ತುಂಬಗಿ ಗ್ರಾಪಂಗೆ ಮುತ್ತಿಗೆ

ಕುಡಿವ ನೀರು ಪೂರೈಸಲು ಆಗ್ರಹ ಸಮಸ್ಯೆಗೆ ಸ್ಪಂದಿಸದ ಪಿಡಿಒ ಮೇಲೆ ಕ್ರಮಕ್ಕೆ ಒತ್ತಾಯ

Team Udayavani, Feb 6, 2020, 12:02 PM IST

6-February-6

ತಾಳಿಕೋಟೆ: ತುಂಬಗಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ತೊಂದರೆಯಾಗುತ್ತಿದ್ದರೂ 6 ತಿಂಗಳಿಂದ ಯಾವೋಬ್ಬ ಅಧಿಕಾರಿ ಸ್ಪಂದಿಸಿಲ್ಲವೆಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಗ್ರಾಪಂ ಕಚೇರಿ ಎದುರು ಧರಣಿ ನಡೆಸಿದರು.

ಪ್ರತಿಭಟನಾ ನೇತೃತ್ವ ವಹಿಸಿದ್ದ ಕರವೇ ತಾಲೂಕಾಧ್ಯಕ್ಷ ನಿಸಾರ್‌ ಬೇಪಾರಿ ಮಾತನಾಡಿ, ತುಂಬಗಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೂರಿರುವ ಕುರಿತು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ, ತಾಪಂ ಇಒ, ಜಿಪಂ ಸಿಇಒವರೆಗೆ ಮನವಿ ಸಲ್ಲಿಸುತ್ತ ಬಂದಿದ್ದೇವೆ. ಆದರೆ ಇಲ್ಲಿವರೆಗೂ ಯಾವೋಬ್ಬ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಕಾಟಾಚಾರಕ್ಕೆ 6 ತಿಂಗಳ ಹಿಂದೆ ತಾಪಂ ಇಒ ಅವರು ಭೇಟಿ ನೀಡಿ ಪರಿಶೀಲನೆ ಮಾಡಿ ಹೋದವರು ಮರಳಿ ಇತ್ತ ಕಡೆ ನೋಡಿಲ್ಲ.

ಗ್ರಾಮದಲ್ಲಿರುವ ಸುಮಾರು 12 ಕೊಳವೆ ಬಾವಿಗಳು ಹಾಗೂ ಸೇದು ಬಾವಿಗಳು ಬತ್ತಿ ಹೋಗಿವೆ. ಇದರಿಂದ ಗ್ರಾಮಸ್ಥರರು ಹನಿ ನೀರಿಗೂ ಪರಿತಪಿಸುವಂತಾಗಿದೆ. ಕೂಡಲೇ ಕುಡಿಯುವ ನೀರು ಒದಗಿಸುವಲ್ಲಿ ವಿಫಲರಾದ ಗ್ರಾಪಂ ಅಭಿವೃದ್ಧಿ ಅಧಿಕಾರಿ, ತಾಪಂ ಇಒ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಒತ್ತಾಯಿಸಿದರು.

ಧರಣಿ ನಿರತ ಸ್ಥಳಕ್ಕೆ ತಾಪಂ ಪ್ರಭಾರಿ ಇಒ ದೇಸಾಯಿ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಲು ಹೋದಾಗ ಪ್ರತಿಭಟನಾನಿರತ ಕರವೇ ಕಾರ್ಯಕರ್ತರಾದ ಜೈಭೀಮ ಮುತ್ತಗಿ, ಅನಿಲ ಗೊಟಗುಣಕಿ ಅವರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ತಾಪಂ ಇಒ ದೇಸಾಯಿ ಮಾತನಾಡಿ, ಪಿಡಿಒ ಮಹೇಶ ರಾಠೊಡ ನಿರ್ಲಕ್ಷ್ಯ ಕುರಿತು ಜಿಪಂ ಸಿಇಒಗೆ ವರ ದಿ ಸಲ್ಲಿಸಿ ಕ್ರಮಕ್ಕೆ ಶಿಫಾರಸು ಮಾಡುತ್ತೇವೆ. ಕರವೇ ಸಂಘಟಕರು ಕೈಗೊಂಡ ಧರಣಿ ಸತ್ಯಾಗ್ರಹ ಹಿಂಪಡೆಯಬೇಕೆಂದು ಧರಣಿ ನಿರತರಿಗೆ ಮನವಿ ಮಾಡಿದರು.

ಅನಿಲ ಗೊಟಗುಣಕಿ, ಬಸವರಾ ಅಸ್ಕಿ, ಮುತ್ತು ಧೋಳೇಕರ, ಎಚ್‌.
ಕೆ. ರಾಜಶೇಖರ, ಪ್ರಭು ಅಣ್ಣಿಗೇರಿ, ಅಬುಬಕರ ಲಾಹೋರಿ, ಗುರುಪ್ರಸಾದ ಬಿ.ಜಿ., ದ್ಯಾವಪ್ಪ ದೊಡಮನಿ, ಸಾಯಬಣ್ಣ ಗುಂಡಕನಾಳ, ಮುದಕಪ್ಪ ಹಡಪದ, ಮಶಾಕ ಜಮಾದಾರ, ಹನುಮಂತ್ರಾಯ ರೆಬಿನಾಳ, ರಾಜು ತಂಗಡಗಿ, ಬಸವರಾಜ ಬಡಿಗೇರ, ನಾಗು ತೋಟದ, ಕೋಟ್ರೇಶ ಹೊಸಮನಿ, ಚಂದ್ರಶೇಖರ ದೊಡ್ಡಮನಿ ಇದ್ದರು.

ಟಾಪ್ ನ್ಯೂಸ್

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

1-lH

Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

de

Guttigar: ಮಾವಿನಕಟ್ಟೆ; ಮರದಿಂದ ಬಿದ್ದು ವ್ಯಕ್ತಿ ಸಾವು

9

Kaup: ಬೀಚ್‌ನಲ್ಲಿನ್ನು ಪ್ಯಾರಾ ಮೋಟರಿಂಗ್‌

8(1

Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ

7

Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.