ಪರಿಶ್ರಮದ ಸಂಪಾದನೆಗೆ ಶರಣರ ಆದ್ಯತೆ
Team Udayavani, Nov 11, 2018, 3:21 PM IST
ವಿಜಯಪುರ: ದುಡಿಮೆಗೆ ಬಸವಾದಿ ಶರಣರು ಮಹತ್ವದ ಸ್ಥಾನ ನೀಡಿದ್ದರು. ಕಾಯಕವೇ ಕೈಲಾಸ ಎಂದು ಸಾರಿದರು ಎಂದು ಬೀದರನ ಬಸವ ಸೇವಾಶ್ರಮದ ಅನ್ನಪೂರ್ಣ ಅಕ್ಕ ಹೇಳಿದರು.
ನಗರದಲ್ಲಿ ನಾಡಗೌಡ ಉದ್ಯಮ ಸಮೂಹ ಸಂಸ್ಥೆ ಹಮ್ಮಿಕೊಂಡಿದ್ದ ದೀಪಸಂಗಮ ಚಿಂತನಗೋಷ್ಠಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಸವಾದಿ ಶರಣರ ಕಲ್ಪನೆಯಲ್ಲಿ ಪ್ರತಿಯೊಬ್ಬರೂ ಶ್ರಮದಿಂದಲೇ ಸಂಪಾದಿಸಬೇಕು ಎಂದು ಬಲವಾದ ಪ್ರತಿಪಾದಕರಾಗಿದ್ದ ಶರಣರು, ದುಡಿಮೆಯನ್ನು ದೈವತ್ವಕ್ಕೆ ತಲುಪಿಸಿದರು ಎಂದರು.
ಕಾಯಕದಿಂದ ಭೂಲೋಕವೇ ಸ್ವರ್ಗವಾಗಿ ಪರಿವರ್ತನೆ ಆಗಲಿದೆ. ಪರಿಶ್ರಮವೇ ಪರಮಾತ್ಮ ಸನ್ನಿದಾನ ಎಂದು ಶರಣರು ಭಾವಿಸಿದ್ದರು. ಶರಣರ ಆಶಯ ಈಡೇರಿಸಲು ಇದೀಗ ನಾವೆಲ್ಲ ಕಲ್ಯಾಣ ರಾಜ್ಯ ಸ್ಥಾಪಿಸಲು ದುಡಿಯಬೇಕಿದೆ.
ದುಡಿಮೆಯೇ ಭಾರತೀಯ ಸಂಸ್ಕೃತಿ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದರು.
ವಿಜಯ ಜಹಾಗೀರದಾರ ಮಾತನಾಡಿ, ದೀಪಗಳು ಹೊರಗಿನ ಕತ್ತಲೆ ಕಳೆದರೆ ವಚನಗಳು ಮನದ ಒಳಗಿನ ಕತ್ತಲೆ ಕಳೆಯಬಲ್ಲವು. ವಚನಗಳಿಂದ ಮನದಲ್ಲಿ ಜ್ಞಾನದ ಜ್ಯೋತಿ ಹೊತ್ತುತ್ತದೆ, ವಚನಗಳು ಅರಿವಿನ ಪ್ರತೀಕ, ಅರಿವಿನ ಜ್ಯೋತಿಗಳು. ವಚನಗಳ ಸಾರವನ್ನು ಅರ್ಥೈಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕೃಷಿ ರಂಗದಲ್ಲಿ ಸಾಧನೆ ತೋರಿದ ಎನ್.ಕೆ. ಕುಂಬಾರ, ಶವ ಸಂಸ್ಕಾರ ಕಾಯಕದಲ್ಲಿ ತೊಡಗಿ ಮಹತ್ತರ ಸೇವೆ ಮಾಡುತ್ತಿರುವ ಮಹಾದೇವ ಹತ್ತಿಕಾಳ, ಮಾಜಿ ಸೈನಿಕ ನಾರಾಯಣ ಸೂರ್ಯವಂಶಿ, ಅಪಘಾತ ರಹಿತ ವಾಹನ ಚಾಲನೆ ಮಾಡಿದ ವಿಠ್ಠಲ ಘಾಟಗೆ, ನೇತ್ರ ತಜ್ಞ ಡಾ|ಪ್ರಭುಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಭಾರತೀಯ ಸಂಸ್ಕೃತಿ ಉತ್ಸವ-5ರ ಪ್ರಚಾರರ್ಥ ಅರ್ಥಪೂರ್ಣ ಸಂದೇಶ ಹೊಂದಿದ ವೆರಿಗುಡ್ ಚಲನಚಿತ್ರ
ಪ್ರದರ್ಶಿಸಲಾಯಿತು. ನಂತರ ಆದಿ ಶಕ್ತಿ ಸಂಗೀತ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ನಾಡಗೌಡ ಸಮೂಹ ಸಂಸ್ಥೆ ಅಧ್ಯಕ್ಷ ಎಸ್.ಎಚ್. ನಾಡಗೌಡ, ಶೈಲಜಾ ಬಸನಗೌಡ ಪಾಟೀಲ ಯತ್ನಾಳ, ಸಾಹಿತಿ ವಿ.ಸಿ. ನಾಗಠಾಣ, ಶಾಮಲಾ ಗಣೂರ ಪಾಲ್ಗೊಂಡಿದ್ದರು. ಶರಣಪ್ಪಗೌಡ ನಾಡಗೌಡ, ಚೆನ್ನಾರೆಡ್ಡಿ ಯಮಂತ, ಎ.ಬಿ. ಕುಲಕರ್ಣಿ, ಶರಣಗೌಡ ಗೂರುರೆಡ್ಡಿ, ಸುರೇಶ ಗಡಿ, ಶಂಕರ ಬೈಚಬಾಳ, ಪ್ರವೀಣ ಬಾದರಬಂಡಿ, ಪರುಶುರಾಮ ಹೋನಕೇರಿ ಇದ್ದರು. ಚಂದ್ರಶೇಖರ ನಾಡಗೌಡ ಸ್ವಾಗತಿಸಿದರು. ಪ್ರಾಣೇಶ ಔಟಿ ನಿರೂಪಿಸಿದರು. ರಾಜಶೇಖರ ನಾಡಗೌಡ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.