ವಿಜಯಪುರ ದ್ವಿಸದಸ್ಯತ್ವ ಕ್ಷೇತ್ರ: ಕಾಂಗ್ರೆಸ್ ನ ಸುನಿಲ ಗೌಡ ಆಯ್ಕೆ
Team Udayavani, Dec 14, 2021, 4:24 PM IST
ವಿಜಯಪುರ: ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಯನ್ನೂ ಹೊಂದಿರುವ ಸ್ಥಳೀಯ ಸಂಸ್ಥೆಗಳ ಮೇಲ್ಮನೆ ವಿಜಯಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ ಗೌಡ ವಿಜಯ ಸಾಧಿಸಿದ್ದಾರೆ.
ಎರಡು ಸ್ಥಾನಗಳ ವಿಜಯಪುರ ಕ್ಷೇತ್ರದಲ್ಲಿ ರಕ್ಷಣಾತ್ಮಕ ಸ್ಪರ್ಧೆಗಾಗಿ ಕಾಂಗ್ರೆಸ್ ಪಕ್ಷ ಹಾಲಿ ಸದಸ್ಯ ಸುನಿಲಗೌಡ ಪಾಟೀಲ ಒಬ್ಬರನ್ನೇ ಕಣಕ್ಕಿಳಿಸಿದೆ. ಮತ ಎಣಿಕೆಯಲ್ಲಿ ಸುನಿಲಗೌಡ ಪಾಟೀಲ 2835 ಮತಗಳನ್ನು ಪಡೆದು, 1012 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಇನ್ನು ದ್ವಿಸದಸ್ಯತ್ವದ ಈ ಕ್ಷೇತ್ರದಲ್ಲಿ ಬಿಜೆಪಿ ಕೂಡ ರಕ್ಷಣಾತ್ಮಕ ಸ್ಪರ್ಧೆಗಾಗಿ ಮಾಜಿ ಶಾಸಕ ಪಿ.ಎಚ್.ಪೂಜಾರ ಒಬ್ಬರನ್ನೇ ಕಣಕ್ಕಿಳಿಸಿದ್ದರೂ, ಪ್ರಥಮ ಪ್ರಾಶಸ್ತ್ಯದಲ್ಲಿ ಗೆಲುವಿಗೆ ಬೇಕಿರುವುದಕ್ಕಿಂತ ಕಡಿಮೆ ಮತ ಬಂದಿವೆ.
ಇದನ್ನೂ ಓದಿ:ಬಹುಮತ ಬಂದಿದೆಯೆಂದು ಜೆಡಿಎಸ್ ನಿರ್ಲಕ್ಷ್ಯ ಮಾಡಲ್ಲ: ಯಡಿಯೂರಪ್ಪ
ಬಿಜೆಪಿ ಅಭ್ಯರ್ಥಿ ಪೂಜಾರ ಮೊದಲ ಸುತ್ತಿನಲ್ಲಿ ಪ್ರಥಮ ಪ್ರಾಶಸ್ತ್ಯದ 2219 ಮತಗಳನ್ನು ಪಡೆದಿದ್ದರೆ, ಐವರು ಪಕ್ಷೇತರರಲ್ಲಿ ಗೆಲ್ಲುವ ವಿಶ್ವಾಸದಲ್ಲಿರುವ ಮಲ್ಲಿಕಾರ್ಜುನ ಲೋಣಿ 1466 ಮತ ಪಡೆದು ಪೈಪೋಟಿ ನೀಡಿದ್ದಾರೆ. ಹೀಗಾಗಿ ಎರಡನೇ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆಗೆ ಮತ ಎಣಿಕೆ ಮುಂದುವರೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.