ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಿ
Team Udayavani, Sep 8, 2020, 6:16 PM IST
ಸಿಂದಗಿ: ಶಿಕ್ಷಕರು ಆದರ್ಶ ಜೀವನ ಕಟ್ಟಿಕೊಂಡು ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕುಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ಸೋಮವಾರ ಪಟ್ಟಣದ ಮಾಂಗಲ್ಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ದೈಹಿಕಶಿಕ್ಷಕರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನೋತ್ಸವ, ಸಿರಿಗನ್ನಡ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ವಯೋಮಾನಕ್ಕಿಳಿದು ಪಾಠ ಬೋಧನೆ ಮಾಡಿದಾಗ ಮಾತ್ರ ಪರಿಣಾಮಕಾರಿ ಕಲಿಕೆಯಾಗುವುದು. ಈ ಕಲಿಕೆಯಿಂದ ವಿದ್ಯಾರ್ಥಿಯಾಗಿ ಮುಂದೆ ಉತ್ತಮ ನಾಗರಿಕನಾಗುತ್ತಾನೆ. ಈ ನಿಟ್ಟಿನಲ್ಲಿ ಶೈಕ್ಷಣಿಕ ಕಾರ್ಯ ಮಾಡಿದ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡುವಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನಿಯ ಎಂದರು.
ಬರಡೋಲದ ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ಈರಣ್ಣ ಶಾಸ್ತ್ರಿ ಮಾತನಾಡಿ, ಶಿಕ್ಷಕರು ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳ ಬೇಕು.ಮಕ್ಕಳಿಗೆ ಪಾಠ ಬೋಧನೆ ಮಾಡುವ ಜೊತೆಗೆ ಮೌಲ್ಯಾಧಾರಿತ ನೀತಿಗಳನ್ನು ತಿಳಿ ಹೇಳಿ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಲಬುರಗಿಯ ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿ, ಶಿಕ್ಷಕರಿಗೆ ಪ್ರಶಸ್ತಿ ನೀಡುವ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ದೈಹಿಕ ಶಿಕ್ಷಕರ ಸಂಘದ ಕಾರ್ಯ ಅನುಕರಣೀಯ ಎಂದರು.
ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶಿಕ್ಷಕರಾದ ಧನ್ಯಕುಮಾರ ಧನಶೆಟ್ಟಿ, ಲಕ್ಷ್ಮೀ ತೇರದಾಳಮಠ, ಬಸವರಾಜ ಬಿರಾದಾರ, ಮಹಾಂತೇಶ ಕಲಶೆಟ್ಟಿ, ಸಂತೋಷ ಕ್ಷತ್ರಿ, ರೇವಣಸಿದ್ದ ಮೇತ್ರಿ, ಜಯಶ್ರೀ ಬಾಸಗಿ, ಚನ್ನಮ್ಮ ಬಮ್ಮಣ್ಣಿ, ಯಲ್ಲಪ್ಪ ಬೂದಿಹಾಳ, ಮಂಜುನಾಥ ಪಾಟೀಲ, ಪಲ್ಲವಿ ವೈದಂಡೆ, ಸರಸ್ವತಿ ಬಿರಾದಾರ, ಲಕ್ಷ್ಮಣ ಸೊನ್ನ, ಮಾಳಪ್ಪ ಹೊಸೂರ, ಸಿದ್ರಾಮಪ್ಪ ಗಬಸಾವಳಗಿ, ಕೆಂಚಪ್ಪ ಡೋಣಿ, ಪ್ರಕಾಶ ಹೋಳಿನ, ಸವಿತಾ ಬಿರಾದಾರ, ತಾರಾಮತಿ ಪಾಟೀಲ, ಚಂದ್ರಶೇಖರ ಕೆಳಗಿನಮನಿ, ಮಹಿಬೂಬಭಾಷಾ ಬಾವಿಪಟೇಲ್, ಶಿವಾನಂದ ಶಹಾಪುರ, ಎಂ.ಜಿ. ಚೌಧರಿ, ಜಿ.ಎಂ. ಯಲಗಾರ, ಇಬ್ರಾಹಿಂ ಸಿಪಾಯಿ, ರಂಗಾ ಶಿಂಧೆ, ಕಸ್ತೂರಿ ಗೆಡ್ಡೆಪ್ಪನವರ, ಜಿ.ಎಂ. ಪಾಟೀಲ, ಶಶಿಧರ ಅವಟಿ, ಎಂ.ಎಂ. ಆಳಂದ, ಮಹಾಂತೇಶ ಅಂಗಡಿ, ರೋಹಿಣಿ ಬರಡೋಲ, ಸಂತೋಷಕುಮಾರ ಬಂಡೆ, ಮೆಹರುನಸಾ ಬೇಪಾರಿ, ಮಹಿಬೂಬ ಅಸಂತಾಪುರ, ಚಂದ್ರಕಲಾ ಬಿರಾದಾರ, ಪುಷ್ಪಾವತಿ ಬಡಿಗೇರ, ರುದ್ರಗೌಡ ಬಿರಾದಾರ, ಪ್ರೀತಿ ಕಾಳೆ, ವಿಜಯಲಕ್ಷ್ಮೀ ಶೆಟಗಾರ, ಬರಮಪ್ಪ ಹಿರೆಹೊಳಿ ಅವರಿಗೆ ಸಿರಿಗನ್ನಡ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಂತರ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಾರ್ಷಿಕಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಜ್ಞಾನಭಾರತಿ ಶಾಲೆ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಶಿಕ್ಷಕ ಚಂದ್ರಕಾಂತ ಸಿಂಗೆ ಮತ್ತು ಪ್ರಲ್ಹಾದ ದೊಡಮನಿ ರೈತ ಗೀತೆ ಹಾಡಿದರು. ಕಸಾಪ ಅಧ್ಯಕ್ಷ ಎಸ್.ಬಿ. ಚೌಧರಿ ಸ್ವಾಗತಿಸಿದರು. ಮುಕ್ತಾಯಕ್ಕ ಕಟ್ಟಿ ನಿರೂಪಿಸಿದರು. ಬಸವರಾಜ ಅಗಸರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!
Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.