ಮುದ್ರಣ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ ಅನಿವಾರ್ಯ
Team Udayavani, Jan 29, 2022, 4:48 PM IST
ವಿಜಯಪುರ: ಪ್ರಸಕ್ತ ಸಂದರ್ಭದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಯಿಂದ ಮುದ್ರಣ ಕ್ಷೇತ್ರ ಹೊಸ ರೂಪ ಪಡೆದುಕೊಂಡಿದೆ. ಹೀಗಾಗಿ ಪ್ರತಿಯೊಬ್ಬ ಮುದ್ರೋದ್ಯಮಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಅನಿವಾರ್ಯ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ್ ವಾಲೀಕಾರ ಅಭಿಪ್ರಾಯಪಟ್ಟರು.
ನಗರದಲ್ಲಿ ಪ್ರಿಂಟಿಂಗ್ ಪ್ರಸ್ ವರ್ಕರ್ಸ್ ಸಂಘದಿಂದ ಹಮ್ಮಿಕೊಂಡಿದ್ದ ಮುದ್ರೋದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುದ್ರಣ ವಿಭಾಗದಲ್ಲಿ ವಿದ್ಯೆ ಹಾಗೂ ಬುದ್ಧಿ ಇದ್ದರೆ ಮಾತ್ರ ಕಾಯಕ ಮಾಡಲು ಸಾಧ್ಯ. ಪ್ರತಿ ಕ್ಷೇತ್ರಕ್ಕೂ ಮುದ್ರಣ ಅನಿವಾರ್ಯ, ಕ್ರಿಯಾಶೀಲ ಪ್ರತಿಭಾವಂತ ಮುದ್ರಣ ವಿನ್ಯಾಸಕಾರರಿಗೆ ತುಂಬಾ ಬೇಡಿಕೆಯಿದೆ. ಈ ನಿಟ್ಟಿನಲ್ಲಿ ಹೊಸತನ ರೂಢಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.
ಸನ್ಮಾನಿತರ ಪರವಾಗಿ ಮಾತನಾಡಿದ ಸ್ಕ್ರೀನ್ ಪ್ರಿಂಟರ್, ನಗರಸಭೆ ಮಾಜಿ ಸದಸ್ಯ ರವಿ ಕುಲಕರ್ಣಿ ಮಾತನಾಡಿ, ಗ್ರಾಹಕರಿಗೆ ತೊಂದರೆ ನೀಡದೇ ಮುದ್ರೋತ್ಪನ್ನಗಳನ್ನು ಶೀಘ್ರ ಪೂರೈಸಬೇಕು. ಇದರಿಂದ ಆಧುನಿಕ ತಂತ್ರಜ್ಞಾನ ಅಳವಡಿಕೆ ಅನಿವಾರ್ಯ ಹಾಗೂ ಅವಶ್ಯ ಎಂದರು.
ಸರೋಜಾ ಮಾತನಾಡಿ, ನಿರ್ಮಲ ಮನಸ್ಸು, ಸಹನಾ ಮನೋಭಾವದಿಂದ ಕಾಯಕದಲ್ಲಿ ನಿರತರಾದರೆ ಅತ್ಯನ್ನತ ಗುರಿ ತಲುಪುವ ಮೂಲಕ ಸಾಧನೆಗೆ ಮಾರ್ಗ ದೊರಕುತ್ತದೆ. ಮುದ್ರಣ ಕಾರ್ಯ ಮಾಡುವವರು ಸಂಶೋಧನಾತ್ಮಕ ಗುಣ ಹೊಂದಿರಬೇಕು. ಗ್ರಾಹಕರ ಮನವನ್ನು ಗೆಲ್ಲುವಂತಹ ಗುಣಮಟ್ಟದ ಮುದ್ರಣ ಮಾಡುವ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದರು.
ಪತ್ರಕರ್ತ ರಫಿ ಭಂಡಾರಿ ಮತ್ತು ಅಬ್ದುಲ್ ರೌಫ್ ಪಟೇಲ್, ಬಂಡು ಕುಲಕರ್ಣಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಿಂಟಿಂಗ್ ಪ್ರಸ್ ಮಾಲೀಕರ ಸಂಘದ ಅಧ್ಯಕ್ಷ ಚಿದಾನಂದ ವಾಲಿ ಜಿಲ್ಲೆಯ ಮುದ್ರಣ ಕ್ಷೇತ್ರದ 42 ಹಿರಿಯರಿಗೆ ಮುದ್ರೋದ್ಯಮಿ ಪ್ರಶಸ್ತಿ ಪ್ರದಾನ ಮಾಡಿದರು.
ಸಂಘದ ಗೌರವಾಧ್ಯಕ್ಷ ಚಂದ್ರಶೇಖರ ಬುರಣಾಪುರ, ಉಪಾಧ್ಯಕ್ಷ ಪ್ರಕಾಶ ಮಠ, ಕಾರ್ಯದರ್ಶಿ ವೆಂಕಟೇಶ ಕಪಾಲಿ ವೇದಿಕೆಯಲ್ಲಿದ್ದರು. ಮಹಮ್ಮದ ಹನೀಫ್ ಮುಲ್ಲಾ, ಮೃತ್ಯುಂಜಯ ಶಾಸ್ತ್ರಿ. ಜಗದೀಶ ಶಹಾಪುರ, ನಾಗರಾಜ ಬಿಸನಾಳ, ಬಸವರಾಜ ಹಾವಿನಾಳ. ದೀಪಕ ಜಾಧವ, ಉಮೇಶ ಶಿವಶರಣ, ನಬಿಲಾಲ್ ಮಕಾಂದಾರ, ಮಂಜುನಾಥ ರೂಗಿ, ಬಸವರಾಜ ಗೊಳಸಂಗಿಮಠ, ಉಮೇಶ ಕುಲಕರ್ಣಿ, ಭೀಮಾಶಂಕರ ಕುಮಟಗಿ, ಸಂತೋಷ ಹುಣಶ್ಯಾಳ, ರೇವಣಸಿದ್ದ ಧೂಳೆ, ಶ್ಯಾಮ ದಿವಾಕರ, ಸತೀಶ ಸಾತಪುಟೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.