ಗಾಣಿಗ ಸಮುದಾಯದಿಂದ ಬೆಂಬಲ
Team Udayavani, May 11, 2018, 1:01 PM IST
ಇಂಡಿ: ತಾಲೂಕಿನ ಗಾಣಿಗ ಸಮುದಾಯ ಕುಲ ಬಾಂಧವರು ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ತಾಲೂಕಿನ ಸಾಲೋಟಗಿ ಗ್ರಾಮದ ಹೊರಭಾಗದ ಮೈದಾನದಲ್ಲಿ ಗುರುವಾರ ನಡೆದ ಗಾಣಿಗ ಸಮುದಾಯದ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ 5 ವರ್ಷದಲ್ಲಿ ಇತಿಹಾಸದಲ್ಲಿಯೇ ಕಂಡರಿಯದ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಹಿಂದಿನ 15 ವರ್ಷಗಳ ಶಾಸಕರಾಗಿದ್ದವರು ಸಾರ್ವಜನಿಕ ಕೆಲಸ ಮಾಡದೆ ಭೀಮಾಶಂಕರ ಸಕ್ಕರೆ ಕಾರ್ಖಾನೆಯನ್ನು ತಮ್ಮ ಸ್ವಂತ ಆಸ್ತಿಯನ್ನಾಗಿ ಮಾಡಲು ಹೊರಟಾಗ ನಾನು ನ್ಯಾಯಾಲಯದ ಮೂಲಕ ತಡೆ ಮಾಡಿ 16439 ರೈತರ ಆಸ್ತಿಯನ್ನಾಗಿ ಮಾಡಿರುವೆ. ಬಿದ್ದ ಗೋಡೆ, ಕಬ್ಬಿಣದ ಸಲಾಕೆ ತೆಗೆದುಕೊಂಡು ಹೋಗಿ ತಮ್ಮ ಮನೆ ಕಟ್ಟಡಕ್ಕೆ ಉಪಯೋಗಿಸಿದ ಪುಣ್ಯಾತ್ಮನಿಗೆ ಮತ ಹಾಕುತ್ತೀರೋ ಅಥವಾ ಸಾರ್ವಜನಿಕವಾಗಿ ದುಡಿದು ಅನಾರೋಗ್ಯದಿಂದ ಬಳಲಿ ಬಡಾಗಿರುವ ನನಗೆ ಮತ ಹಾಕುತ್ತೀರೊ ನಿಮಗೆ ಬಿಟ್ಟ ವಿಚಾರ ಎಂದ ಹೇಳಿದರು.
ಶಾಸಕರಾದವರಲ್ಲಿ ಮೊದಲು ನೈತಿಕತೆ ಇರಬೇಕು. ತಮ್ಮ ಜೀವನ ಶುಭ್ರವಾಗಿದ್ದಾಗ ಮಾತ್ರ ಮತ ಕೇಳಲು ಅರ್ಹರು ಎಂದು ಹೇಳಿದರು. ಕಣದಲ್ಲಿ 12 ಜನ ಅಭ್ಯರ್ಥಿಗಳಿದ್ದಾರೆ. ಜೆಡಿಎಸ್ -ಬಿಜೆಪಿಯಿಂದ ಸ್ಪರ್ಧಿಸಿದರು ಲೆಕ್ಕಕ್ಕಿಲ್ಲ. ಅವರು
ಹೊಸಬರು. ನನ್ನ ಎದುರಾಳಿ ಪಕ್ಷೇತರ ಅಭ್ಯರ್ಥಿ. ಆದ್ದರಿಂದ ತಾಲೂಕಿನ ಮತಬಾಂಧವರು ಜಾತಿ ಮತ ಎನ್ನದೆ ಅಭಿವೃದ್ಧಿ, ನ್ಯಾಯ ನೀತಿ, ಒಳ್ಳೆಯತನಕ್ಕಾಗಿ ತಮ್ಮ ಮತ ನೀಡಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಜಿಪಂ ಸದಸ್ಯ ಶಿವಯೋಗೆಪ್ಪ ನೇದಲಗಿ ಮಾತನಾಡಿದರು. ಜಿಪಂ ಸದಸ್ಯ ಸುಭಾಷ ಕಲ್ಲೂರ, ಹಣಮಂತರಾಯಗೌಡ ಪಾಟೀಲ, ಮಹಾದೇವ ಗಡ್ಡದ, ಭೀಮರಾಯಗೌಡ ಪಾಟೀಲ, ಜಟ್ಟೆಪ್ಪ ರವಳಿ, ಬಾಳಾಸಾಹೇಬ ಸೇಳಕೆ, ಅಶೋಕಗೌಡ ಬಿರಾದಾರ, ಶಿವಾನಂದ ಮಠ, ರವಿಗೌಡ ಪಾಟೀಲ, ಶ್ರೀಮಂತ ಗಿಣ್ಣಿ, ರುಕ್ಮುದೀನ್ ತದ್ದೇವಾಡಿ, ಎ.ಪಿ. ಕಾಗವಾಡಕರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.