ವೈಶಿಷ್ಟ್ಯಗಳ ವಚನ ಶಿಲಾಮಂಟಪ: ರಾಜ್ಯಪಾಲರಿಂದ ಉದ್ಘಾಟನೆ
Team Udayavani, Jun 8, 2022, 11:48 PM IST
ವಿಜಯಪುರ: ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಸ್ಥಾಪಿಸಲಾಗಿರುವ ದೇಶದ ವಿಶಿಷ್ಟ ಹಾಗೂ ಏಕೈಕ ವಚನಶಿಲಾ ಮಂಟಪವನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಬುಧವಾರ ಉದ್ಘಾಟಿಸಿದರು.
ಇಂಗಳೇಶ್ವರ ವಿರಕ್ತ ಮಠದ ಚನ್ನಬಸವ ಶ್ರೀಗಳು ಈ ವಿಶೇಷ ಯೋಜನೆಯ ಹಿಂದೆ ಇದ್ದಾರೆ. ಅರ್ಧ ಶತಮಾನದ ಹಿಂದೆ ದೇಶಾದ್ಯಂತ ಪಾದಯಾತ್ರೆ ಸಂಚಾರದಲ್ಲಿದ್ದಾಗ ಬರೋಡಾ ವಿಶ್ವವಿದ್ಯಾನಿಲಯದಲ್ಲಿ ಶಿಲೆಯಲ್ಲಿ ಅರಳಿದ ಸಾಹಿತ್ಯವನ್ನು ಅವಲೋಕಿಸಿದ್ದರು.
ವಚನಶಿಲಾ ಮಂಟಪದ ರೂವಾರಿ ಚನ್ನಬಸವ ಶ್ರೀಗಳು, ಹಾಲಿ ಪೀಠಾಧಿಪತಿ ಡಾ| ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಧಿಕಾರಿ ಡಾ| ವಿ.ಬಿ. ದಾನಮ್ಮವರ, ಎಸ್ಪಿ ಆನಂದ ಕುಮಾರ, ಯರನಾಳದ ಗುರುಸಂಗನಬಸವ ಶ್ರೀಗಳು ಸಹಿತ ನೂರಾರು ಮಠಾಧಿಧೀಶರು ಈ ಸಂದರ್ಭ ಉಪಸ್ಥಿತರಿದ್ದರು.
ಯಾರ ವಚನಗಳಿವೆ?
ಬಸವೇಶ್ವರ ಸಮಗ್ರ ವಚನಗಳು ಹಾಗೂ ಪ್ರಭು ದೇವರು, ಚನ್ನಬಸವಣ್ಣ, ಅಕ್ಕಮಹಾದೇವಿ, ಸಿದ್ಧರಾಮ ಶರಣರು ಮುಂತಾದವರ ವಚನಗಳಿವೆ.
40 ವರ್ಷ- ಚನ್ನಬಸವ ಶ್ರೀಗಳ ಪರಿಶ್ರಮ
– ಸರಕಾರದಿಂದ ಯಾವುದೇ ನೆರವು ಪಡೆದಿಲ್ಲ
– ಶರಣರ ವಚನಗಳನ್ನು ಶಿಲೆಗಳಲ್ಲಿ ಕೆತ್ತಿಸಲೇಬೇಕೆಂದು ನಿರ್ಧರಿಸಿ ಭಕ್ತರಿಂದಲೇ ಹಣ ಸಂಗ್ರಹಕ್ಕೆ ತೀರ್ಮಾನ
– 40 ವರ್ಷ ನಿರಂತರ ಎಡೆಬಿಡದ ಸಾಧನೆಯಿಂದ ಐತಿಹಾಸಿಕ ಸಾಧನೆ.
– ಜಗತ್ತಿನಲ್ಲೇ ಇಂಗಳೇಶ್ವರ ವಚನಶಿಲಾ ಮಂಟಪ ವಿಶಿಷ್ಟತೆ ಪಡೆದಿದೆ. ಭವಿಷ್ಯದಲ್ಲಿ ಪ್ರವಾಸಿಗರ ಆಕರ್ಷಣೆ ಆಗುವ ನಿರೀಕ್ಷೆ ಇದೆ.
– 1.60 ಲಕ್ಷ ಅಕ್ಷರಗಳ 1200 ವಚನ- ಶಿಲೆಗಳಲ್ಲಿ ಅರಳಿದ ವಚನಗಳು. ಅದಕ್ಕೆ ಷಟಸ್ಥಲ ಪರಿಕಲ್ಪನೆ ಬಳಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.