ಬೇಡಿಕೆ ಈಡೇರಿಕೆಗೆ ಶಿಕ್ಷಕರ ಆಗ್ರಹ
Team Udayavani, Aug 6, 2018, 12:18 PM IST
ವಿಜಯಪುರ: ಪ್ರತಿ ತಿಂಗಳು 5ರೊಳಗೆ ಶಿಕ್ಷಕರ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ವ ಶಿಕ್ಷಣ ಅಭಿಯಾನ ವಿಜಯಪುರ ಗ್ರಾಮೀಣ ವಲಯದ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಎರಡು ವಾರದಲ್ಲಿ ಬೇಡಿಕೆ ಈಡೇರಿಸುವ ಗಡುವು ನೀಡಿದರು.
ನಗರದ ಟಕ್ಕೆ ಪ್ರದೇಶದಲ್ಲಿರುವ ವಿಜಯಪುರ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಶಿಕ್ಷಕರು, ಸರ್ಕಾರದ ಆದೇಶದವಿದ್ದರೂ ವಿಜಯಪುರದ ಗ್ರಾಮೀಣ ವಲಯದ ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಶಿಕ್ಷಕರ 2-3 ತಿಂಗಳ ವೇತನ ಬಾಕಿ ಉಳಿಸಿಕೊಳ್ಳಲಾಗುತ್ತದೆ. ಪದೇ ಪದೇ ಈ ವಿಷಯದಲ್ಲಿ ಹೋರಾಟ ಮಾಡುವುದು ಸಾಮಾನ್ಯವಾಗಿದೆ ಎಂದು ದೂರಿದರು.
ಎಸ್‌ಎಸ್‌ಎ, ಎಜಿಟಿ ಹಾಗೂ ಎನ್‌ಪಿಎಸ್ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು ಈ ಶಿಕ್ಷಕರಿಗೆ ಕಳೆದ ಎರಡು ತಿಂಗಳಿಂದ ವೇತನ ಪಾವತಿಸಿಲ್ಲ. 2005ರಿಂದ ಈ ವರೆಗೆ ಸೇವೆಗೆ ಸೇರಿದ ಶಿಕ್ಷಕರ ಮೂಲ ವೇತನ ರೂ. 31,850ರಂತೆ ನಿಗದಿ ಮಾಡುವ ಬೇಡಿಕೆ ಈಡೇರಿಲ್ಲ. ಶಿಕ್ಷಕರ ವಂತಿಗೆ ಹಣ ಕಟಾವು ಮಾಡಿದ್ದರೂ ಸರ್ಕಾರದ ಪಾಲಿನ ವಂತಿಗೆ ಹಣ ಜಮೆ ಮಾಡಿಲ್ಲ. ಕೂಡಲೇ ಶೇ. 8ರ ಬಡ್ಡಿಯೊಂದಿಗೆ ಜಮೆ ಮಾಡುವಂತೆ ಆಗ್ರಹಿಸಿದರು.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಕಾಯಂ ಪೂರ್ವ ಸೇವಾ ಅವಧಿ ವಿಳಂಬವಾಗಿ ಘೋಷಣೆ ಮಾಡಿದ್ದು ಆ ಅವಧಿಯ ಬಾಕಿ ವೇತನ ತಕ್ಷಣ ನೀಡಬೇಕು. 10 ವರ್ಷದ ಕಾಲಮಿತಿ ವೇತನ ಬಡ್ತಿ ವಿಳಂಬವಾಗಿ ಮಂಜೂರಿ ಮಾಡಿದ್ದು ಅವಧಿಯ ಬಾಕಿ ವೇತನವನ್ನು ಶೀಘ್ರ ಜಮೆ ಮಾಡಬೇಕು. ಶಿಕ್ಷಕರಿಗೆ ಒಂದು ವಿಶೇಷ ವೇತನ ಬಡ್ತಿ ವಿಳಂಬವಾಗಿದ್ದು,
ವಿಶೇಷ ವೇತನ ಬಡ್ತಿಯ ಬಾಕಿ ವೇತನ ಜಮೆ ಮಾಡಬೇಕು.
ಎಸ್‌ಎಸ್‌ಎ ಯೋಜನೆಯ ಶಿಕ್ಷಕರ 2008 ರಿಂದ 2011 ಅವ ಧಿವರೆಗಿನ ಕಂತುಗಳು ಶಿಕ್ಷಕರ ವೇತನದಲ್ಲಿ ಕಟಾವು ಮಾಡಿದ್ದರೂ ಅವರ ಖಾತೆಗೆ ಇನ್ನು ಜಮೆ ಆಗಿರುವುದಿಲ್ಲ. ಅದನ್ನು ತಕ್ಷಣವೇ ಅವರ ಖಾತೆಗೆ ಜಮೆ ಮಾಡಿಸಬೇಕು. ತುಟ್ಟಿಭತ್ಯೆ ಬಾಕಿ ಹಣ ಜಮೆ ಮಾಡಬೇಕು. ಬೇಡಿಗೆ ಸಂಭ್ರಮದಲ್ಲಿ ಕಾರ್ಯನಿರ್ವಹಿಸಿದ ಸುಮಾರು 105 ಶಿಕ್ಷಕರ ಗಳಿಕೆ ರಜೆ ಜಮೆ ಮಾಡಿ ಸೇವಾಪುಸ್ತಕದಲ್ಲಿ ನಮೂದಿಸಬೇಕು.
ವೈದ್ಯಕೀಯ ವೆಚ್ಚ ಮರು ಪಾವತಿಗಾಗಿ ಕಚೇರಿಗೆ ಬಿಲ್ ಸಲ್ಲಿಸಿದರೂ ಮಂಜೂರು ಮಾಡಿಲ್ಲ. ತಕ್ಷಣ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು. ನಿವೃತ್ತಿ ವೇತನ ಸಹಿತವಾಗಿ 2005ರಲ್ಲಿ ಸೇವೆಗೆ ಸೇರಿದ ಶಿಕ್ಷಕರಿಗೂ ಇಲಾಖೆ ಅನುಮತಿ ಸಹಿತ ನೇಮಕಗೊಂಡಿರುವ ಶಿಕ್ಷಕರ ನಿವೃತ್ತಿ ವೇತನ ಸಹಿತವಾಗಿ ಎಲ್ಲ ಆರ್ಥಿಕ ಸೌಲಭ್ಯ ಕಲ್ಪಿಸಬೇಕು
ಎಂದ ಆಗ್ರಹಿಸಿದರು.
ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಎನ್. ಹುರಳಿ, ಶಿಕ್ಷಕರ ವೇತನ ಬಿಡುಗಡೆ ಸೇರಿದಂತೆ ಎಲ್ಲ ಬೇಡಿಕೆಗಳನ್ನು ಬರುವ ಒಂದು ವಾರದಲ್ಲೇ ಪರಿಹರಿಸುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಶಿಕ್ಷಕರ ಸಂಘದ ಗ್ರಾಮೀಣ ವಲಯದ ಅಧ್ಯಕ್ಷ ಎ.ಎನ್. ಬಗಲಿ, ಕಾರ್ಯದರ್ಶಿ ಎ.ಆರ್. ಮಾಶ್ಯಾಳ, ಆರ್.ಎಸ್. ಬನಸೋಡೆ, ಅಶೋಕ ಬೂದಿಹಾಳ, ಎಂ.ಎಸ್. ಟಕ್ಕಳಕಿ, ಮಹಾಂತೇಶ ಕದ್ದಿ, ಬಸವರಾಜ ಪಡಗನೂರ,
ಹನುಮಂತ ಕಾಲೆಬಾಗ, ಪರಮೇಶ್ವರ ಗದ್ಯಾಳ, ಅನಿಲ ಗುಡೆಪ್ಪಗೋಳ, ಅಡಿವೆಪ್ಪ ಸಾಹುಕಾರ, ವಿ.ಎಸ್. ನಿಂಗರೆಡ್ಡಿ, ಶಿವಶರಣಪ್ಪ ತಡಲಗಿ, ಪ್ರಕಾಶ ಕುಲಂಗಿ, ಕುಮಾರ ಗಳತಗಿ, ಎಸ್.ಎನ್. ಬಾಗಲಕೋಟೆ, ವಿ.ಎಸ್. ಕಪಟಕರ, ಎಂ.ಎಚ್. ಜಮಾದಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಕಾರು ಢಿಕ್ಕಿ; ಸ್ಕೂಟರ್ ಸವಾರನಿಗೆ ಗಾಯ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.