ಬಿಜೆಪಿ ಅಲೆಗೆ ಕೊಚ್ಚಿ ಹೋಗಲಿದೆ ಕಾಂಗ್ರೆಸ್
Team Udayavani, May 11, 2018, 1:13 PM IST
ತಾಳಿಕೋಟೆ: 25 ವರ್ಷಗಳ ಕಾಂಗ್ರೆಸ್ ದುರಾಡಳಿತಕ್ಕೆ ಬೇಸತ್ತಿರುವ ಜನರು ಬದಲಾವಣೆ ಬಯಸಿದ್ದಾರೆ. ಕ್ಷೇತ್ರದಲ್ಲಿ
ಸೃಷ್ಟಿಯಾಗಿರುವ ಬಿಜೆಪಿ ಸುನಾಮಿ ಅಲೆಗೆ ಕಾಂಗ್ರೆಸ್ ಪಕ್ಷ ಬುಡಸಮೇತ ಕೊಚ್ಚಿ ಹೋಗಲಿದೆ ಎಂದು ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಎಸ್.ಪಾಟೀಲ(ನಡಹಳ್ಳಿ) ಹೇಳಿದರು.
ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಎ.ಎಸ್.ಪಾಟೀಲ(ನಡಹಳ್ಳಿ) ಪ್ರಚಾರಾರ್ಥವಾಗಿ ದಶರಥ್‌ಸಿಂಗ್ ಮನಗೂಳಿ, ದಲಿತ ಮುಖಂಡ ಮುತ್ತಪ್ಪ ಚಮಲಾಪುರ ಅವರ ನೇತೃತ್ವದಲ್ಲಿ ರೋಡ್ ಶೋ ನಂತರ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
25 ವರ್ಷಗಳ ಆಳ್ವಿಕೆ ನಡೆಸಿರುವ ಕಾಂಗ್ರೆಸ್ ಶಾಸಕ ಸಿ.ಎಸ್. ನಾಡಗೌಡ ಅವರ ಅಭಿವೃದ್ಧಿ ಕೊಡುಗೆ ಶೂನ್ಯವಾಗಿದೆ. ಕ್ಷೇತ್ರದ ಪ್ರತಿ ಗ್ರಾಮ, ಪಟ್ಟಣಗಳಲ್ಲಿ ಸಂಚರಿಸಿದರೆ ನೆಲದಿಂದ ದೂಳೆದ್ದು ಮೈಗೆ ಅಂಟಿಕೊಳ್ಳುತ್ತದೆ ಜನರಿಗೆ ಮುಖ್ಯವಾಗಿ ಒದಗಿಸಬೇಕಾದ ಮೂಲಸೌಕರ್ಯ ಒದಗಿಸಲು ಅವರಿಂದ ಆಗಿಲ್ಲ. ಭ್ರಷ್ಟಾಚಾರಕ್ಕೆ ಇನ್ನೊಂದು ಮುಖವೇ ನಾಡಗೌಡರು ಎಂದು ಆರೋಪಿಸಿದರು.
ತಾಳಿಕೋಟೆ ಮತ್ತು ಮುದ್ದೇಬಿಹಾಳದಲ್ಲಿ ಬಡವರಿಗೆ ಮನೆ ನೀಡುತ್ತೇವೆ ಎಂದು ಪ್ರತಿ ಬಡಕುಟುಂಬಸ್ತರಿಂದ 50 ಸಾವಿರ ರೂ. ಹಣ ಲೂಟಿ ಹೊಡೆದಿದ್ದಾರೆ. ಹಣ ಪಡೆದು 1 ವರ್ಷ ಗತಿಸಿದರೂ ಮನೆ ಹಂಚಿಕೆ ಮಾಡ್ಲಿ. ಇದರ ಅರ್ಥ ಚುನಾವಣೆಗೆ ಅಕ್ರಮ ಹಣ ಸಂಗ್ರಹಣೆ ದಾರಿ ಎಂಬುದು ಗೋಚರಿಸುತ್ತದೆ ಎಂದು ಆರೋಪಿಸಿದರು.
ಬಡತನದಲ್ಲಿಯೇ ಹುಟ್ಟಿ ಬೆಳೆದ ನಾನು ಚಟ್ನಿ ರೊಟ್ಟಿ ತಿಂದು ಶಿಕ್ಷಣ ಪಡೆದಿದ್ದೇನೆ. ಹೀಗಾಗಿ ಬಡವರಿಗಾಗಿ ದಿನದ 24 ಗಂಟೆಯೂ ನನ್ನ ಮನೆಬಾಗಿಲು ತೆರೆದೇ ಇರುತ್ತದೆ. ಬಡವರ ಸೇವೆಯೇ ದೇವರ ಸೇವೆ ಎಂದು ನಂಬಿದವನಾಗಿದ್ದೇನೆ ಎಂದು ಹೇಳಿದರು.
ಅಂಬೇಡ್ಕರ್ ಸರ್ಕಲ್‌ದಿಂದ ಪ್ರಾರಂಭವಾದ ರೋಡ್ ಶೋ ಅಂಬಾಭವಾನಿ ಮಂದಿರ ರಸ್ತೆ, ಕತ್ರಿ ಬಜಾರ, ರಾಜವಾಡೆ ತಲುಪಿ ಮರಳಿ ಅದೇ ಮಾರ್ಗವಾಗಿ ವಿಠ್ಠಲ ಮಂದಿರ ರಸ್ತೆ, ಮಹಾರಾಣಾಪ್ರತಾಪ ಸರ್ಕಲ್ ಮೂಲಕ ವಿಜಯಪುರ ಸರ್ಕಲ್‌ಕ್ಕೆ ತಲುಪಿತು. ಸೈದುಸಾಬ್ ನಮಾಜಕಟ್ಟಿ, ನಿರಂಜನಶಾ ಮಕಾಂದಾರ, ವಿಶ್ವನಾಥ ಬಬಲೇಶ್ವರ, ಸುರೇಶ ಹಜೇರಿ, ಮಂಜು ಶೆಟ್ಟಿ, ರಾಘವೇಂದ್ರ ಚವ್ಹಾಣ, ದತ್ತು ಹೆಬಸೂರ, ಪ್ರಭು ಬಿಳೇಭಾವಿ, ಕಾಶಿನಾಥ ಮುರಾಳ, ಈಶ್ವರ ಹೂಗಾರ, ಪ್ರಕಾಶ ಹಜೇರಿ, ಬಂಡು ದಾಯಪುಲೆ, ಪ್ರಕಾಶ ಸಾಸಾಬಾಳ, ಮಾನಸಿಂಗ್ ಕೊಕಟನೂರ, ವಿಠuಲ ಮೋಹಿತೆ, ಮುನ್ನಾ ಠಾಕೂರ, ಸಂಗಮೇಶ ಬಳಿಗಾರ, ಮಂಜು ಬಡಿಗೇರ ಒಳಗೊಂಡು ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಮುದ್ದೇಬಿಹಾಳದಲ್ಲೂನಡಹಳ್ಳಿ ರೋಡ್ ಶೋ
ಮುದ್ದೇಬಿಹಾಳ: ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಪಟ್ಟಣದಲ್ಲಿ ಗುರುವಾರ ರೋಡ್ ಶೋ ನಡೆಸಿ ಮತಯಾಚಿಸಿದರು. ಬನಶಂಕರಿನಗರದಿಂದ ಇಂದಿರಾ ವೃತ್ತ, ಮುಖ್ಯರಸ್ತೆ, ಬಸವೇಶ್ವರ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ತಮ್ಮ ದಾಸೋಹ ನಿಲಯದವರೆಗೆ ತೆರೆದ ವಾಹನದ ಮೂಲಕ ತೆರಳಿ ಮತಯಾಚಿಸಿದರು. ರೋಡ್ ಶೋ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಕ್ಷೇತ್ರದಲ್ಲಿ ತಮಗೆ ಹೆಚ್ಚಿನ ಬೆಂಬಲ ವ್ಯಕ್ತಬಾಗಿದೆ.
ಅಂದಾಜು 50 ಸಾವಿರ ಮತಗಳ ಅಂತರದಿಂದ ಗೆಲ್ಲುವ ವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಮತಕ್ಷೇತ್ರದ ಎಲ್ಲ ವ್ಯಾಪಾರಸ್ಥರು ನನ್ನನ್ನು ಬೆಂಬಲಿಸುವ ಭರವಸೆ ನೀಡಿದ್ದಾರೆ. ನನ್ನ ಬಗ್ಗೆ ವ್ಯಾಪಾರಸ್ಥರಲ್ಲಿ ಕಾಂಗ್ರೆಸ್ ಅಪಪ್ರಚಾರದ ಮೂಲಕ ಮೂಡಿಸಿದ್ದ ತಪ್ಪು ಕಲ್ಪನೆ ಹೋಗಲಾಡಿಸಿದ್ದೇನೆ. ಕಾಂಗ್ರೆಸ್‌ನವರು ತಮ್ಮ ಲಾಭಕ್ಕಾಗಿ ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದರ ಕುರಿತು ಮನವರಿಕೆ ಮಾಡಿಕೊಟ್ಟಿದ್ದೇನೆ. ವ್ಯಾಪಾರಸ್ಥರ ಬೆಂಬಲ ನನಗೆ ಹೆಚ್ಚಿನ ಶಕ್ತಿ ನೀಡಿದಂತಾಗಿದೆ. 25 ವರ್ಷ ಅಧಿಕಾರದ ಅವ ಧಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ನಾಡಗೌಡರು ಮತಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ. ಈ ಬಾರಿ ಜನರು ಬದಲಾವಣೆ ಬಯಸಿದ್ದು, ಬದಲಾವಣೆ ನನ್ನಿಂದಲೇ ಪ್ರಾರಂಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.