ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಮೊಸಳೆ ಸೆರೆ
Team Udayavani, Jul 12, 2021, 8:29 PM IST
ಮುದ್ದೇಬಿಹಾಳ: ಹಡಲಗೇರಿ ಗ್ರಾಮದ ಕೆರೆಯಲ್ಲಿ ಅಡಗಿಕೊಂಡು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಾರ್ಗದರ್ಶನದಲ್ಲಿ ಮೊಸಳೆ ಪರಿಣಿತರು ರವಿವಾರ ಸೆರೆ ಹಿಡಿದಿದ್ದಾರೆ. ಕೆಲ ದಿನಗಳ ಹಿಂದೆ ಗ್ರಾಮಸ್ಥರು ಕೆರೆಯಲ್ಲಿ ಮೊಸಳೆ ಸೇರಿದ್ದನ್ನು ಕಂಡಿದ್ದರು.
ಇದನ್ನು ಹಿಡಿಯಲು ಅಂದಿನಿಂದಲೇ ಬಲೆ ಬೀಸಲಾಗಿತ್ತು. ಮೊಸಳೆ ಇದೆ ಎನ್ನುವ ಎಚ್ಚರಿಕೆ ಫಲಕ ಗ್ರಾಪಂನವರು ಕೆರೆ ಬಳಿ ಅಳವಡಿಸಿದ್ದರು. ಕೆರೆಯಲ್ಲಿ ನೀರು ಕಡಿಮೆ ಆಗಿರುವುದನ್ನು ಅರಿತು ತಜ್ಞರನ್ನು ಕರೆಸಲಾಗಿತ್ತು. ಮೊದಲೇ ಹಾಕಿದ್ದ ಬಲೆಗೆ ಮೊಸಳೆ ಸಿಕ್ಕಿದ್ದನ್ನು ಅರಿತು ತೆಪ್ಪದ ನೆರವಿನಲ್ಲಿ ಅದರ ಬಳಿ ತೆರಳಿ ಹರಸಾಹಸದಿಂದ ಮೊಸಳೆ ಕಟ್ಟಿ ಹಾಕಿ ದಂಡೆಗೆ ತರಲಾಯಿತು.
ಮೊಸಳೆ ಹಿಡಿಯುವ ಪರಿಣಿತರಾದ ನಾಗೇಶ ಮೋಪಗಾರ, ಸುರೇಶ ಮೋಪಗಾರ, ಶಿವು ಮೋಪಗಾರ, ಮಂಜು, ಸುಭಾಸ, ಯಮನೂರಿ, ಮೂರ್ತಿ, ಮುದುಕು ಕಿರಶ್ಯಾಳ, ಎಂ. ಮಂಜು, ಶ್ರೀಶೈಲ ಮನಗೂರ, ಲೋಹಿತ ಮುದ್ದೇಬಿಹಾಳ, ಹೃತಿಕ ಮುದ್ದೇಬಿಹಾಳ ಇತರರು ತಂಡದ ಮುಖಂಡ ಮೌನೇಶ ಮೋಪಗಾರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದರು. ಮುದ್ದೇಬಿಹಾಳ ಬಿಜೆಪಿ ಧುರೀಣ ಪರಶುರಾಮ ನಾಲತವಾಡ ಸುದ್ದಿಗಾರರೊಂದಿಗೆ ಮಾತನಾಡಿ, ಮೊಸಳೆ ಕಂಡು ಬಂದ ದಿನದಿಂದ ಬಲೆ ಹಾಕಿ ಸೆರೆ ಹಿಡಿಯಲು ಹಗಲು-ರಾತ್ರಿ ಕಾವಲು ಕಾಯಲಾಗುತ್ತಿತ್ತು.
ಮೊಸಳೆ ಬಲೆಗೆ ಬಿದ್ದಿದ್ದನ್ನು ತಿಳಿದು ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿದೆ ಎಂದರು. ಎಆರ್‌ಎಫ್‌ಒ ಮಲ್ಲಪ್ಪ ತೇಲಿ ಮಾತನಾಡಿ, ಆಲಮಟ್ಟಿ ಜಲಾಶಯದ ಕೃಷ್ಣಾ ನದಿ ಹಿನ್ನೀರಿನಲ್ಲಿ ಮೊಸಳೆಯನ್ನು ಸುರಕ್ಷಿತವಾಗಿ ಬಿಡಲಾಗುತ್ತದೆ. ಮೊಸಳೆ ಹಿಡಿಯಲು ಧೈರ್ಯದಿಂದ ಮುಂದೆ ಬಂದ ಪರಿಣಿತರ ತಂಡವನ್ನು ಅರಣ್ಯ ಇಲಾಖೆ ವತಿಯಿಂದ ಶ್ಲಾಘಿಸುವುದಾಗಿ ತಿಳಿಸಿದರು. ಪಿಡಿಒ ಶೋಭಾ ಮುದಗಲ್ಲ ಮಾತನಾಡಿ, ಪರಶುರಾಮ ನಾಲತವಾಡ ಪ್ರಯತ್ನದಿಂದ ಬಂಧುಗಳು ಮೊಸಳೆ ಹಿಡಿಯುವಲ್ಲಿ ಪಳಗಿದ್ದರಿಂದ ಈ ಕೆಲಸ ಯಶಸ್ವಿಯಾಗಿದೆ.
ಇದಕ್ಕಾಗಿ ಪಂಚಾಯಿತಿ ವತಿಯಿಂದ ಅವರನ್ನು ಅಭಿನಂದಿಸುತ್ತೇವೆ ಎಂದರು. ಕಾರ್ಯಾಚರಣೆ ನಂತರ ಮೊಸಳೆ ಹಿಡಿದ ತಂಡವನ್ನು ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅರಣ್ಯ ರಕ್ಷಕ ಈಶ್ವರ ಹಿರೇಮಠ, ಗ್ರಾಮಸ್ಥರಾದ ವಿಠuಲ ಹರಿಂದ್ರಾಳ, ಭೀಮಣ್ಣ ಹರಿಂದ್ರಾಳ, ಮಾಳಪ್ಪ ಹರಿಂದ್ರಾಳ, ಚಿನ್ನಪ್ಪಗೌಡ ನಾಡಗೌಡ ಸೇರಿದಂತೆ ಗ್ರಾಪಂ ಸದಸ್ಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.