ಗುರಿ ಸಾಧನೆಗೆ ವಿಶ್ವಾಸ ಅಗತ್ಯ
Team Udayavani, Sep 23, 2018, 3:18 PM IST
ವಿಜಯಪುರ: ಪ್ರತಿಯೊಬ್ಬರಿಗೂ ಜೀವನದಲ್ಲಿ ನಿದಿಷ್ಟ ಗುರಿ ಇರಬೇಕು, ಅದರ ಸಾಧನೆಗೆ ದೃಢವಾದ ನಂಬಿಕೆ ಇರಬೇಕು. ಆಗಲೇ ಗುರಿ ಸಾಧನೆ ಮಾಡಿಕೊಳ್ಳಲು ಸಾಧ್ಯ ಎಂದು ಮಿಸ್ ಇಂಡಿಯಾ ಸೂಪರ್ ಟ್ಯಾಲೆಂಟ್ 2018ರ ವಿಜೇತೆ ಐಶ್ವರ್ಯ ಪೋರವಾಲ ಹೇಳಿದರು.
ತಾನು ಶಿಕ್ಷಣ ಪಡೆದ ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಆಸಕ್ತಿದಾಯಕ ಕ್ಷೇತ್ರವನ್ನೇ ಆಯ್ದುಕೊಳ್ಳಬೇಕು. ನಿರಂತರ ಪ್ರಯತ್ನ ಮಾಡಬೇಕು ಮತ್ತು ಇದರ ಜೊತೆಗೆ ವಿದ್ಯಾಭ್ಯಾಸದ ಕಡೆಗೆ ಗಮನ ಕೊಡಬೇಕು ಅಂದಾಗ ಇಂತಹ ದೊಡ್ಡ ಸಾಧನೆ ಮಾಡಲು ಸಾಧ್ಯ ಎಂದರು.
ವಿಶ್ವಸುಂದರಿ ಮಾನಸಿ ಚಿಲ್ಲಾರ ಅವರನ್ನು ಸ್ಫೂರ್ತಿ ಹಾಗೂ ಪ್ರೇರಣೆಯಾಗಿಸಿಕೊಂಡ ನಾನು ಎಲ್ಲ ಹೆಣ್ಣು ಮಕ್ಕಳಂತೆ
ಮಾಡ್‌ಲಿಂಗ್ ಬಗ್ಗೆ ಕನಸು ಕಂಡಿದ್ದೆ. ಆದರೆ ಮನೆಯಲ್ಲಿ ಒಪ್ಪಿಗೆ ನೀಡಿರಲಿಲ್ಲ. ಮಾಡ್‌ಲಿಂಗ್ ಕ್ಷೇತ್ರದ ಮಹತ್ವದ
ಕುರಿತು ಮನವರಿಕೆ ಮಾಡಿಕೊಡುವ ಮೂಲಕ ನಾನು ನನ್ನ ಗುರಿ ಸಾಧನೆ ಮಾಡಿದ್ದೇನೆ ಎಂದರು.
ಡಾ| ಸುರೇಶ ಬಿರಾದಾರ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣ ಮಾಡುತ್ತಾರೆ. ಅಂತಹ
ಶಿಕ್ಷಕರು ತಮ್ಮ ವ್ಯಕ್ತಿತ್ವವನ್ನು ಹಾಳು ಮಾಡಿಕೊಳ್ಳಬಾರದು. ಒಂದು ವೇಳೆ ಹಾಳು ಮಾಡಿಕೊಂಡರೆ ಸಮಾಜಕ್ಕೆ ಬಹಳ
ನಷ್ಟವಾಗುತ್ತದೆ. ನಮ್ಮಲ್ಲಿರುವ ಜ್ಞಾನವನ್ನು ಇತರರಿಗೆ ಹಂಚಿಕೊಂಡರೆ ಜ್ಞಾನ ಹೆಚ್ಚಾಗುತ್ತದೆ ಎಂದರು.
ಜ್ಞಾನದ ಜೊತೆಗೆ ಕೌಶಲ್ಯ ಇರುವುದು ಬಹಳ ಮುಖ್ಯ. ಕೌಶಲ್ಯ ಇದ್ದರೆ ಮಾತ್ರ ನಮ್ಮ ಜ್ಞಾನವನ್ನು ಸರಿಯಾಗಿ
ಉಪಯೋಗಿಸಿಕೊಂಡಲ್ಲಿ ಒಳ್ಳೆ ಭವಿಷ್ಯ ನಿರ್ಮಾಣ ಮಾಡಿಕೊಳ್ಳಬಹುದು ಎಂದರು. ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಪ್ರೊ|
ಶೀಲಾ ಬಿರಾದಾರ ಮಾತನಾಡಿದರು. ವಿದ್ಯಾರ್ಥಿನಿಯಾದ ನಮೃತಾ ಬಿರಾದಾರ, ಆಚಲ್ ಪಾಟೀಲ, ಆಚಲ್ ಜೈನ್
ತಮ್ಮ ಶಾಲಾ ಅನುಭವಗಳನ್ನು ಹಂಚಿಕೊಂಡರು.
ಪ್ರಾಚಾರ್ಯ ಪ್ರೊ| ಚಂದನಗೌಡ ಮಾಲಿಪಾಟೀಲ, ಮೊಹ್ಮದ್ ಇಲಿಯಾಸ್, ಆನಂದ ಕೋರಿಕಂತಿಮಠ, ಪ್ರವೀಣಕುಮಾರ ಗೆಣ್ಣೂರ, ಎ.ಎಚ್. ಸಗರ, ಭಾರತಿ ಪಾಟೀಲ, ದೀಪಾ ತಿಳಿಗೂಳ, ಶ್ರೀದೇವಿ ಜೋಳದ, ಮೀನಾಕ್ಷಿ
ಹಿಪ್ಪರಗಿ, ಸುರೇಖಾ ಪಾಟೀಲ, ಅನಿತಾ ದೇಸಾಯಿ, ವಿವೇಕ್ ವೈಶಂಪಾಯನ, ರೇಣುಕಾ ಕಡೆಮನಿ, ಕಾಶೀನಾಥ ಅವಟಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
R Ashwin: ಅಶ್ವಿನ್‌ಗೆ ಖೇಲ್ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ
Virat Kohli: ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ವಿರಾಟ್ ನೂತನ ಕೇಶ ವಿನ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.