ಬಸ್ ಡಿಪೋ ಉದ್ಘಾಟನೆಗೆ ನೀತಿ ಸಂಹಿತೆ ಅಡ್ಡಿ
Team Udayavani, Mar 22, 2019, 11:04 AM IST
ಇಂಡಿ: ಲೋಕಾರ್ಪಣೆಗೆ ಸಿದ್ಧವಾಗಿದ್ದ ಬಸ್ ಡಿಪೋಗೆ ನೀತಿ ಸಂಹಿತೆ ಬಿಸಿ ತಟ್ಟಿದೆ. ನೀತಿ ಸಂಹಿತೆ ಇರದಿದ್ದರೆ ಈಗಾಗಲೇ ಈ ಬಸ್ ಡಿಪೋ ಕಾರ್ಯಾರಂಭ ಮಾಡುತ್ತಿತ್ತು. ಪಟ್ಟಣದಿಂದ ಹಂಜಗಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ನೂತನ ಬಸ್ ಡಿಪೋ ಉದ್ಘಾಟನೆಗೆ ಸಜ್ಜಾಗಿ ತಿಂಗಳುಗಳೇ ಕಳೆದಿವೆ. ಈ ಬಸ್ ಡಿಪೋ ನಿರ್ಮಾಣ ಮಾಡಬೇಕೆಂಬುದು ತಾಲೂಕಿನ ಜನರ ಬಹು ದಿನಗಳ ಬೇಡಿಕೆಯಾಗಿತ್ತು. ಈ ಹಿಂದೆ 25 ವರ್ಷಗಳ ಹಿಂದೆಯೇ ಪಟ್ಟಣದ ಅಗರಖೇಡ ರಸ್ತೆಯಲ್ಲಿ ಬಸ್ ಡಿಪೋ ನಿರ್ಮಾಣ ಮಾಡಬೇಕು ಎಂದು ಅಂದಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿ ಗಳು ಆಸಕ್ತಿ ತೋರಿದ್ದರು. ಆದರೆ ಅಂದು ಜಾಗ ಒದಗಿಸದೇ ಇರುವುದರಿಂದ ಬಸ್ ಡಿಪೋ ನಿರ್ಮಾಣ ಇದುವರೆಗೂ ಸಾಧ್ಯವಾಗಿರಲಿಲ್ಲ. ಈಗ ಶಾಸಕ ಯಶವಂತ್ರಾಯಗೌಡ ಪಾಟೀಲ ಅವರ ಶ್ರಮದಿಂದ ಉದ್ಘಾಟನೆಗೆ ಸಜ್ಜಾಗಿದೆ.
ಬಸ್ ಡಿಪೋ ನಿರ್ಮಾಣಕ್ಕೆ ಎರಡು ಎಕರೆ ಸರ್ಕಾರಿ ಜಾಗವನ್ನು ಕೆಎಸ್‌ಆರ್‌ಟಿಸಿಗೆ ನೀಡಿದ್ದರ ಪರಿಣಾಮವಾಗಿ ಇಂದು ಬಸ್ ಡಿಪೋ ನಿರ್ಮಾಣವಾಗಿದೆ. ಈಗಾಗಲೆ ನೂತನ ಬಸ್ ಡಿಪೋದಲ್ಲಿ ರ್‍ಯಾಂಪ್, 8 ಸೆಕ್ಯೂರಿಟಿ, 5 ಸಿಬ್ಬಂದಿ,
5 ಮೆಕ್ಯಾನಿಕ್ ಕೋಣೆಗಳ ನಿರ್ಮಾಣ ಕಾರ್ಯ ಮುಗಿದಿದೆ. ಡಿಪೋ ಆವರಣದಲ್ಲಿ ಕಾಂಕ್ರೀಟ್ ಹಾಕಲಾಗಿದೆ. ಬಣ್ಣ ಹಚ್ಚುವ ಕಾಮಗಾರಿ ಮುಗಿದಿದೆ.
ನಗರ ಸಾರಿಗೆ ಚಿಂತನೆ: ಪಟ್ಟಣದ ಮಧ್ಯಭಾಗದಲ್ಲಿರುವ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಹಳೆಯ ಬಸ್ ಡಿಪೋ
ನೂತನ ಬಸ್ ಡಿಪೋಗೆ ಸ್ಥಳಾಂತರಗೊಂಡ ಮೇಲೆ ಹಳೆ ಬಸ್ ಡಿಪೋವನ್ನು ನಗರ ಸಾರಿಗೆ ಬಸ್ ನಿಲ್ದಾಣ ಮಾಡುವ ಉದ್ದೇಶವಿದೆ ಎನ್ನಲಾಗುತ್ತಿದ್ದು, ನಗರ ಸಾರಿಗೆಯಿಂದ ಒಟ್ಟು 10 ಕಿಮೀ ಅಂತರದವರೆಗೆ ನಗರ ಸಾರಿಗೆ ಬಸ್
ಸಾರಿಗೆ ವ್ಯವಸ್ಥೆ ಮಾಡಲು ಚಿಂತನೆ ನಡೆದಿದೆ.
ಪಟ್ಟಣದ ಹಂಜಗಿ ರಸ್ತೆಯಲ್ಲಿರುವ ಬಸ್ ಡಿಪೋ ನಿರ್ಮಾಣದ ಕಾಮಗಾರಿ ಪೂರ್ಣಗೊಂಡಿದೆ. ನೀತಿ ಸಂಹಿತೆ ಇರುವ ಕಾರಣ ಉದ್ಘಾಟನೆ ಮುಂದೂಡಲಾಗಿದೆ. ನೀತಿ ಸಂಹಿತೆ ಮುಗಿದ ಮೇಲೆ ಡಿಪೋ ಉದ್ಘಾಟನೆ ಮಾಡಿ ಅಲ್ಲಿಂದ ಕಾರ್ಯಾರಂಭ ಮಾಡಲಾಗುವುದು.
ವಿ.ಎಲ್. ಹತ್ತಳ್ಳಿ, ಘಟಕ ವ್ಯವಸ್ಥಾಪಕ.
ಡಿಪೋ ಸ್ಥಳಾಂತರವಾದರೆ ನಗರ ಸಾರಿಗೆ ಮಾಡಿ 10 ಕಿಮೀ ಒಳಗಿನ ಹಳ್ಳಿಗಳಿಗೆ ನಿರಂತರ ಬಸ್ ಸೌಲಭ್ಯ
ಒದಗಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಏನೇನು ಸೌಲಭ್ಯಗಳಿವೆಯೋ ಅವೆಲ್ಲ ಸೌಲಭ್ಯಗಳು ತಾಲೂಕಿಗೆ ಒದಗಿಸಬೇಕು.
ಶಿವಲಿಂಗಪ್ಪ ಬಿರಾದಾರ, ಸ್ಥಳೀಯರು.
ಉಮೇಶ ಬಳಬಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.