ಬಸವನಬಾಗೇವಾಡಿಯಲ್ಲಿ ಸಂಭ್ರಮದ ಕಾರಹುಣ್ಣಿಮೆ
Team Udayavani, Jun 29, 2018, 11:47 AM IST
ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಗುರುವಾರ ಕಾರಹುಣ್ಣಿಮೆಯನ್ನು ರೈತರು ಸಡಗರ
ಸಂಭ್ರಮದಿಂದ ಆಚರಿಸಿದರು. ರೈತರು ಬೆಳಗ್ಗೆ ಎತ್ತುಗಳು ಸೇರಿದಂತೆ ದನಕರುಗಳ ಮೈತೊಳೆದು ವಿವಿಧ ಬಣ್ಣ
ಹಚ್ಚಿ, ವಿವಿಧ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಿದರು. ಸಂಜೆ ಪಟ್ಟಣದ ಗಣಪತಿ ವೃತ್ತ, ಸಂಗೊಳ್ಳಿ
ರಾಯಣ್ಣ ವೃತ್ತ, ತೆಗಲಿ ರಸ್ತೆ, ವಿಜಯಪುರ ರಸ್ತೆ, ಗೌರಿ ಶಂಕರ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಜಮಾಯಿಸಿದ
ರೈತರು ತಮ್ಮ ಎತ್ತುಗಳನ್ನು ಓಡಿಸಿ ಕರಿ ಹರಿದರು. ಎರಡು ಬದಿಗಳಲ್ಲಿ ನಿಂತ ಜನರು ಕೂಗಾಟದ ಮಧ್ಯೆ ಎತ್ತುಗಳು
ರಭಸವಾಗಿ ಇನ್ನೊಂದು ತುದಿಗೆ ತಲುಪಿದವು.
ತೆಲಗಿ ರಸ್ತೆಯಲ್ಲಿನ ಗಣಪತಿ ವೃತ್ತದಲ್ಲಿ ರೈತರು ಭಾರವಾದ ಕಲ್ಲುಗುಂಡು ಎತ್ತುವ ಮೂಲಕ ಈ ವರ್ಷದ ಮಳೆ ಬೆಳೆಯ ಕುರಿತು ಭವಿಷ್ಯ ತಿಳಿದರು. ಅಶೋಕ ಮುಳವಾಡ, ಮಹಾಂತೇಶ ಹಂಜಗಿ, ಗುರಪ್ಪ ತುಂಬಗಿ, ಶಿವಪ್ಪ ದಂಡಿನ, ಮಲ್ಲಪ್ಪ ನಾಗೋಡ, ಚನಬಸು ಮುಳವಾಡ, ಶಿವಪ್ಪ ತುಂಬಗಿ, ಅರುಣ ಬಸರಕೋಡ, ಮಲ್ಲಿಕಾರ್ಜುನ ಹಡಪದ, ಪಂಚಾಕ್ಷರಯ್ಯ ಕಾಳಹಸ್ತೇಶ್ವರಮಠ, ಮಹಾದೇವಪ್ಪ ಹಡಪದ, ದೊಡ್ಡಪ್ಪ ಅವಟಿ ಸೇರಿದಂತೆ ಅನೇಕರು
ಪಾಲ್ಗೊಂಡಿದ್ದರು. ವಿಜಯಪುರ ರಸ್ತೆಯಲ್ಲಿ ಜರುಗಿದ ಕರಿಹರಿಯುವ ಕಾರ್ಯಕ್ರಮದಲ್ಲಿ ಶಿವಪ್ಪ ಈರಕಾರ ಮುತ್ಯಾ, ಈರಯ್ಯ ಹಿರೇಮಠ, ಸತ್ಯಪ್ಪ ಕ್ಯಾಡದ, ರಾಷಪ್ಪ ಖ್ಯಾಡದ, ವಿಜಯ ಗೊಳಸಂಗಿ, ಸೋಮು ಶೆಂಡೆ, ಬಸವರಾಜ ಶೆಂಡೆ, ರಾಜು ಹೆಬ್ಟಾಳ, ಬಸವರಾಜ ಗಬ್ಬೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.