ಅವೈಜ್ಞಾನಿಕ ಫಾಗಿಂಗ್ ಭೀತಿ
•ಅಸ್ತಮಾ ರೋಗಿಗಳಿಗೆ ಕೆಮ್ಮು ಉಲ್ಬಣ •ಮಕ್ಕಳಲ್ಲಿ ಅಲರ್ಜಿಯಂತಹ ಸಮಸ್ಯೆ ಸಾಧ್ಯತೆ
Team Udayavani, Aug 20, 2019, 4:20 PM IST
ನಿಡಗುಂದಿ: ಕಳೆದ ಹಲವಾರು ದಿನಗಳಿಂದ ನೆರೆ ಪೀಡಿತ ಗ್ರಾಮಗಳಲ್ಲಿ ಸ್ಥಳೀಯ ಸಂಸ್ಥೆಗಳು ಮಲೇರಿಯಾ, ಡೆಂಘೀಯಂತಹ ಕಾಯಿಲೆಗಳ ನಿಯಂತ್ರಣಕ್ಕಾಗಿ ಮಾಡುತ್ತಿರುವ ಫಾಗಿಂಗ್ ಸಾರ್ವಜನಿಕರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆಯೇ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ.
ನಗರ, ಪಟ್ಟಣ ಸೇರಿದಂತೆ ಗ್ರಾಮಗಳ ಪ್ರದೇಶದಲ್ಲಿ ಫಾಗಿಂಗ್ ಮೂಲಕ ಸೊಳ್ಳೆ ನಿಯಂತ್ರಣ ಮಾಡಬೇಕೆನ್ನುವ ಉದ್ದೇಶವನ್ನು ಹೊಂದಿರಲಾಗುತ್ತದೆ. ಅದರಂತೆ ನೆರೆ ಪ್ರದೇಶದ ಬಹುತೇಕ ಕಡೆ ಫಾಗಿಂಗ್ ಮಾಡುವ ಮೂಲಕ ಸೊಳ್ಳೆ ನಿಯಂತ್ರಣ ನಡೆಸಲಾಗುತ್ತಿದೆ. ಪ್ರತಿನಿತ್ಯ ಎರಡು ಬಾರಿ ಸಾಂಕ್ರಾಮಿಕ ರೋಗ ತಡೆಗೆ ಫಾಗಿಂಗ್ ಮಾಡಲಾಗುತ್ತಿದೆ. ಆದರೆ ಅವೈಜ್ಞಾನಿಕವಾಗಿ ಫಾಗಿಂಗ್ ಕಾರ್ಯ ನಡೆದರೆ ಸಾರ್ವಜನಿಕರಿಗೆ ತೊಂದರೆ ಕಟ್ಟಿಟ್ಟ ಬುತ್ತಿಯಾಗಲಿದೆ.
ಬಹುತೇಕ ಸ್ಥಳೀಯ ಸಂಸ್ಥೆಗಳಿಂದ ನಡೆಸಲ್ಪಡುವ ಈ ಫಾಗಿಂಗ್ ಅವೈಜ್ಞಾನಿಕವಾಗಿದ್ದರೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹಲವು ರಾಸಾಯನಿಕ ಅಂಶಗಳನ್ನು ಬಳಸಿ ನಡೆಸುವ ಫಾಗಿಂಗ್ ಜನರ ಅನಾರೋಗ್ಯಕ್ಕೆ ಕಾರಣವಾಗಲಿದೆ. ಅಸ್ತಮಾ ಕಾಯಿಲೆ ಹೊಂದಿರುವವರಿಗೆ ಅತಿ ಬೇಗನೆ ಈ ಫಾಗಿಂಗ್ ತಕ್ಷಣ ಪರಿಣಾಮ ಬೀರಲಿದೆ, ಜೊತೆಗೆ ಕೆಮ್ಮು ಉಲ್ಬಣಗೊಳ್ಳುತ್ತದೆ. ಮಕ್ಕಳಲ್ಲಿ ಅಲರ್ಜಿಯಂತಹ ಸಮಸ್ಯೆಗಳು ಕಂಡು ಬರುತ್ತವೆ ಎನ್ನುತ್ತವೆ ವೈದ್ಯ ಮೂಲಗಳು.
ನಿಂತ ನೀರಲ್ಲಿ ಗೂಡು ಕಟ್ಟುವ ಲಾರ್ವಾ: ಡೆಂಘೀ, ಚಿಕೂನ್ ಗುನ್ಯಾ, ಮಲೇರಿಯಾ ಹರಡುವಂತಹ ಸೊಳ್ಳೆಗಳು ಶುದ್ಧ, ಅಶುದ್ಧ ನೀರಿನಲ್ಲಿ ಗೂಡು ಕಟ್ಟುತ್ತವೆ. ಗೂಡಿನಿಂದ ಎರಡನೇ ದಿನಕ್ಕೆ ಸೊಳ್ಳೆಯಾಗಿ ಹೊರ ಬರುತ್ತದೆ. ಕನಿಷ್ಠ ಒಂದು ವಾರದವರೆಗೂ ಸೊಳ್ಳೆಗಳು ಆಯುಷ್ಯ ಹೊಂದಿರುತ್ತವೆ.
ಕಳೆದೊಂದು ವಾರದಿಂದ ಪ್ರವಾಹ ಪೀಡಿತರ ಪ್ರದೇಶದಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಿದಂತಾಗಿದೆ. ಕಳೆದ ಹಲವಾರು ದಿನಗಳಿಂದ ಮನೆಯನ್ನು ಆಕ್ರಮಿಸಿದ ಪ್ರವಾಹದ ನೀರು ಜನರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಲು ಸಾಧ್ಯತೆ ಇದೆ. ಇಂತಹ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ನಿಗಾವಹಿಸಿ ಕಾರ್ಯ ನಡೆಸಬೇಕಿದೆ.
ಗಬ್ಬೆದ್ದು ನಾರುವ ಪ್ರವಾಹ ಪೀಡಿತ ಪ್ರದೇಶ: ಕಳೆದೆರಡು ದಿನಗಳಿಂದ ಪ್ರವಾಹ ಕಡಿಮೆಯಾಗಿ ಮೊದಲಿನ ಸ್ಥಿತಿಗೆ ಬರಲು ಹೆಜ್ಜೆ ಹಾಕುತ್ತಿದೆ. ಬಹುತೇಕ ಜಲಾವೃತವಾದ ಮನೆಗಳಲ್ಲಿ ನೀರು ಸರಿದಿದೆ. ಆದರೆ, ಹಲವಾರು ದಿನಗಳಿಂದ ನಿಂತ ನೀರಿನಲ್ಲಿ ಹಲವಾರು ಕೆಟ್ಟ ಅಂಶಗಳನ್ನು ಬಿಟ್ಟು ಹೋಗಿರುತ್ತದೆ. ಗ್ರಾಮದ ಕೆಲ ಪ್ರದೇಶ ಜಲಾವೃತದಿಂದ ಇಳಿಮುಖವಾಗಿ ನೀರು ಸರಿದು ಆ ಪ್ರದೇಶ ಗಬ್ಬೆದ್ದು ನಾರುತ್ತಿವೆ.
ವಾಸನೆ ಇಡಿ ಊರನ್ನೆ ಆವರಿಸಿದ್ದು ಜನತೆ ಅನಾರೋಗ್ಯಕ್ಕೆ ತುತ್ತಾಗುವ ಮೊದಲೇ ಸ್ಥಳೀಯ ಸಂಸ್ಥೆಗಳು ಸ್ವಚ್ಛತಾ ಕಾರ್ಯಕ್ಕೆ ಮುಂದಾಗಲು ಸೂಕ್ತ ನಿರ್ದೆಶನ ನೀಡಬೇಕು. ನೆರೆ ಪೀಡಿತ ಕೆಲ ಗ್ರಾಮಗಳಲ್ಲಿ ಮೊದಲಿನ ಪ್ರದೇಶ ಬಿಟ್ಟು ಬೇರೆಡೆ ಸ್ಥಳಾವಕಾಶ ನೀಡಿ ಎನ್ನುವ ಬೇಡಿಕೆಯೇ ಹೆಚ್ಚಾಗಿದೆ. ಹಿರಿಯ ಅಧಿಕಾರಿಗಳೆಲ್ಲ ಸುತ್ತಲಿನ ಗ್ರಾಮಗಳಲ್ಲಿ ಸೂಕ್ತ ಜಾಗೆಗಾಗಿ ಹುಡುಕಾಟ ನಡೆಸಿದ್ದು. ಜಾಗೆ ನೋಡಿ ಗುರುತಿಸುವವರೆಗೂ ತಾತ್ಕಾಲಿಕವಾಗಿ ಇರುವ ವ್ಯವಸ್ಥೆಯಲ್ಲಿಯೇ (ಪರಿಹಾರ ಕೇಂದ್ರದಲ್ಲಿ) ವಾಸಿಸುವಂತೆ ಸೂಚನೆ ನೀಡಿದ್ದಾರೆ. ಆದರೆ, ಜಲಾವೃತವಾದ ಪ್ರದೇಶದಲ್ಲಿ ನೀರು ಇಳಿಮುಖವಾದರೂ ಜನತೆ ವಾಸವಿರುವುದಿಲ್ಲ ಎನ್ನುವ ನೆಪವಿಟ್ಟು ಸ್ವಚ್ಛತೆಗೆ ಮುಂದಾಗದಿದ್ದಲ್ಲಿ ಆಮಲಿನ ಪ್ರದೇಶ ಇಡಿ ಊರಿನ ಜನರ ನೆಮ್ಮದಿ ಕಸಿಯಲು ಸಾಧ್ಯವಾಗುತ್ತದೆ. ಆ ಪ್ರದೇಶದಲ್ಲಿ ಜನ ವಾಸಿಸದಿದ್ದರೂ ಸ್ವಚ್ಛತೆ ಕಾರ್ಯ ಮಾತ್ರ ಅಚ್ಚುಕಟ್ಟಾಗಿ ನಡೆಯಬೇಕು ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.
ಫಾಗಿಂಗ್‌ಗೆ ಹುಳು ಸಾಯುತ್ತವೆಯೇ?: ಅಷ್ಟಕ್ಕೂ ಈ ಫಾಗಿಂಗ್ ಕಾರ್ಯ ನಡೆಸುವುದರಿಂದ ಹುಳು ಸಾಯುತ್ತವೆ ಎನ್ನುವುದೇ ಹೆಚ್ಚು. ಆದರೆ, ಬಹುತೇಕ ಹೆಚ್ಚು ಶಕ್ತಿಯುವಾಗಿರುವ ಹುಳು ಫಾಗಿಂಗ್‌ನಿಂದ ತಪ್ಪಿಸಿಕೊಳ್ಳಲು ಆ ಪ್ರದೇಶ ಬಿಟ್ಟು ಹೋಗುತ್ತವೆ. ಇನ್ನೂ ವೃದ್ಧ ಹುಳುಗಳ ಶಕ್ತಿ ಕುಂದಿದ ಪರಿಣಾಮ ಫಾಗಿಂಗ್‌ಗೆ ಬಲಿಯಾಗುತ್ತವೆ. ಒಟ್ಟಾರೆ ಫಾಗಿಂಗ್ ಕಾರ್ಯ ಮಾಡುವ ಸ್ಥಳೀಯ ಸಂಸ್ಥೆಗಳು ಅದರಲ್ಲಿ ಬಿಡುವ ರಾಸಾಯನ ಅಂಶದ ಕುರಿತು ಹೆಚ್ಚಿನ ನಿಗಾ ವಹಿಸುವುದು ಅವಶ್ಯಕವಾಗಿದೆ ಎನ್ನುತ್ತಾರೆ ನಾಗರಿಕರು.
ನಿಡಗುಂದಿ: ಪ್ರವಾಹ ಪೀಡಿತ ಹೊಳೆ ಮಸೂತಿಯಲ್ಲಿ ಗ್ರಾಪಂದಿಂದ ಫಾಗಿಂಗ್ ಮಾಡುತ್ತಿರುವುದು. ಹೊಳೆ ಮಸೂತಿಯಲ್ಲಿ ಪ್ರವಾಹ ಇಳಿಕೆಯಾದ ಪ್ರದೇಶದಲ್ಲಿ ನಡೆದಿರುವ ಸ್ವಚ್ಛತಾ ಕಾರ್ಯ.
•ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.