![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jan 22, 2021, 5:46 PM IST
ಚಡಚಣ: ವಿವಿಧ ಕಾಮಗಾರಿ ಉದ್ಘಾಟನೆ ಹಾಗೂ ಶಂಕು ಸ್ಥಾಪನೆಗೆ ಪ್ರಥಮ ಬಾರಿಗೆ ಆಗಮಿಸಿದ ಡಿಸಿಎಂ ಗೋವಿಂದ ಕಾರಜೋಳ ಮೇಲೆ ಕ್ಷೇತ್ರದ ಜನತೆ ಅಪಾರ ನಿರೀಕ್ಷೆ ಇಟ್ಟಿದ್ದರು. ಆದರೆ ಅದೆಲ್ಲವೂ ಹುಸಿಯಾಗಿದೆ ಎಂದು ಶಾಸಕ ಡಾ| ದೇವಾನಂದ ಚವ್ಹಾಣ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಅಧಿಕಾರವಧಿಯಲ್ಲಿ ಪ್ರವಾಸಿ ಮಂದಿರ ನಿರ್ಮಾಣವಾಗಿದೆ. ಇದೇ ವೇಳೆ ಚಡಚಣ-ಹತ್ತಳ್ಳಿ-ಹಾವಿನಾಳ ಹಾಗೂ ಲೋಣಿ ರಸ್ತೆ ಅನುಷ್ಠಾನಗೊಳಿಸಲಾಗಿತ್ತು. ಹತ್ತಳ್ಳಿ ಬೋರಿ ಹಳ್ಳಕ್ಕೆ ಬ್ರಿಡ್ಜ್ ಕಂಬಾಂದಾರ ನಿರ್ಮಾಣ ಕಾಮಗಾರಿ ಹಿಂದಿನ ಸರ್ಕಾರದಲ್ಲಿ ಅನುಮೋದನೆಗೊಂಡಿತ್ತು. ಅಲ್ಲದೇ ನನೆಗುದಿಗೆ ಬಿದ್ದ ಉಮರಾಣಿ ಬ್ಯಾರೇಜ್ ಕಾಮಗಾರಿಗೆ ಸಮ್ಮಶ್ರ ಸರ್ಕಾರದಲ್ಲಿ ಚಾಲನೆ ನೀಡಲಾಗಿದೆ ಎಂದ ಅವರು, ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಾದರೂ ಯಾವುವು? ಎಂದು ಪ್ರಶ್ನಿಸಿದರು.
ಕೇವಲ ತೋರಿಕೆಗೋಸ್ಕರ ಡಿಸಿಎಂ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಣಗಿ ಜಂಟಿಯಾಗಿ ವಿವಿಧ ಕಾಮಗಾರಿ ಭೂಮಿ ಪೂಜೆ, ಲೋಕಾರ್ಪಣೆ,
ಉದ್ಘಾಟನೆ ಮಂಗಳವಾರ ನೆರವೇರಿಸಿದ್ದಾರೆ.
ನಾಗಠಾಣ ಕ್ಷೇತ್ರದ ಜನತೆ ನೂತನ ತಾಲೂಕಿಗೆ ಅಪಾರ ಪ್ರಮಾಣದ ಅನುದಾನದ ಘೋಷಣೆ, ಬೃಹತ್ ಪ್ರಮಾಣದ ಅಭಿವೃದ್ಧಿ ಕಾರ್ಯ ಪ್ರಾರಂಭವಾಗುವ ನಿರೀಕ್ಷೆ, ನೂತನ ತಾಲೂಕಿಗೆ ಬೇಕಾಗುವ ಬಸ್ ಡಿಪೋ, ಅಗ್ನಿ ಶಾಮಕ ಕಚೇರಿ, ಮಿನಿ ವಿಧಾನಸೌಧ, ಕುಡಿವ ನೀರಿನ ಸಮಸ್ಯೆ, ನನೆಗುದಿಗೆ ಬಿದ್ದ ಪಟ್ಟಣದ ಪ್ರಮುಖ ರಸ್ತೆ ಕಾಮಗಾರಿಗೆ ಚಾಲನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಘೋಷಣೆಯಾಗುತ್ತವೆ ಎಂದುಕೊಂಡಿದ್ದ ಜನತೆ ಹಾಗೂ ವೈಯಕ್ತಿಕವಾಗಿ ನನಗೂ ನಿರಾಸೆ ತಂದಿದೆ ಎಂದರು. ಬಿಜೆಪಿ ಶಾಸಕರಿರುವ ಕಡೆ ಅನುದಾನ ಇರುತ್ತದೆ. ಆದರೆ ನಾಗಠಾಣ ಕ್ಷೇತ್ರಕ್ಕೆ ಕೇಳಿದರೆ ಕೊರೊನಾ- ಪ್ರವಾಹ ನೆಪವಿದೆ ಎಂದು ವ್ಯಂಗ್ಯವಾಡಿದರು.
ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ
Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ
Muddebihal: ಮದವೇರಿದ್ದ ಎಮ್ಮೆ ಹಿಡಿಯಲು ಒಂದೂವರೆ ಗಂಟೆ ಕಾರ್ಯಾಚರಣೆ !
Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
Vijayapura: ರವಿ ಮೇಲಿನಕೇರಿ ಕೊ*ಲೆ ಸೇಡಿಗೆ ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಹ*ತ್ಯೆ?
You seem to have an Ad Blocker on.
To continue reading, please turn it off or whitelist Udayavani.