ಶಿಕ್ಷಕರ ಸಾಮೂಹಿಕವರ್ಗಾವಣೆಗೆಪಟ್ಟು
Team Udayavani, Mar 14, 2019, 12:07 PM IST
ತಾಳಿಕೋಟೆ: ಕರ್ತವ್ಯ ಪಾಲನೆ ಮಾಡುವಲ್ಲಿ ನಿರ್ಲಕ್ಷ ತೋರುತ್ತಿರುವ ದೇವರ ಹುಲಗಬಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಲು ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಆಗ್ರಹಿಸಿದ್ದಾರೆ.
ಗ್ರಾಮದ ಶಾಲೆಯಲ್ಲಿ ಇಂಗಳಗೇರಿ ಕ್ಲಸ್ಟರ್ ಮಟ್ಟದ ಮುಖ್ಯಗುರುಗಳ ಸಭೆ ಕರೆಯಲಾಗಿತ್ತು. ವಿಷಯ ತಿಳಿದ ಗ್ರಾಮಸ್ಥರು, ಯುವಕರು ಶಾಲೆಗೆ ಆಗಮಿಸಿ ಸಿಆರ್‌ಸಿ ಜಿ.ಆರ್. ಸೋನಾರ ಅವರಿಗೆ ಲಿಖೀತ ಮನವಿ ಸಲ್ಲಿಸಿದರು.
ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಹ ಶಿಕ್ಷಕಿ ಎಂ.ಜಿ. ವಾಲಿ ಹಾಗೂ ಇನ್ನುಳಿದ ಶಿಕ್ಷಕಿಯರು ಮಕ್ಕಳಿಗೆ ಸರಿಯಾಗಿ ಪಾಠ ಮಾಡದೇ ಶಾಲೆ ಹೊರಗಡೆ ಹರಟೆ ಹೊಡಯುತ್ತ ಕೂಡುತ್ತಾರೆ. ಮಧ್ಯಾಹ್ನ ಊಟ ಮಾಡಿ ತರಗತಿ ಕೋಣೆಯಲ್ಲಿಯೇ ನಿದ್ರೆ ಮಾಡುತ್ತಾರೆ. ಮೊಬೈಲ್‌ನಲ್ಲಿ ಕಾಲಹರಣ ಮಾಡುತ್ತಾರೆ. ಈ ಕುರಿತು ತಿಳಿಹೇಳಲು ಹೋದರೆ ಬೇಕಾಬಿಟ್ಟಿಯಾಗಿ ವರ್ತಿಸುತ್ತಾರೆ ಎಂದು ಮನವಿಯಲ್ಲಿ ದೂರಲಾಗಿದೆ.
ಗ್ರಾಮಸ್ಥರ ಸಭೆ: ಶಿಕ್ಷಣ ಇಲಾಖೆ ಸಮೂಹ ಸಂಪನ್ಮೂಲ ವ್ಯಕ್ತಿ ಜಿ.ಆರ್. ಸೋನಾರ ನಡೆಸಿದ ಗ್ರಾಮಸ್ಥರ ಸಭೆಯಲ್ಲಿ ಗ್ರಾಮಸ್ಥರು ಹೆಚ್ಚಾಗಿ ಇನ್ನುಳಿದ ಶಿಕ್ಷಕಿಯರ ಮೇಲೆ ಬೆರಳು ಮಾಡದೇ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಎಂ.ಜಿ. ವಾಲಿ ಮೇಲೆ ದೂರಿನ ಸುರಿಮಳೆಗೈಯ್ದರು. ಮುಖ್ಯಗುರುಗಳು ಇಲ್ಲಿ ಹಲ್ಲು ಕಿತ್ತ ಹಾವಿನಂತಾಗಿದ್ದಾರೆ. ಅವರ ಮಾತು ಯಾರು ಕೇಳುವುದಿಲ್ಲ. ಶಾಲೆಯಲ್ಲಿ ಒಟ್ಟು 1-8ನೇ ತರಗತಿವರೆಗೆ ವರ್ಗಗಳಿದ್ದು 122 ವಿದ್ಯಾರ್ಥಿಗಳಿದ್ದಾರೆ. ಒಟ್ಟು ಆರು ಜನ ಶಿಕ್ಷಕರಿದ್ದು ಅದರಲ್ಲಿ ಮುಖ್ಯ ಶಿಕ್ಷಕರು ಪುರುಷರಾಗಿದ್ದರೆ ಐವರು ಶಿಕ್ಷಕಿಯರಿದ್ದಾರೆ.
ಮುಖ್ಯಗುರು ಎ.ವಿ. ಕುಲಕರ್ಣಿ ಶಿಕ್ಷಕಿಯರಿಗೆ ವಿರುದ್ಧ ಮಾತನಾಡದೇ ಮೌನವಾಗಿರುವುದೇ ಉತ್ತಮ ಎಂಬಂತೆ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕಿ ಎಂ.ಜಿ. ವಾಲಿ ಅವರಂತೂ ಮುಖ್ಯಶಿಕ್ಷಕರಿಂದಲೇ ತಮ್ಮ ವರ್ಗ ಕೋಣೆಗೆ ಚಾಕ್‌ಪೀಸ್ ತರಿಸಿಕೊಳ್ಳುತ್ತಾರೆ. ಪ್ರಾರ್ಥನೆ ಸಮಯದಲ್ಲಿ ಇರುವುದಿಲ್ಲ. ಇವರಿಗೆ ಯಾರೂ ಏನು ಕೇಳುವವರು ಹೇಳುವರು ಯಾರು ಇಲ್ಲವಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಗ್ರಾಪಂ ಸದಸ್ಯ ನಿಂಗನಗೌಡ ಪಾಟೀಲ, ಗ್ರಾಮಸ್ಥರಾದ ಎಂ.ಎಚ್. ನಾವದಗಿ, ನಾಗನಗೌಡ ಪಾಟೀಲ, ಆರ್.ಜಿ. ಹಿರೇಮಠ, ಎಂ.ಎನ್. ಇನಾಮದಾರ, ಮಹ್ಮದ್‌ರಫಿಕ್ ಇನಾಮದಾರ, ಎಚ್.ಎಂ. ಚಲವಾದಿ, ಶಿವಪುತ್ರಪ್ಪ ಚಲವಾದಿ, ಮಹಾದೇವಿ ಹಿರೇಮಠ, ಭಾಷಾಸಾಬ ಮಾಗಿ, ಅಲ್ಲಾಪಟೇಲ್ ಬಿರಾದಾರ, ಹುಸೇನಪಟೇಲ್ ಬಿರಾದಾರ, ಭೀಮಣ್ಣ ಚಲವಾದಿ, ಯಾಸೀನ್ ಹಾದಿಮನಿ, ಮಾರುತಿ ಮಾದರ, ರೆಹಮಾನ್ ಸಾಬ ತಾಳಿಕೋಟಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.