ಸತ್ಪುರುಷರ ಪ್ರವಚನ ಆಲಿಸಿದರೆ ಜೀವನ ಸಾರ್ಥಕ
ತಿಂಥಣಿ ಮೌನೇಶ್ವರರ ಪುರಾಣ ಮಹಾಮಂಗಲ
Team Udayavani, Mar 15, 2020, 4:18 PM IST
ತಾಳಿಕೋಟೆ: ಶರಣ ಸತ್ಪುರುಷರ ವಾಣಿ ಕೇಳಿದರೆ ಮಾನವ ಜೀವನ ಸಾರ್ಥಕವಾಗುತ್ತದೆ ಎಂದು ಗುಂಡಕನಾಳ ಬೃಹನ್ಮಠದ ಗುರುಲಿಂಗ ಶಿವಾಚಾರ್ಯರು ನುಡಿದರು.
ಶರಣಮುತ್ಯಾರ ಜಾತ್ರೋತ್ಸವ ಕುರಿತು ಏರ್ಪಡಿಸಿದ್ದ ಪುರಾಣ ಮಹಾಮಂಗಲದ ನಂತರದ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಶರಣರು ಸಾವಿರಾರು ವರ್ಷ ಬಾಳಿ ಬೆಳಗಿದವರಾಗಿದ್ದಾರೆ. ಅಂತವರು ಇನ್ನೂ ಗದ್ದುಗೆಯಲ್ಲಿ ವಾಸವಾಗಿದ್ದಾರೆ. ಆ ಕಾರಣದಿಂದಲೇ ಅವರನ್ನು ನೆನೆದು ಅನೇಕ ಭಕ್ತರು ತಮ್ಮ ಬೇಕು ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಾರೆಂದರು.
ಭಾರತೀಯ ಸಂಸ್ಕೃತಿ ಅಧ್ಯಾತ್ಮಿಕ ಸಂಸ್ಕೃತಿಯಾಗಿ ಬೆಳಗಿ ಬಂದಿದ್ದು ಇಲ್ಲಿ ಯೋಗಿ ತ್ಯಾಗಿಗಳಾಗಿ ಹೋಗಿದ್ದಾರೆ. ಇಂತಹದ್ದರಿಂದಲೇ ನಮ್ಮ ದೇಶದಲ್ಲಿ ಯಾವುದೇ ಆತಂಕಗಳು ಬರುತ್ತಿಲ್ಲ. ನೆರೆ ದೇಶದ ಜನತೆ ತಮ್ಮ ದೇಶಾಭಿಮಾನ ತೋರಿಸುತ್ತ ಸಾಗಿದ್ದಾರೆ. ಅಂತಹದ್ದನ್ನು ಅರಿತುಕೊಂಡು ನಮ್ಮ ದೇಶದ ಜನತೆ ನಡೆದರೆ ಇನ್ನೂ ದೇಶಾಭಿಮಾನ ಹೆಚ್ಚಾಗಿ ಭವ್ಯ ಭಾರತ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ ಎಂದರು.
ಸಾನ್ನಿಧ್ಯ ವಹಿಸಿದ್ದ ಪಡೇಕನೂರ ದಾಸೋಹ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ತಾಳಿಕೋಟೆಯಲ್ಲಿ ಈ ಹಿಂದೆ ಪಾವನಭೂಮಿ ಮಾಡಿ ಸಾಗಿದ ಖಾಸYತರು ಹಾಗೂ ಮಹಾಶರಣ ಶರಣಮುತ್ಯಾರವರು ಈ ಭಾಗದ ನಡೆದಾಡುವ ದೇವರೆಂದು ಅನಿಸಿಕೊಂಡಿದ್ದಾರೆ. ನಂಬಿದ ಭಕ್ತರಿಗೆ ಬೇಕು ಬೇಡಿಕೆಗಳನ್ನು ಈಡೇರಿಸುತ್ತ ಸಾಗಿದ್ದರಿಂದ ಅವರ ಜಾತ್ರೋತ್ಸವಗಳು ಇನ್ನೂ ವಿಜೃಂಭಣೆಯಿಂದ ಜರುಗುತ್ತಿವೆ ಎಂದರು. ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿದರು.
ಯಾದಗಿರಿ ಜಿಪಂ ಸದಸ್ಯ ಬಸಯ್ಯಮುತ್ಯಾ ಸ್ಥಾವರಮಠ ಮಾತನಾಡಿ, ನಮ್ಮ ಭಾರತ ದೇಶದಲ್ಲಿ ಅನೇಕ ಸಂತರು ಮಹಾಪುರುಷರು ಆಗಿ ಹೋಗಿದ್ದರಿಂದ ನಮ್ಮ ದೇಶದಲ್ಲಿ ಒಳ್ಳೆ ಸಂಸ್ಕೃತಿ ಇನ್ನೂ ತಲೆ ಎತ್ತಿ ನಿಲ್ಲುತ್ತ ಸಾಗಿದೆ ಎಂದರು. ಈ ವೇಳೆ 20 ದಿನಗಳವರೆಗೆ ಸಾಂಭಪ್ರಭು ಶರಣಮುತ್ಯಾರ ಜಾತ್ರೋತ್ಸವ ಕುರಿತು ಸಾಗಿಬಂದ ತಿಂಥಣಿ ಮೌನೇಶ್ವರರ ಪುರಾಣವನ್ನು ಸಂಗ್ರಹಿಸಿ ಪುಸ್ತಕ ರಚಿಸಿದ ಹಿರಿಯ ಪತ್ರಕರ್ತ ಜಿ.ಟಿ. ಘೋರ್ಪಡೆ ಅವರು ಪುರಾಣಿಕರಿಗೆ ಹಾಗೂ ಶರಣರ ಮಠದ ಶ್ರೀಗಳಿಗೆ ಕೃತಿ ಅರ್ಪಿಸಿದರು.
ವಿಜಯಪುರದ ಶಿಕ್ಷಣ ತಜ್ಞ ಚಂದನಗೌಡ ಮಾಲಿಪಾಟೀಲ ಅವರಿಗೆ ಶಿಕ್ಷಣ ರತ್ನ, ವಿಜಯಪುರದ ಬಿಎಲ್ ಡಿಇ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಪ್ರಾಧ್ಯಾಪಕರು, ಉಪ ಅರಕ್ಷಕರು ಆದ ವಿಜಯಕುಮಾರ ವಾರದ ಅವರಿಗೆ ವೈದ್ಯ ರತ್ನ ಹಾಗೂ ತಾಳಿಕೋಟೆಯ ಭಾಗ್ಯವಂತಿ ಆಸ್ಪತ್ರೆಯ ಡಾ| ಈರಗಂಟೆಪ್ಪ ತಳ್ಳೋಳ್ಳಿ ಅವರಿಗೂ ವೈದ್ಯರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ವಡಗೇರಿಯ ಪುರಾಣಿಕರಾದ ವೇ| ಮಲ್ಲಯ್ಯ ಸ್ವಾಮಿ ಹಿರೇಮಠ ಹಾಗೂ ಸಂಗೀತಗಾರರಾದ ಹನುಮಂತ್ರಾಯ ಬಳಗಾನೂರ, ಬಸನಗೌಡ ಬಿರಾದಾರಗೆ ಸನ್ಮಾನಿಸಲಾಯಿತು. ಸಾಂಭಪ್ರಭು ಶರಣರ ಮಠದ ಬಸಣ್ಣ ಶರಣರು, ಶರಣಪ್ಪ ಶರಣರು, ಆರ್.ಎಸ್. ಪಾಟೀಲ (ಕೂಚಬಾಳ), ಸೋಮನಗೌಡ ಪಾಟೀಲ (ನಡಹಳ್ಳಿ), ಮಹಾಂತಗೌಡ ಪಾಟೀಲ, ಮಲ್ಲಿಕಾರ್ಜುನ ಗಂಗಾದರಮಠ, ಕಾಶಿರಾಯ ದೇಸಾಯಿ ಶಳ್ಳಗಿ, ಬಸವರಾಜ ಪ್ಯಾಟಿಗೌಡರ, ವಜ್ಜಲ ಶರಣರು, ಸಾಹೇಬಗೌಡ ಮುದಗೋಳ, ಕಾಶೀನಾಥ ಮುರಾಳ, ಸಿದ್ದನಗೌಡ ಪೊಲೀಸ್‌ಪಾಟೀಲ, ಸಿದ್ದಣ್ಣ ಶರಣರ, ಮಲ್ಲಣ್ಣ ಶರಣರ, ಈರಣ್ಣ ಶರಣರ, ಮಲ್ಲಣ್ಣ ಇಂಗಳಗಿ, ಶರಣಪ್ಪ ದೊರಿ, ಸಂಗಮೇಶ ಶರಣರ, ಭೀಮಣ್ಣ ಇಂಗಳಗಿ, ಬಸು ಛಾಂದಕೋಟೆ, ಶ್ರೀಕಾಂತ ಕುಂಭಾರ ಇದ್ದರು. ಶರಣಮ್ಮ ಕುಂಬಾರ ಪ್ರಾರ್ಥಿಸಿದರು. ಶರಣಗೌಡ ಪೊಲೀಸ್‌ಪಾಟೀಲ ಸ್ವಾಗತಿಸಿದರು. ವಿಜಯಕುಮಾರ ಹಿರೇಮಠ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
MUST WATCH
ಹೊಸ ಸೇರ್ಪಡೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.