂಬಲ ಬೆಲೆ ಘೋಷಣೆ ಮಾಡಿಲ್ಲ. ಕೂಡಲೆ ಎಲ್ಲ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯವರು ಪ್ರತಿ ಟನ್ ಕಬ್ಬಿಗೆ 3,500 ರೂ. ಬೆಂಬಲ ಬೆಲೆ, ಜೊತೆಯಲ್ಲಿ ಮೊದಲ ಕಂತಿನ ಹಣ 3,000 ರೂ. ರೈತರ ಖಾತೆ ಜಮೆ ಮಾಡುವುದಾಗಿ ಘೋಷಣೆ ಮಾಡಿದರೆ ಮಾತ್ರ ಕಬ್ಬು ಕಾರ್ಖಾನೆಗೆ ಸಾಗಿಸಲು ಬಿಡುತ್ತೇವೆ. ಇಲ್ಲದಿದ್ದರೆ ಉಘ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ರೈತ ಮುಖಂಡ ಗೋವರ್ಧನ ಲಾಡ್ ಮಾತನಾಡಿ, ಕಳೆದ ಸಾಲಿನಲ್ಲಿ ಸ್ಕಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಕಬ್ಬಿನ ಬಾಕಿ ಉಳಿದ ಹಣ ಕೂಡಲೆ ರೈತರ ಖಾತೆಗೆ ಜಮೆ ಮಾಡುವಂತೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು
ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತರಾದ ಶರಣಪ್ಪ ಹತ್ತರಸಂಗ, ಗುರುಬಾಳಪ್ಪ ಪಾಟೀಲ, ಸುರೇಶ ಬಗಲಿ, ಸಿದ್ದಾರಾಮ ಬಿರಾದಾರ, ಬಾಳಾಸಾಹೇಬ ಬನಸೋಡೆ, ಪಂಡೀತ ಪಾಟೀಲ, ಬಾಳಾಸಾಹೇಬ ದುವಾಳೆ, ಸಿದ್ದಪ್ಪ ಬಿರಾದಾರ,
ದೊvxಪ್ಪ ಅಣಚಿ, ಚಿದಾನಂದ ಪಾಟೀಲ, ಮಹಾಂತೇಶ ಬಿರಾದಾರ, ರಾಜಕುಮಾರ ಬಿರಾದಾರ ಸೇರಿದಂತೆ
ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.