ತಾಲೂಕು ಹೋರಾಟಗಾರರಿಗೆ ಬಿಜೆಪಿಯಿಂದ ಇಂದು ಸನ್ಮಾನ
Team Udayavani, Jan 29, 2018, 3:41 PM IST
ತಾಳಿಕೋಟೆ: ತಾಳಿಕೋಟೆ ತಾಲೂಕು ಕೇಂದ್ರವಾಗಬೇಕೆಂದು ದಶಕಗಳಿಂದ ಅನೇಕ ಹೋರಾಟ ಮಾಡುತ್ತ ಬರಲಾಗಿತ್ತು. ಈಗ ಹೋರಾಟಕ್ಕೆ ಯಶಸ್ಸು ಸಿಕ್ಕಿದ್ದು ಹೋರಾಟದ ಸಮಯದಲ್ಲಿ ಸಹಕರಿಸಿದಂತಹ ಎಲ್ಲ
ಮಹನೀಯರಿಗೆ ಸನ್ಮಾನಿಸಿ ಗೌರವಿಸಲು ಬಿಜೆಪಿಯಿಂದ ಜ. 30ರಂದು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಎಸ್. ಪಾಟೀಲ (ಕೂಚಬಾಳ) ಹೇಳಿದರು.
ಪಟ್ಟಣದ ವಿಠ್ಠಲ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಹೋರಾಟ ಸಮಿತಿ ಹಾಗೂ ಭಾರತೀಯ ಜನತಾ ಪಕ್ಷದ ವತಿಯಿಂದ ತಾಳಿಕೋಟೆ ತಾಲೂಕು ಕೇಂದ್ರಕ್ಕಾಗಿ ಅನೇಕ ಹೋರಾಟ ಮಾಡುತ್ತ ಬರಲಾಗಿತ್ತು. ಹೋರಾಟಗಳಿಗೆ ಪಟ್ಟಣದ ವರ್ತಕರು, ವಿವಿಧ ಸಂಘ ಸಂಸ್ಥೆಯವರು, ಶಿಕ್ಷಣ ಸಂಸ್ಥೆಯವರು, ಹಿರಿಯರು ಸಹಕರಿಸಿ ಭಾಗವಹಿಸಿದ್ದಾರೆ.
ಅಂತಹ ಎಲ್ಲ ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆ, ಹಿರಿಯರಿಗೆ, ಸುತ್ತಮುತ್ತಲಿನ ಗ್ರಾಮಗಳ ಪ್ರಮುಖರಿಗೆ ಹೋರಾಟದ ಯಶಸ್ಸಿನ ಹಿಂದೆ ಇದ್ದಂತವರಿಗೆ ಸನ್ಮಾನಿಸಿ ಗೌರವಿಸುವಂತಹ ಕಾರ್ಯ ನಡೆಯಲಿದೆ ಎಂದರು. ಬಿಜೆಪಿ ಸರ್ಕಾರ ಇದ್ದಾಗ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ತಾಳಿಕೋಟೆ ತಾಲೂಕು ಕೇಂದ್ರವೆಂದು ಘೋಷಣೆ ಮಾಡಿ ಪ್ರತಿ ತಾಲೂಕಿಗೆ 2 ಕೋಟಿ ರೂ. ಮೀಸಲಿಟ್ಟಿದ್ದರು.
ನಂತರ ಅವಧಿಯಲ್ಲಿ ಬಂದ ಸರ್ಕಾರ ತಾಲೂಕು ರಚನೆಗೆ ನಿರ್ಲಕ್ಷ್ಯ ತೋರುತ್ತಿತ್ತು. ನಂತರ ಮಾಡಿದ ಹೋರಾಟಗಳಿಗೆ ಮಣಿದು ಕೊನೆಗೂ ಕಾರ್ಯರೂಪಕ್ಕೆ ತಂದಿದೆ. ಇದರ ಯಶಸ್ಸು ತಾಲೂಕು ಹೋರಾಟಕ್ಕೆ ಸಹಕರಿಸಿದಂತಹ ಎಲ್ಲ ಮಹನಿಯರಿಗೆ ಸಲ್ಲಬೇಕಾಗುತ್ತದೆ ಎಂದರು.
ಭಾರತೀಯ ಜನತಾ ಪಕ್ಷ ಸಾಮಾಜಿಕವಾಗಿ, ಬದ್ಧತೆಗನುಗುಣ ನಿರಂತರವಾಗಿ ಹೋರಾಟ ಮಾಡುತ್ತ ಬಂದ ಪ್ರಯುಕ್ತ ಯಶಸ್ಸನ್ನು ಕಂಡಿದೆ. ತಾಲೂಕು ಹೋರಾಟ ಸಮಿತಿಯವರಿಗೆ ಪಟ್ಟಣದ ಗಣ್ಯರಾದ ವಿಠ್ಠಲಸಿಂಗ್ ಹಜೇರಿ
ಅವರ ನೇತೃತ್ವದಲ್ಲಿ ಸನ್ಮಾನಿಸಲಾಗುತ್ತದೆ ಎಂದವರು, ಅಭಿನಂದನಾ ಸಮಾರಂಭದ ಜಾಥಾ ಖಾಸತೇಶ್ವರ ಮಠದಿಂದಲೇ ಪ್ರಾರಂಭಿಸಬೇಕೆಂದು ನಿಶ್ಚಯಿಸಲಾಗಿದೆ. ಅಂದು ಮಧ್ಯಾಹ್ನ 2ಕ್ಕೆ ಖಾಸತೇಶ್ವರ ಮಠದಲ್ಲಿ ಸೇರಿ ಜಾಥಾ ಮೂಲಕ ಪ್ರತಾಪಸಿಂಹ್ ಸರ್ಕಲ್‌ಗೆ ಬಂದು ಸಮಾರಂಭ ನಡೆಸಲು ನಿಶ್ಚಯಿಸಲಾಗಿದೆ ಎಂದರು.
ಸಮಾರಂಭಕ್ಕೆ ವಿಶೇಷ ಅಹ್ವಾನಿತರಾಗಿ ಮಾಜಿ ಸಚಿವ ಗೋವಿಂದ ಕಾರಜೋ, ಲಕ್ಷ್ಮಣ ಸವದಿ, ತಾಲೂಕಿನ ಭಾರತೀಯ ಜನತಾ ಪಕ್ಷದ ಮುಖಂಡರುಗಳು ಆಗಮಿಸಲಿದ್ದಾರೆ. ಸಮಾರಂಭದ ಸಾನ್ನಿಧ್ಯ ಖಾಸತೇಶ್ವರ ಮಠದ ಸಿದ್ದಲಿಂಗದೇವರು ವಹಿಸಲಿದ್ದಾರೆ. ಸಮಾರಂಭಕ್ಕೆ ಪಟ್ಟಣದ ಗಣ್ಯರು, ಎಲ್ಲ ವ್ಯಾಪಾರಸ್ಥರು, ವಿವಿಧ ಸಂಘ ಸಂಸ್ಥೆಯವರು, ಶಿಕ್ಷಣ ಸಂಸ್ಥೆಯವರು ಪಾಲ್ಗೊಂಡು ಯಶಸ್ವಿ ಮಾಡಲು ಕೋರಿದರು.
ಗಣ್ಯರಾದ ವಿಠ್ಠಲಸಿಂಗ್ ಹಜೇರಿ, ಕಾಶೀನಾಥ ಮುರಾಳ, ಕಾಶೀನಾಥ ಸಜ್ಜನ, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ವಿಶ್ವನಾಥ ಬಬಲೇಶ್ವರ, ಸುರೇಶ ಹಜೇರಿ, ತಾಲೂಕು ಉಪಾಧ್ಯಕ್ಷ ರಾಮು ಜಗತಾಪ, ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ನದಿಂ ಕಡು, ಪುರಸಭಾ ಸದಸ್ಯ ಅಣ್ಣಾಜಿ ಜಗತಾಪ, ಮಾನಸಿಂಗ್ ಕೊಕಟನೂರ, ವೀರೇಶ ಕೋರಿ,
ಬಂಡು ದಾಯಪುಲೆ, ರಾಜಣ್ಣ ಸೊಂಡೂರ, ಮಂಜುನಾಥ ಶೆಟ್ಟಿ, ಗಂಗಾರಾಮ ಕೊಕಟನೂರ, ರಾಘು ವಿಜಾಪೂರ, ಸಂಗಮೇಶ್ವರ ಬಳಿಗಾರ, ಬಸ್ಸು ಮಾಲಿಪಾಟೀಲ, ಮುನ್ನಾ ಠಾಕೂರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.