ನಿಡಗುಂದಿ ತಾಲೂಕಿಗೆ ಸೇರಿಸಲು ಯಲಗೂರು ಭಾಗದ ಗ್ರಾಮಸ್ಥರ ಆಗ್ರಹ
Team Udayavani, Sep 14, 2017, 4:03 PM IST
ವಿಜಯಪುರ: ಪ್ರಸ್ತುತ ಮುದ್ದೇಬಿಹಾಳ ತಾಲೂಕ ಕೇಂದ್ರದಿಂದ ಸುಮಾರು 30 ಕಿ.ಮೀ. ದೂರವಿರುವ ತಮ್ಮ ಗ್ರಾಮಗಳನ್ನು ನೂತನ ತಾಲೂಕ ಕೇಂದ್ರ ನಿಡಗುಂದಿಗೆ ಸೇರಿಸಬೇಕು ಎಂದು ಆಗ್ರಹಿಸಿ ಯಲಗೂರ, ಕಾಶಿನಕುಂಟಿ, ಮಸೂತಿ, ಬೂದಿಹಾಳ, ವಡವಡಗಿ ಭಾಗದ ಗ್ರಾಮಸ್ಥರ ನಿಯೋಗ ಜಿಲ್ಲಾಡಳಿತವನ್ನು ಆಗ್ರಹಿಸಿತು.
ಮುಖಂಡರಾದ ಗೋಪಾಲ ಗದ್ದನಕೇರಿ ಮಾತನಾಡಿ, ವಾಸುದೇವ ಸಮಿತಿ, ಪಿ.ಎಂ. ಹುಂಡೇಕಾರ ಸಮಿತಿ, ಪಿ.ಸಿ.ಗದ್ದಿಗೌಡರ ಸಮಿತಿ, ಎಂ.ಬಿ. ಪ್ರಕಾಶ ಸಮಿತಿ ಸಮಗ್ರ ಗ್ರಾಮಗಳ ಅಂತರ ಮತ್ತು ಅನಾನುಕೂಲತೆ ಮಾನದಂಡದ ಮೇಲೆ ಈ ಗ್ರಾಮಗಳನ್ನು ನಿಯೋಜಿತ ನಿಡಗುಂದಿ ತಾಲೂಕಿನಲ್ಲಿ ಕೂಡಿಸಿ ಆ ಪ್ರಕಾರ ಸರಕಾರಕ್ಕೆ ವರದಿ ಸಲ್ಲಿಸಿದೆ. ಯಲಗೂರು, ಕಾಶಿನಕುಂಟಿ, ಮಸೂತಿ,ಬೂದಿಹಾಳ, ವಡವಡಗಿ ಭಾಗದ ಗ್ರಾಮಗಳು ಭೌಗೋಳಿಕವಾಗಿ ಮುದ್ದೇಬಿಹಾಳ ತಾಲೂಕ ಕೇಂದ್ರದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಕಾರಣ ಈ ಭಾಗದ ಹಳ್ಳಿಗಳನ್ನು ಘೋಷಿತ ನೂತನ ನಿಡಗುಂದಿ ತಾಲೂಕಿಗೆ ಸೇರಿಸುವಂತೆ ಆಗ್ರಹಿಸಿದರು.
ಯಲಗೂರ ಗ್ರಾಪಂ ವ್ಯಾಪ್ತಿಯ ಹಳ್ಳಿಗಳು ಹಾಗೂ ಅದರ ಸುತ್ತಲಿನ ಗ್ರಾಮಗಳ ಜನರು ಸರ್ಕಾರಿ ಕೆಲಸಗಳಿಗೆ ಮುದ್ದೇಬಿಹಾಳ ತಾಲೂಕಿಗೆ ಅಲೆಯಬೇಕು. ಇದರಿಂದ ಅನಗತ್ಯವಾಗಿ ದೂರದ ಗ್ರಾಮ ಪಂಚಾಯತ್ಗೆ ಹೋಗುವುದು ಕಷ್ಟಸಾಧ್ಯವಾಗುತ್ತದೆ. ಮತ್ತೂಂದೆಡೆ ನಿಯೋಜಿತ ನಿಡಗುಂದಿ ತಾಲೂಕಿನ 2-3 ಕಿ.ಮೀ. ದೂರದಲ್ಲಿದ್ದು, ನಿತ್ಯದ ಎಲ್ಲ ವಹಿವಾಟಿಗೆ ನಿಡಗುಂದಿ ಪಟ್ಟಣವನ್ನೇ ಅವಲಂಬಿಸಿದ್ದು ನಿಯೋಜಿತ ನೂತನ ತಾಲೂಕ ಕೇಂದ್ರಕ್ಕೆ ಈ ಗ್ರಾಮಗಳನ್ನು ಸೇರಿಸಬೇಕು ಎಂದು ಆಗ್ರಹಿಸಿದರು.
ಯಲಗೂರು ಗ್ರಾಪಂ ಈಗಾಗಲೇ ಗ್ರಾಮ ಸಭೆಯಲ್ಲಿ ಠರಾವು ಪಾಸು ಮಾಡಿ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಭಾಗದ ಹಳ್ಳಿಗಳ ಸಿವ್ಹಿಲ್ ವ್ಯಾಜ್ಯಗಳು ಮುದ್ದೇಬಿಹಾಳ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಮತ್ತು ಅವಕ್ಕೆ ಪೂರಕವಾಗಿ ಅಪರಾಧಿ ಕ ಪ್ರಕರಣಗಳು ದಾಖಲಾಗುತ್ತಿದ್ದು, ಬಸವನಬಾಗೇವಾಡಿ ತಾಲೂಕು ನ್ಯಾಯಾಲಯದ ವ್ಯಾಪ್ತಿಯಲ್ಲಿ ಬರುತ್ತವೆ. ಅದರಂತೆ ಈ ಗ್ರಾಮಗಳ ಅಪರಾಧ ಪ್ರಕರಣಗಳು ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗುವುದರಿಂದ ಮುದ್ದೇಬಿಹಾಳ ಹಾಗೂ ಬಸವನಬಾಗೇವಾಡಿ ಎರಡು ತಾಲೂಕುಗಳಿಗೆ ಅಲೆದಾಡುವದರಿಂದ ಅಡಚಣೆ ಉಂಟಾಗುತ್ತಿದೆ ಎಂದರು.
ಸಿದ್ದಪ್ಪ ಗೌಡರ ಮಾತನಾಡಿ, ಯಲಗೂರ ಗ್ರಾಪಂ ವ್ಯಾಪ್ತಿಯ ಹಲವು ಹಳ್ಳಿಗಳು ನಿಡಗುಂದಿಗೆ ಹೊಂದಿಕೊಂಡಿದ್ದು, ಶೇ.
20ರಷ್ಟು ಜಮೀನು ನಿಡಗುಂದಿ ಹೋಬಳಿಯಲ್ಲಿವೆ. ಅದರಂತೆ ನಿಡಗುಂದಿಯ ಶೇ. 20ರಷ್ಟು ಜಮೀನುಗಳು ಯಲಗೂರ ಗ್ರಾಪಂ ವ್ಯಾಪ್ತಿಯಲ್ಲಿ ಬರುವುದರಿಂದ ಸಮಗ್ರ ನಾಗರಿಕರಿಗೆ ಎರಡು ಕಡೆ ತಮ್ಮ ಕಂದಾಯ ದಾಖಲಾತಿಗಳು ಮತ್ತು ಇತರ ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ತೊಂದರೆ ಅನುಭವಿಸಬೇಕಾಗಿದೆ ಎಂದರು. ಬಸವರಾಜ ಕುಂಬಾರ, ಬಸವರಾಜ ಕಂದಗನೂರ, ಬಸವರಾಜ ಸೀತಿಮನಿ, ಸೋಮನಗೌಡ ಬಿರಾದಾರ, ಎಂ.ಕೆ. ಚಿನ್ನಿಗಾವಿ, ಎ.ಎಸ್. ದಂಗಿ, ಎಂ.ಡಿ. ಕಾಮನಕೇರಿ, ಲಕ್ಷ್ಮಣಗೌಡ ಪಾಟೀಲ, ಭೀಮಪ್ಪ ಪೂಜಾರಿ, ಬಸವರಾಜ ಗಣಿ, ಮಹಾಂತೇಶ ಡೆಂಗಿ, ರಾಮಣ್ಣ ಗೌಡರ, ರಾಮಣ್ಣ ಪೂಜಾರಿ, ಶರೀಫ ವಾಲೀಕಾರ, ಹುಸೇನಸಾಬ ನಂದನೂರ, ವೈ.ಎಸ್. ಜಟಗಿ, ಚನ್ನಬಸು ಮಜ್ಜಗಿ, ಸಿದ್ದಪ್ಪ ವಾಲೀಕಾರ, ವೈ.ವೈ. ಪಾಟೀಲ, ಆರ್.ವೈ. ಗೌಡರ, ವಿ.ಎಂ.ಅಮ್ಮತಗೌಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Saira Banu: ಎ.ಆರ್.ರೆಹಮಾನ್ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ
Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ
Maharashtra; ಇನ್ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್ ಇದ್ರು ಸಿಕ್ಕಿದ್ದು ಕೇವಲ 155 ಮತ!!
UV Fusion: ನಿಸ್ವಾರ್ಥ ಜೀವ
Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.