ರಂಗಿನಾಟಕ್ಕೆ ತಾಳಿಕೋಟೆ ಸಜ್ಜು
Team Udayavani, Mar 2, 2018, 3:21 PM IST
ತಾಳಿಕೋಟೆ: ಪಟ್ಟಣದ ವಿವಿಧ ಬಡಾವಣೆಗಳಲ್ಲಿರುವ ಜನರ ಮನೆ ಮುಂದೆ ಯುವಕರು ಕಾಮದಹನ ಮಾಡುತ್ತ ಹಲಗೆ ಮೇಳದ ವಿವಿಧ ಮಜಲುಗಳೊಂದಿಗೆ ಲಬೋ, ಲಬೋ ಎಂದು ಬಾಯಿ ಬಡೆದುಕೊಂಡು ಸುತ್ತುವರಿದು ಹಲಗೆ ಮಜಲಿಗೆ ತಕ್ಕಂತೆ ಕುಣಿದು ಕುಪ್ಪಳಿಸಿದ ಯುವಕರು ಹೋಳಿ ಹುಣ್ಣಿಮೆ ಹಬ್ಬದ ರಂಗಿನಾಟಕ್ಕೆ ಚಾಲನೆ ನೀಡಿದರು.
ಮಾ. 2 ಮತ್ತು 3ರಂದು ಜರುಗಲಿರುವ ಬಣ್ಣದ ಓಕಳಿಗಾಗಿ ಬಣ್ಣದಂಗಡಿಗಳ ಮುಂದೆ ಸಾಲು ನಿಂತು ಬಣ್ಣ ಖರೀದಿಸಿದರು. ಬಣ್ಣದೊಕಳಿ ಆಡಲು ಪಿಚಕಾರಿಗಳು ಖರೀದಿಸಲು ಅಂಗಡಿಗಳ ಮುಂದೆ ಜಮಾಯಿಸಿದ್ದರು.
ಇನ್ನೂ ಒಂದು ಬಡಾವಣೆ ಯುವಕರ ಗುಂಪು ಜೀವಂತ ವ್ಯಕ್ತಿಯನ್ನೇ ಶವದ ಹಾಗೆ ಸಿಂಗರಿಸಿ ಹಕಗೆ ಮಜಲಿನೊಂದಿಗೆ
ದಾರಿಯುದ್ದಕ್ಕೂ ಮೆರವಣಿಗೆ ಮಾಡುತ್ತ ಸಾಗಿದ್ದರೆ ಇನ್ನೊಬ್ಬ ವ್ಯಕ್ತಿಯು ಆ ವ್ಯಕ್ತಿಯ ಹಿಂದಿನ ಕಥೆಯನ್ನು ನೆನಪಿಸಿ ನಾಟಕೀಯ ರೂಪದಲ್ಲಿ ಹಾಡ್ಯಾಡಿ ಹಳ್ಳುವ ದೃಶ್ಯಗಳು ಜನರ ನಕ್ಕ ನಲುವಿಗೆ ಸಾಕ್ಷಿಯಾಯಿತು.
ಬಣ್ಣದ ಆಟದಲ್ಲಿ ಕಲರ್ ಫುಲ್ ಬಣ್ಣದ ಜೊತೆ ಕೆಮಿಕಲ್ ಮಿಶ್ರಿತ ಬಣ್ಣ ಉಪಯೋಗಿಸುವುದು ಸಾಮಾನ್ಯ. ಇದರಿಂದ ಕಣ್ಣಿಗೆ ಹಾಗೂ ಚರ್ಮಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಕೆಲವು ಯುವಕರು ಮುರ್‍ನಾಲ್ಕು ದಿನದವರೆಗೆ ಗೋವಾ, ಮುಂಬೈ, ಪುಣೆ, ಧರ್ಮಸ್ಥಳ, ಶೃಂಗೇರಿ, ಮೂಡಬಿದ್ರೆ, ಹೊರನಾಡು ಸೇರಿದಂತೆ ಮುಂತಾದ ಪ್ರವಾಸಿ ತಾಣಗಳ ಕಡೆಗೆ ಪ್ರವಾಸಕ್ಕೆ ತೆರಳಿದ್ದಾರೆ. ಇನ್ನೂ ಕೆಲವು ಯುವಕರು ಹೋಳಿ ಹುಣ್ಣಿವೆ ರಂಗಿನಾಟದ ನೆಪದಲ್ಲಿ ಮಜಾ ಉಡಾಯಿಸಲು ಬೀಚ್‌ಗಳತ್ತ ತೆರಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.