ಶಾಸಕರ ರೆಸಾರ್ಟ್ ಯಾತ್ರೆಗೆ ತೀವ್ರ ಆಕ್ರೋಶ
Team Udayavani, Jan 16, 2019, 10:34 AM IST
ಆಲಮಟ್ಟಿ: ರಾಜ್ಯದ ಜನರು ಶಾಸಕರುಗಳನ್ನು ತಮ್ಮ ಸೇವೆ ಮಾಡಲು ಆಯ್ಕೆ ಮಾಡಿದ್ದಾರೆ. ಅದನ್ನರಿತು ಜನ ಪ್ರತಿನಿಧಿಗಳು ತಮ್ಮ ಕ್ಷೇತ್ರಗಳ ಸಮಸ್ಯೆಗಳನ್ನು ಬಗೆಹರಿಸದೇ ರೆಸಾರ್ಟ್ ಯಾತ್ರೆ ಮಾಡುವುದು ತರವಲ್ಲ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದ್ದಾರೆ.
ರಾಜ್ಯದಲ್ಲಿರುವ ಆಡಳಿತ ಪಕ್ಷಗಳು ಹಾಗೂ ವಿರೋಧ ಪಕ್ಷಗಳು ಚುನಾವಣೆಗಳಲ್ಲಿ ನಾಡಿನ ಜನತೆಗೆ ನೀಡಿರುವ ಭರವಸೆಗಳನ್ನು ಮರೆತು ಕೇವಲ ಅಧಿಕಾರಕ್ಕಾಗಿ ರೆಸಾರ್ಟ್ ಯಾತ್ರೆ ಮಾಡುತ್ತಿರುವ ಪರಿಣಾಮ ರಾಜ್ಯದ ಹಲವಾರು ಜ್ವಲಂತ ಸಮಸ್ಯೆಗಳು ಇನ್ನಷ್ಟು ಬಿಗಡಾಯಿಸುತ್ತವೆ. ಅದನ್ನರಿತು ಜನ ಪ್ರತಿನಿಧಿಗಳಾದವರು ಸೇವೆ ಮಾಡಬೇಕು.
ರಾಜ್ಯದಲ್ಲಿ ಕಳೆದ 4-5 ವರ್ಷಗಳಿಂದ ಭೀಕರ ಬರಗಾಲ ಆವರಿಸಿದ ಪರಿಣಾಮ ಜನ-ಜಾನುವಾರುಗಳು, ವನ್ಯಜೀವಿಗಳು, ಜಲಚರಗಳು ನೀರಿಲ್ಲದೇ ಪರದಾಡುವಂತಾಗಿದೆ. ಇನ್ನು ಕೆಲವು ಗ್ರಾಮೀಣ ಪ್ರದೇಶದಲ್ಲಿ ಸಕಾಲಕ್ಕೆ ಮಳೆ ಆಗದೆ ಬಿತ್ತಿದ ಬೆಳೆ ಕೈ ಸೇರದೆ ಮತ್ತಷ್ಟು ಸಾಲಗಾರರಾಗಿ ಕೆಲವು ರೈತರು ಆತ್ಮ ಹತ್ಯೆಯಂತಹ ಮಾರ್ಗ ಹಿಡಿಯುವಂತಾಗಿದೆ. ಕೆಲವರು ಹತ್ತಾರು ಎಕರೆ ಜಮೀನಿದ್ದರೂ ಕುಡಿಯಲು ನೀರಿಲ್ಲದೇ ಕೈಗೆ ಕೆಲಸವಿಲ್ಲದೇ ಬೇರೆ ರಾಜ್ಯಗಳಿಗೆ ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಇಂತಹ ಗಂಭೀರ ಪರಿಸ್ಥಿತಿಯಲ್ಲಿ ರೈತರ ಹಾಗೂ ಜನ ಸಾಮಾನ್ಯರ ಹಿತ ಕಾಪಾಡುವ ಸಲುವಾಗಿ ಮತ ಹಾಕಿ ಆಯ್ಕೆ ಮಾಡಿ ಕಳಿಸಿದರೆ ಇವರು ಕೇವಲ ತಮ್ಮ ಸ್ವಾರ್ಥಕ್ಕೊಸ್ಕರ ರೆಸಾರ್ಟ್ ರಾಜಕಾರಣ ಮಾಡುತ್ತ ಒಬ್ಬರನ್ನೊಬ್ಬರು ಕೊಂಡು ಕೊಳ್ಳುತ್ತ್ತ ಒಂದು ತಂಡ ದೆಹಲಿ ರೆಸಾರ್ಟ್‌ಗೆ ತೆರಳುವುದು, ಇನ್ನೊಂದು ತಂಡ ಮುಂಬೈ ರೆಸಾರ್ಟ್‌ಗೆ ತೆರಳುವುದು. ಈ ರೀತಿ ಮಾಡುವಂತ ನಮ್ಮ ರಾಜ್ಯದ ಚುನಾಯಿತ ಪ್ರತಿನಿಧಿಗಳು ರೈತರು ಹಾಗೂ ಜನಸಾಮಾನ್ಯರನ್ನು ಹುಚ್ಚರು ಎಂದು ಭಾವಿಸಿದ್ದಾರೆಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಇವರಿಗೆ ಕೇವಲ ಅಧಿಕಾರ, ಕುರ್ಚಿ, ಹಣದ ವ್ಯಾಮೋಹ ಹೆಚ್ಚಾಗಿದೆ ಹೊರತು ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ರೈತರ ಹಾಗೂ ಜನಸಾಮ್ಯಾರ ಪರಿಸ್ಥಿತಿ ಎಲ್ಲಿಗೆ ಬಂದು ತಲುಪಿದೆ ಎಂಬುದು ಅರ್ಥ ಮಾಡಿಕೊಳ್ಳುತ್ತಿಲ್ಲ. ಇಂತಹ ರಾಕ್ಷಸ ಪ್ರವೃತ್ತಿಯುಳ್ಳ ನಾಚಿಕೆ ಮಾನ ಮರ್ಯಾದೆ ಬಿಟ್ಟ ರಾಜಕಾರಣಿಗಳಿಗೆ ರಾಜ್ಯದ ಜನರು ಪ್ರಶ್ನಿಸುವಂತಾಗಬೇಕು. ಇಲ್ಲದಿದ್ದರೆ ಚುನಾವಣೆಗಳಲ್ಲಿ ಹೇಳುವುದು ಒಂದು ಆಯ್ಕೆಯಾದ ನಂತರ ಮಾಡುವುದು ಇನ್ನೊಂದು. ಹೀಗಾದರೆ ರಾಜ್ಯದ ಸ್ಥಿತಿ ಏನಾಗುತ್ತದೆ ಎನ್ನುವುದನ್ನು ಪ್ರಜ್ಞಾವಂತರು ಆಲೋಚಿಸಬೇಕಾಗಿದೆ.
ಇಂಥವರಿಗೆ ಸಂಬಂಧಿಸಿದ ಕ್ಷೇತ್ರಗಳ ಮತದಾರರು ತಮ್ಮ ಕ್ಷೇತ್ರಗಳ ಶಾಸಕರನ್ನು ಪ್ರಶ್ನಿಸುವಂತಾಗಬೇಕು. ಇದೇನು ರಾಜ ಪ್ರಭುತ್ವವಲ್ಲ. ಇದು ಪ್ರಜಾಪ್ರಭುತ್ವ. ಜನರಿಂದ ಆಯ್ಕೆಗೊಂಡಿರುವ ನಾಯಕರು ನಾಡಿನ ಜನತೆಯ ಸೇವಕರೆನ್ನುವುದನ್ನು ಅರ್ಥ ಮಾಡಿಕೊಳ್ಳುವ ಕಾಲ ಬಂದಾಗಿದೆ ಎಂದು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.