ಬಾವಡಿ ಪುನಶ್ಚೇತನಕ್ಕೆ ಟೆಂಡರ್ ಪ್ರಕ್ರಿಯೆ
Team Udayavani, Jul 17, 2018, 4:23 PM IST
ವಿಜಯಪುರ: ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಜಲ ಸಂಪನ್ಮೂಲ ಇಲಾಖೆಯಿಂದ ಐತಿಹಾಸಿಕ ಜಲ ಸಂಗ್ರಹಗಳಾದ ಬಾವಡಿಗಳ ಪುನಶ್ಚೇತನಕ್ಕೆ ಕೈಗೊಂಡಿದ್ದ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ವಿಜಯಪುರ ನಗರ ಹಾಗೂ ಗ್ರಾಮೀಣ ಭಾಗದಲ್ಲಿರುವ ಐತಿಹಾಸಿಕ 10 ಬಾವಡಿಗಳ ಪುನಶ್ಚೇತನಕ್ಕೆ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಮಾಜಿ ಸಚಿವರಾದ ಬಬಲೇಶ್ವರ ಶಾಸಕ ಡಾ| ಎಂ.ಬಿ. ಪಾಟೀಲ ಹೇಳಿದರು.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ತಿಷಯ ತಿಳಿಸಿದ ಅವರು, ನಗರದಲ್ಲಿ ಈಗಾಗಲೇ ತಾಜ್‌ಬಾವಡಿ, ಇಬ್ರಾಹಿಂಪುರ ಬಾವಡಿ ಪುನಶ್ಚೇತನ ಆರಂಭಗೊಳಿಸಿ ಕುಡಿಯುವ ಬಳಕೆಗಾಗಿ ಜಲ ಶುದ್ಧೀಕರಣ ಘಟಕಗಳನ್ನೂ ಅಳವಡಿಸಲಾಗಿದೆ. ಈ ಯಶಸ್ಸಿನ ನಂತರ ನಾನು ಸಚಿವನಾಗಿದ್ದ ಜಲ ಸಂಪನ್ಮೂಲ ಇಲಾಖೆಯಿಂದ ಜಿಲ್ಲೆಯ 10 ಬಾವಡಿಗಳ ಪುನಶ್ಚೇತನಕ್ಕೆ ಮುಂದಾಗಿದ್ದು ಈಗ
ಟೆಂಡರ್ ಕರೆಯಲಾಗುತ್ತಿದೆ ಎಂದರು.
ಇದರಲ್ಲಿ ನಗರದಲ್ಲಿರುವ ಐದು ಬಾವಡಿಗಳ ಪುನಶ್ಚೇತನಕ್ಕೆ ಜೋಡುಗುಮ್ಮಡ ಬಾವಡಿ 23.75 ಲಕ್ಷ ರೂ., ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿರುವ ಬಾವಡಿ 31 ಲಕ್ಷ ರೂ., ಸೈನಿಕ ಶಾಲೆ ಬಾವಡಿ 24 ಲಕ್ಷ ರೂ., ಹಾಸಿಂಪೀರ್ ದರ್ಗಾ ಬಳಿ ಇರುವ ಬಾವಡಿ 32 ಲಕ್ಷ ರೂ. ಹಾಗೂ 2 ಎಕರೆ ವಿಸ್ತಾರದಲ್ಲಿರುವ ಬಡಿ ಬಾವಡಿ ಪುನಶ್ಚೇತನಕ್ಕೆ 1.98 ಕೋಟಿ ರೂ. ಸೇರಿದಂತೆ
ಎಲ್ಲ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ ಎಂದರು.
ಇದಲ್ಲದೇ ಜಿಲ್ಲೆ ಗ್ರಾಮೀಣ ಪ್ರದೇಶದಲ್ಲಿರುವ ದೇವರಹಿಪ್ಪರಗಿ ಪಾತರಗಿತ್ತಿ ಬಾವಡಿ 32 ಲಕ್ಷ ರೂ., ಆಲಮೇಲದ ಅಕ್ಕ ತಂಗಿಯರ ಬಾವಡಿ, 61 ಲಕ್ಷ ರೂ. ಮನಗೂಳಿ ಗ್ರಾಮದಲ್ಲಿರುವ ಬಾವಡಿ 42 ಲಕ್ಷ ರೂ., ಬಸವನಬಾಗೇವಾಡಿಯ ಬಸವರ್ಣಣ ಬಾವಿ 45 ಲಕ್ಷ ರೂ. ಹಾಗೂ ಮುತ್ತಗಿ ಗ್ರಾಮದಲ್ಲಿರುವ ಬಾವಡಿ 65 ಲಕ್ಷ ರೂ. ಸೇರಿದಂತೆ ಈ ಎಲ್ಲ 10 ಬಾವಡಿಗಳ ಪುನಶ್ಚೇತನಕ್ಕೆ 5.57 ಕೋಟಿ ರೂ. ಟೆಂಡರ್ ಕರೆಯಲಾಗುತ್ತಿದೆ. ಈ ಎಲ್ಲ ಬಾವಡಿಗಳ ನೀರು ಸದ್ಬಳಕೆ ಮಾಡಿಕೊಳ್ಳಲು ಶುದ್ಧೀಕರಣ ಘಟಕಗಳನ್ನೂ ಅಳವಡಿಸಲಾಗುತ್ತಿದೆ. ಬರುವ ವರ್ಷ ಜಿಲ್ಲೆಯ ಇನ್ನೂ 10 ಬಾವಡಿಗಳ ಪುನಶ್ಚೇತನ ಕಾರ್ಯಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ವಿವರಿಸಿದರು.
ಇದಲ್ಲದೇ ವಿಶೇಷ ಘಟಕ ಯೋಜನೆಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರು ಭಾಷಣ ಮಾಡಿರುವ ನಗರಲ್ಲಿರುವ ಜಿಲ್ಲಾ ಕ್ರೀಡಾಂಗಣಕ್ಕೆ ಅವರ ಹೆಸರನ್ನೇ ಇಡಲಾಗಿದ್ದು, ಇದೀಗ ಈ ಕ್ರೀಡಾಂಗಣವನ್ನು ರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ಮಾಡಲು ಯೋಜನೆ ರೂಪಿಸಲಾಗಿತ್ತು. ಇದರ ಭಾಗವಾಗಿ 400 ಮೀ. ಸಿಂಥೆಟಿಕ್ ಟ್ರಾಫಿಕ್ ನಿರ್ಮಾಣ, ಈಜುಕೊಳ ನಿರ್ಮಾಣ, ಒಳಾಂಗಣ ಕ್ರೀಡಾಂಣಗ, ವಾಲಿಬಾಲ್ ಅಂಕಣ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆ ಉಲಾಖೆ ಸಿದ್ಧಪಡಿಸಿದೆ. ಸದರಿ ಯೋಜನೆಗಳಲ್ಲಿ ಈಜುಗೊಳ ನಿರ್ಮಾಣ ಯೋಜನೆಯೂ ಸೇರಿದ್ದು, ಸ್ಥಳಾಭವದಿಂದಾಗಿ ಬೇರೆ ಕಡೆ ನಿರ್ಮಿಸಿದರೂ ಡಾ| ಅಂಬೇಡ್ಕರ್ ಹೆಸರು ಇರಿಸಲಾಗುತ್ತದೆ ಎಂದರು.
ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಮಂಗಾರು ಕ್ಷೀಣಿಸಿದೆ. ಮಹಾರಾಷ್ಟ್ರದಲ್ಲಿ ಉತ್ತಮ ಮಳೆ ಆಗುತ್ತಿರುವ ಕಾರಣ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು ಆಲಮಟ್ಟಿಯ ಶಾಸ್ತ್ರಿ ಜಲಾಶಯ ಸೇರಿದಂತೆ ಎಲ್ಲ ಜಲಾಶಯಗಳು ಭರ್ತಿಯಾಗುತ್ತಿವೆ. ಹೀಗಾಗಿ ನಾಲೆಗಳಿಗೆ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಜಲಾಶಯಗಳ ನೀರು ಬಿಡುವಂತೆ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ, ಜಲಾಶಯದ ನೀರು ನಿರ್ವಹಣಾ ಮಂಡಳಿ ಅಧ್ಯಕ್ಷರಾಗಿರುವ ಜಿಲ್ಲೆಯ ಸಚಿವ ಶಿವಾನಂದ ಪಾಟೀಲ, ಸಚಿವ ಎಂ.ಸಿ. ಮನಗೂಳಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದೇನೆ ಎಂದು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Compliant: ಸಿಆರ್‌ಪಿಎಫ್ ಭದ್ರತೆ ಕೊಡಿಸಿ, ನನ್ನ ಜೀವಕ್ಕೆ ಅಪಾಯ ಇದೆ: ಸಿ.ಟಿ.ರವಿ
Protest: ಆಶಾ ಕಾರ್ಯಕರ್ತೆಯರು ಪ್ರತಿಭಟಿಸದಂತೆ ಮನವೊಲಿಸುವ ಹೊಣೆ ಜಿಲ್ಲಾಧಿಕಾರಿಗಳಿಗೆ
Convention: ಮೊಗವೀರರ ಬೇಡಿಕೆ ಮುಂದಿನ ಬಜೆಟ್‌ನಲ್ಲಿ ಈಡೇರಿಸಲು ಬದ್ಧ: ಸಿದ್ದರಾಮಯ್ಯ
Kerala: ಬಾಲಕಿ ಮೇಲೆ ಅತ್ಯಾಚಾ*ರ: ಕೇರಳ ಯುವಕನಿಗೆ 87 ವರ್ಷ ಶಿಕ್ಷೆ
Kundapura: ಗೋಸಾಗಾಟ ತಡೆದ ಸಿಸಿಟಿವಿ ವೀಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.